Connect with us


      




ದೇಶ

ಐಎಎಫ್ ಹೆಲಿಕಾಪ್ಟರ್ ಪತನ: ಸಿಡಿಎಸ್ ಬಿಪಿನ್ ರಾವತ್ ಸ್ಥಿತಿ ಗಂಭೀರ: 13 ಮಂದಿ ಸಾವು

Bindushree Hosuru

Published

on

ಕೂನೂರ್: ಡಿ, 8 (ಯುಎನ್ಐ) ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಜನರಿದ್ದ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಕೂನೂರ್ ಬಳಿ ಪತನಗೊಂಡಿದೆ. ಈ ಘಟನೆಯಲ್ಲಿ ಇದೀಗ 13 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಿಡಿಎಸ್ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸ್ಟಾಫ್ ಕಾಲೇಜಿಗೆ ರಾವತ್​​ ತೆರಳುತ್ತಿದ್ದರು. ಎಂಐ-17ವಿ5 ಹೆಲಿಕಾಪ್ಟರ್‌ನಲ್ಲಿ ರಾವತ್ ಅವರ ಪತ್ನಿ ಸೇರಿದಂತೆ 14 ಮಂದಿ ಇದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. 14 ಪ್ರಯಾಣಿಕರಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತದೇಹಗಳ ಗುರುತುಗಳನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಖಚಿತಪಡಿಸಲಾಗುವುದು ಎಂದು ಮೂಲಗಳನ್ನು ತಿಳಿಸಿವೆ.

ಕೂನೂರ್ ಮೂಲಕ ಊಟಿಗೆ ತೆರಳುವ ವಾಹನಗಳನ್ನು ಮೆಟ್ಟುಪಾಳ್ಯಂನಲ್ಲಿ ನಿಲ್ಲಿಸಿ ಕೊತ್ತಗಿರಿ ಮಾರ್ಗವಾಗಿ ತಿರುಗಿಸಲಾಗುತ್ತಿದೆ.

ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ಪತನದ ಘಟನೆಯ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿವರಿಸಿದರು.

Share