Connect with us


      




ಕರ್ನಾಟಕ

ಪಠ್ಯದಲ್ಲಿ ಕನಕದಾಸರ ಜೀವನ ಚರಿತ್ರೆ ಕಡೆಗಣನೆ – ಸಿಎಂಗೆ ಮನವಿ

Iranna Anchatageri

Published

on

ಬೆಂಗಳೂರು: ಜೂನ್ 27 (ಯು.ಎನ್.ಐ.) (Update) ಪಠ್ಯ ಪುಸ್ತಕದಲ್ಲಿ ಕನಕದಾಸರ ಜೀವನ ಚರಿತ್ರೆ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಗಿನೆಲೆ ಗುರುಪೀಠದ ನಿರಂಜನಂದಪುರಿ ಶ್ರೀಗಳು ಮುಖ್ಯಮಂತ್ರಿಗಳನ್ನು ಇಂದು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

9ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಒಂದು ಪುಟದಲ್ಲಿದ್ದ ಕನಕದಾಸರ ಪಠ್ಯ ಭಾಗವನ್ನು ಕೇವಲ ಒಂದೇ ಸಾಲಿಗೆ ತಂದು, ಕಡಿತಗೊಳಿಸಲಾಗಿದೆ. ಈ ಮೂಲಕ ಕನಕದಾಸರ ಆದರ್ಶ ಮತ್ತು ದಾರ್ಶನಿಕ ಸತ್ಯಗಳನ್ನು ಮರೆಮಾಚುವ ದೊಡ್ಡ ಹುನ್ನಾರ ನಡೆದಿದೆ. ಹಿಂದುಳಿದ ಸಮಾಜವನ್ನು ಒಳಗೊಂಡಂತೆ ಈ ನೆಲದ ನಾಡು-ನುಡಿಗೆ ಮಾಡಿದ ದ್ರೋಹ ಮಾಡಲಾಗಿದೆ.

ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸತ್ಯಗಳನ್ನು ತಿರುಚುವ ಕುತಂತ್ರ ಖಂಡಿಸುತ್ತೇವೆ. ಹೀಗಾಗಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ, ಕನಕದಾಸರ ಜೀವನ ವಿವರಗಳ ವಿಸ್ತ್ರತ ನೈಜ ಸಂಗತಿಗಳನ್ನು ಹಿಂದಿನಂತೆ ಅಳವಡಿಸಬೇಕು. ಈ ಮೂಲಕ ಆಗಿರುವ ಲೋಪ ಸರಿಪಡಿಸಿ, ಸಾಮಾಜಿಕ ನ್ಯಾಯ ಒದಗಿಸುವಂತೆ ಶ್ರೀಗಳು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಇದೇ ವೇಳೆ ಮುಖ್ಯಮಂತ್ರಿಗಳು, ಕಡಿತಗೊಳಿಸಿರುವ ವಿಷಯವನ್ನು ಸರಿಪಡಿಸಲು ಕೂಡಲೇ ಸಂಬಂಧಪಟ್ಟ ಇಲಾಖೆಗೆ “ದಾಸಶ್ರೇಷ್ಠ ಕನಕದಾಸರ ಜೀವನ ಚರಿತ್ರೆಯನ್ನು ಈ ಹಿಂದೆ ಇದ್ದ ಹಾಗೆ ಪ್ರಕಟಣೆ ಮಾಡಬೇಕು” ಎಂದು ಇಲಾಖೆಗೆ ಆದೇಶ ನೀಡಿದರು..

Share