Published
1 week agoon
ನ್ಯೂಯಾರ್ಕ್: ಮೇ ೧೧ (ಯು.ಎನ್.ಐ.) ಹಾಲಿವುಡ್ ತಾರೆ ಹಿಲರಿ ಡಫ್ ಅವರು ಅಮೆರಿಕಾದ “ವುಮೆನ್ಸ್ ಹೆಲ್ತ್” ನಿಯತಕಾಲಿಕದ ಮುಖಪುಟಕ್ಕಾಗಿ ನಗ್ನವಾಗಿ ಪೋಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ನನ್ನ ದೇಹ ನನ್ನ ಹೆಮ್ಮೆ” ಎಂದು ಉದ್ಗರಿಸಿದ್ದಾರೆ.
ಪತ್ರಿಕೆಯ ಮೇ/ಜೂನ್ ಸಂಚಿಕೆಗಾಗಿ ಪೋಸ್ ನೀಡಿರುವ ೩೪ ವರ್ಷದ ಈ ತಾರೆ ತನ್ನ ದೇಹದ ಚಿತ್ರಣದೊಂದಿಗೆ ತಾನು ಸಾಗಿಬಂದ, ಸಾಗುತ್ತಿರುವ ಜೀವನ ಪಯಣದ ವಿವರ, ತನ್ನ ದೇಹವನ್ನು ತಾನು ಪ್ರೀತಿಸುವಲ್ಲಿ ಎದುರಿಸಿದ ಹೋರಾಟಗಳನ್ನು ಹಂಚಿಕೊಂಡಿದ್ದಾರೆ.
ತಾನು ೧೭ ವರ್ಷದವಳಿದ್ದಾಗ ವಿಪರೀತ ತಿನ್ನುವ ಅಸ್ವಸ್ಥತೆಗೆ ಒಳಗಾಗಿದೆ. ಈ ಸಂದರ್ಭದಲ್ಲಿ ದೇಹ ಅಂಕೆ ಮೀರಿ ಬೆಳೆದಿದ್ದು ಹಾಲಿವುಡ್ ಮಾನದಂಡಗಳಿಗೆ ಅನುಗುಣವಾಗಿಲ್ಲದೇ ಇದ್ದಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ಪತ್ರಿಕೆ ಅತ್ಯಂತ ಸುಂದರವಾದ ಮಹಿಳೆಯರ ಚಿತ್ರಗಳನ್ನು ಮುಖಪುಟದಲ್ಲಿ ಪ್ರಕಟಿಸಿದೆ. ತಾನು ಈ ಪತ್ರಿಕೆಯ ಮುಖಪುಟಕ್ಕಾಗಿ ಆಯ್ಕೆಯಾಗಿರುವುದು ತಾನು ಹೆಮ್ಮೆ ಪಡುವಂಥ ವಿಷಯವಾಗಿದೆ ಎಂದಿದ್ದಾರೆ.
ಮೂರು ಮಕ್ಕಳ ತಾಯಿಯಾದ ನಂತರವೂ ಹಿಲರಿ ಡಫ್ ತಮ್ಮ ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ತೋರಿಸುತ್ತಿರುವ ಶ್ರದ್ಧೆ, ಶ್ರಮ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಪತ್ರಿಕೆ ಮುಖಪುಟ ಪ್ರಕಟವಾದ ನಂತರ ಭಾರಿ ಪ್ರಶಂಸೆಯನ್ನೂ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಡಫ್ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಂದರ್ಶನದ ಕೊನೆಯ ಭಾಗದಲ್ಲಿ “ನಾನು ಈ ಫೋಟೋಗಳನ್ನು ತುಂಬಾ ಪ್ರೀತಿಸುತ್ತೇನೆ, ನಾನು ಸಂಪೂರ್ಣವಾಗಿ ದುರ್ಬಲ ಆದರೆ ಶಕ್ತಿಶಾಲಿ ಎಂದು ಭಾವಿಸಿದ ಸಮಯದಲ್ಲಿ ಒಂದು ಕ್ಷಣವನ್ನು ಸೆರೆಹಿಡಿದಿದ್ದಕ್ಕಾಗಿ ಧನ್ಯವಾದಗಳು.” ಎಂದಿದ್ದಾರೆ.
ಗಂಡು ಮಗುವಿನ ತಾಯಾದ ಸಂಜನಾ ಗಲ್ರಾನಿ
ರಿಮೇಕ್ ಆಗುತ್ತಿದೆ ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಅಭಿನಯದ ‘ಆನಂದ್’ ಚಿತ್ರ!
ಮಗಳಿಗೆ ಅದ್ಬುತ ಶುಭಾಶಯ ಕೋರಿದ ಪ್ರಿಯಾ ಕಿಚ್ಚ ಸುದೀಪ್
ಮಂದಣ್ಣ ಕುಟುಂಬ ಪರಿಚಯಿಸಿದ ನಟಿ ರಶ್ಮಿಕಾ ಮಂದಣ್ಣ; ಫೋಟೋ ವೈರಲ್
ತೆಲುಗು ನಟ ಆದಿ ಪಿನಿಶೆಟ್ಟಿ ಜೊತೆ ಸಪ್ತಪದಿ ತುಳಿದ ನಟಿ ನಿಕ್ಕಿ ಗಲ್ರಾನಿ
ಪುರುಷರಿಗಿಲ್ಲದ ಸೌಂದರ್ಯ ಮಾನದಂಡ ಮಹಿಳೆಯರಿಗೇಕೆ ? ರಮ್ಯ ಪ್ರಶ್ನೆ