Connect with us


      




ದೇಶ

ರೈಲಿನಲ್ಲಿ ಲಗೇಜ್ ಕಳೆದು ಹೋದ್ರೆ ಏನು ಮಾಡಬೇಕು?

Iranna Anchatageri

Published

on

ಮುಂಬೈ : ಜನೆವರಿ 11 (ಯು.ಎನ್.ಐ.) ಈಗ ರೈಲಿನಲ್ಲಿ ಚಿಂತೆ ಇಲ್ಲದೆ ಪ್ರಯಾಣ ಮಾಡಬಹುದು. ಏಕೆಂದರೆ ಇಂಡಿಯನ್ ರೈಲ್ವೆ ನೂತನ ಸೇವೆಯೊಂದನ್ನು ಜಾರಿಗೆ ತಂದಿದ್ದು, ಅದರಲ್ಲಿ ಕಳೆದುಹೋಗಿರುವ ಲಗೇಜ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಪಶ್ಚಿಮ ರೈಲ್ವೆಯು ಆರ್‌ಪಿಎಫ್ ಪಡೆಯೊಂದಿಗೆ ‘ಮಿಷನ್ ಅಮಾನತ್’ ಸೇವೆಯನ್ನು ಪ್ರಯಾಣಿಕರಿಗಾಗಿ ಜಾರಿಗೆ ತಂದಿದೆ. ಇನ್ನು ಮುಂದೆ ರೈಲ್ವೇ ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ತಮ್ಮ ವಸ್ತುಗಳ ಬಗ್ಗೆ ಚಿಂತೆ ಮಾಡಬೇಕಿಲ್ಲ. ಈ  ಹೊಸ ಉಪಕ್ರಮದ ಅಡಿಯಲ್ಲಿ, ಪ್ರಯಾಣಿಕರು ತಮ್ಮ ಕಳೆದುಹೋದ ಲಗೇಜ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದು ಹಾಗೂ ಮರಳಿ ಪಡೆಯಬಹುದಾಗಿದೆ. ಇನ್ಮುಂದೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ಹಾಗೂ ಅವರ ಲಗೇಜ್ ಬಗ್ಗೆ ಕಣ್ಣಿಡಲಿದೆ.

ಪಶ್ಚಿಮ ರೈಲ್ವೇ ತನ್ನ ಟ್ವೀಟ್‌ನಲ್ಲಿ, ಪ್ರಯಾಣಿಕರು ಕಳೆದುಕೊಂಡ ಲಗೇಜ್ ಅನ್ನು ಮರಳಿ ಪಡೆಯಲು ಸುಲಭವಾಗುವಂತೆ ಪಶ್ಚಿಮ ರೈಲ್ವೆಯ ಆರ್‌ಪಿಎಫ್ ಹೊಸ ಸೇವೆ ಆರಂಭಿಸಿದೆ. ಮಿಷನ್ ಅಮಾನತ್ ಅಡಿಯಲ್ಲಿ ಕಳೆದು ಹೋದ ಸಾಮಾನು ಸರಂಜಾಮುಗಳ ವಿವರಗಳನ್ನು ಛಾಯಾಚಿತ್ರಗಳೊಂದಿಗೆ ಪಶ್ಚಿಮ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಪ್ರಯಾಣಿಕರು ಮಿಷನ್ ಅಮಾನತ್-ಆರ್‌ಪಿಎಫ್ ವೆಬ್‌ಸೈಟ್ ನ (http://wr.indianrailways.gov.in) ಗೆ ಪ್ರಯಾಣಿಕರು ಭೇಟಿ ನೀಡಿ, ಅಲ್ಲಿ ಪೋಸ್ಟ್ ಮಾಡಲಾದ ಲಗೇಜ್ ಫೋಟೋಗಳ ಜೊತೆಗೆ ಪರಿಶೀಲನೆ ಮಾಡಿ, ಹಿಂಪಡೆಯಬಹುದಾಗಿದೆ.

2.58 ಕೋಟಿ ಮೌಲ್ಯದ ಸರಕು ಪ್ರಯಾಣಿಕರಿಗೆ ವಾಪಸ್

ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, 2021 ರ ಜನವರಿಯಿಂದ ಡಿಸೆಂಬರ್ ವರೆಗೆ ಪಶ್ಚಿಮ ರೈಲ್ವೆ ವಲಯ ಒಟ್ಟು 1,317 ರೈಲ್ವೆ ಪ್ರಯಾಣಿಕರಿಗೆ ಸೇರಿದ್ದ 2.58 ಕೋಟಿ ರೂಪಾಯಿ ಮೌಲ್ಯದ ಕಳೆದು ಹೋದ ಲಗೇಜ್ ಗಳನ್ನು ಹಿಂದಿರುಗಿಸಿದೆ. ರೈಲ್ವೆ ಅಧಿಕಾರಿಗಳು ಲಗೇಜ್ ಗಳನ್ನು ಕಳೆದುಕೊಂಡ ಮಾಲೀಕರಿಂದ ಸರಿಯಾದ ಮಾಹಿತಿ ಪಡೆದ ಕೊಂಡ ಬಳಿಕವಷ್ಟೇ ಬ್ಯಾಗುಗಳನ್ನು ವಾಪಸ್ ನೀಡುತ್ತಾರೆ.

Share