Connect with us


      




ಸಾಮಾನ್ಯ

ಬಿಸಿಸಿಐಗೆ ನಾನು ಬಾಸ್..ಅನವಶ್ಯಕ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ: ಗಂಗೂಲಿ 

UNI Kannada

Published

on

ಮುಂಬೈ: ಫೆಬ್ರವರಿ 04 (ಯು.ಎನ್.ಐ.) ಕೊಹ್ಲಿ ಏಕದಿನ ನಾಯಕತ್ವದಿಂದ ವಜಾಗೊಂಡ ನಂತರ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಸುದ್ದಿಯಲ್ಲಿದ್ದಾರೆ. ಗಂಗೂಲಿಯನ್ನು ಟಾರ್ಗೆಟ್ ಮಾಡುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಗಂಗೂಲಿ ಬಿಸಿಸಿಐ ನಿಯಮಗಳನ್ನು ಉಲ್ಲಂಘಿಸಿ ಆಯ್ಕೆ ಸಮಿತಿಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಆಯ್ಕೆ ಸಮಿತಿಯ ಸದಸ್ಯರೊಂದಿಗೆ ಗಂಗೂಲಿ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರನ್ನು ಭೇಟಿಯಾಗಿರುವ ಫೋಟೋ ಎಲ್ಲೆಡೆ ವೈರಲ್ ಆಗಿತ್ತು.

ಈ ಸುದ್ದಿಗೆ ಬಿಸಿಸಿಐ ಮುಖ್ಯಸ್ಥ ಗಂಗೂಲಿ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. “ನಾನು ಬಿಸಿಸಿಐ ಮುಖ್ಯಸ್ಥ. ಇಂತಹ ಸುಳ್ಳು ಸುದ್ದಿಗಳಿಗೆ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ” ಎಂದು ಗಂಗೂಲಿ ಹೇಳಿದರು. ಬಿಸಿಸಿಐ ಬಾಸ್ ಆಗಿ ನನ್ನ ಕೆಲಸವೇನೆಂದು ನನಗೆ ಗೊತ್ತು ಇದೀಗ ಅದೇ ರೀತಿ ಮಾಡುತ್ತಿದ್ದೇನೆ. ಆಯ್ಕೆ ಸಮಿತಿ ಸಭೆಯಲ್ಲಿ ನನ್ನ ಫೋಟೋ ಇಟ್ಟು ನಿಯಮ ಉಲ್ಲಂಘಿಸಲಾಗಿದೆ ಎಂದು ಮನಬಂದಂತೆ ಸುದ್ದಿ ಬರೆದಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಕಾರ್ಯದರ್ಶಿ ಜೈ ಶಾ ಮತ್ತು ವಿರಾಟ್ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ನಾನು ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದೆ ಎಂದು ಹೇಗೆ ಹೇಳುತ್ತೀರಿ? ಎಲ್ಲೋ ಸಭೆ ನಡೆಸಿ ಹೊರಗೆ ತೆಗೆದ ಫೋಟೊ ಅಂತ ತಿಳಿಕೊಳ್ಲೂ ಆಗುವುದಿಲ್ಲವೇ? ಆದರೂ ಇಂತಹ ಹುಚ್ಚು ಆರೋಪಗಳ ನನಗೆ ಅಗತ್ಯವಿಲ್ಲ. ಟೀಂ ಇಂಡಿಯಾ ಪರ 424 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ, ಯಾವ ನಿಯಮಗಳೇನು ಎಂಬುದು ನನಗೆ ಗೊತ್ತು ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Share