Connect with us


      




ರಾಜಕೀಯ

ಪಾತ್ರಧಾರಿಗಳು ಗೊತ್ತಿಲ್ಲವಾದರೆ  ಅಧಿಕಾರ  ಬಿಟ್ಟುಬಿಡಿ   

UNI Kannada

Published

on

ಬೆಂಗಳೂರು, ನ 15 (ಯುಎನ್ಐ)  ಬಿಟ್ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವವರ  ಹೆಸರು ಮತ್ತು ಪಾತ್ರ, ನಿಜವಾದ ಫಲಾನುಭವಿಗಳು   ಯಾರು  ಎಂಬುದು   ಗೊತ್ತಿಲ್ಲವಾದರೆ ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ಅಧಿಕಾರ ಬಿಟ್ಟು ನಡೆಯಲಿ   ಎಂದು  ವಿರೋಧ ಪಕ್ಷದ ನಾಯಕ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ  ಮಾತನಾಡಿದ ಅವರು ಕಳೆದ   2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದೆ  ನಿಜ. . ಬಿಟ್ಕಾಯಿನ್ ಹಗರಣ ಬಗ್ಗೆ ತನಿಖೆ ನಡೆಸುವಂತೆ  ಯಾರೂ ದೂರು ಕೊಟ್ಟಿರಲಿಲ್ಲ  ಪ್ರಕರಣ  ದಾಖಲಾಗದೆ ನಮಗೆ ವಿಷಯ,  ವಿಚಾರ ಹೇಗೆ ತಿಳಿಯಲಿದೆ ಎಂದು   ಪ್ರಶ್ನೆ ಮಾಡಿದರು.

ಆಗ  ಬಿಜೆಯವರಿಗೆ ಗೊತ್ತಿದ್ದರೆ ಅವರು  ಯಾಕೆ ಸುಮ್ಮನಿದ್ದರು? ಆಗ ಜವಾಬ್ದಾರಿಯುತ ವಿಪಕ್ಷ ಸ್ಥಾನದಲ್ಲಿದ್ದವರು ಅದನ್ನು ಬಹಿರಂಗ  ಪಡಿಸಬೇಕಿತ್ತು.ಆಗ ಮೌನವಾಗಿ ಈಗ ಕುತ್ತಿಗೆ ಬರುತ್ತದೆ ಎಂದಾಗ   ಬಿಜೆಪಿ ನಾಯಕರು ಹತಾಶೆ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

ಬಿಜೆಪಿ  ನಾಯಕರ ಪ್ರಶ್ನೆಗೆ  ನಾವು ಉತ್ತರ ನೀಡುವ ಮೊದಲುಕಾಂಗ್ರೆಸ್ ವಕ್ತಾರ  ರಣದೀಪ್‌ ಸುರ್ಜೇವಾಲ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಲಿ ಎಂದು ಸವಾಲು  ಹಾಕಿದರು.

ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆಗ ಯಾವುದೇ ಬಿಟ್‌ಕಾಯಿನ್ ಪ್ರಕರಣದ ಮಾತು ಕೇಳಿಬಂದಿರಲಿಲ್ಲ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ನಡೆದಿರುವ ಪ್ರಕರಣವಿದು. ಈ .ಪ್ರಕರಣದಲ್ಲಿ  ಯಾರು ಭಾಗಿಯಾಗಿದ್ದಾರೆ ಎಂಬ ಸತ್ಯ ಸಂಗತಿಯನ್ನು ಹಾಲಿ ಸಿಎಂ ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯ   ಸವಾಲು ಹಾಕಿದ್ದಾರೆ.

Share