Connect with us


      
ವಿದೇಶ

ಮತ್ತೆ ಕಾಶ್ಮೀರ ಕೆದಕಿದ ಇಮ್ರಾನ್ ಖಾನ್; ಪ್ರಧಾನಿ ಮೋದಿ ವಿರುದ್ಧ ಟೀಕೆ

Iranna Anchatageri

Published

on

ಹೊಸದಿಲ್ಲಿ, ಜನೆವರಿ 05 (ಯು.ಎನ್.ಐ.) ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಉತ್ತೇಜಿತ ಭಯೋತ್ಪಾದಕರ ಮೇಲೆ ಭಾರತೀಯ ಸೇನೆ ವಿಧ್ವಂಸಕ ದಾಳಿ ನಡೆಸುತ್ತಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಈ ಬೆನ್ನಲ್ಲೇ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರ ವಿಚಾರವನ್ನು ಕೆದಕಿದ್ದಾರೆ. ಹಾಗೂ ಪಿಎಂ ನರೇಂದ್ರ ಮೋದಿ ಬಗ್ಗೆ ಟೀಕೆ ಮಾಡಿದ್ದಾರೆ.

ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಕಾಶ್ಮೀರದ ಜನಾಭಿಪ್ರಾಯ ಸಂಗ್ರಹಣೆ ನಡೆಸುವುದಾಗಿ ಭದ್ರತಾ ಮಂಡಳಿ ಭರವಸೆ ನೀಡಿತ್ತು. ಆದರೆ, ಈ ಭರವಸೆ ಇನ್ನೂ ಈಡೇರಿಲ್ಲ. ಮೋದಿ ಸರ್ಕಾರವು ಭದ್ರತಾ ಮಂಡಳಿಯ ನಿರ್ಣಯಗಳನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದೆ ಮತ್ತು ಕಾಶ್ಮೀರದಲ್ಲಿ ಜನಸಂಖ್ಯೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, “ಕಾಶ್ಮೀರದಲ್ಲಿ ವಿಶ್ವಸಂಸ್ಥೆಯ ಮೇಲ್ವಿಚಾರಣೆಯ ಜನಾಭಿಪ್ರಾಯ ಸಂಗ್ರಹ ಅಪೂರ್ಣವಾಗಿದೆ. ಹಿಂದುತ್ವ ಮೋದಿ ಸರ್ಕಾರವು UNSC ನಿರ್ಣಯಗಳು, ಅಂತರಾಷ್ಟ್ರೀಯ ಮಾನವೀಯ ಕಾನೂನುಗಳು ಮತ್ತು ನಾಲ್ಕನೇ ಜಿನೀವಾ ಕನ್ವೆನ್ಷನ್ ಸೇರಿದಂತೆ ಅಂತರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ. ಕಾಶ್ಮೀರದ ಪರಿಸ್ಥಿತಿ ಮತ್ತು ಅಲ್ಲಿನ ಜನರನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವಾಗ ಯುದ್ಧ ಅಪರಾಧ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಪಾಕಿಸ್ತಾನದ ಪ್ರಧಾನಿ, “ಅಂತಾರಾಷ್ಟ್ರೀಯ ಭ್ರಾತೃತ್ವ, ಕಾಶ್ಮೀರದಲ್ಲಿ ಭಾರತದ ದಾಳಿ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕಾಶ್ಮೀರಿಗಳು ಭಾರತವನ್ನು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಪಾಕಿಸ್ತಾನವು ನ್ಯಾಯಯುತ ಕಾಶ್ಮೀರಿ ಹೋರಾಟಕ್ಕೆ ತನ್ನ ಬದ್ಧತೆಯನ್ನು ಹೊಂದಿದೆ.” ಎಂದು ಹೇಳಿದ್ದಾರೆ.

ಆದರೆ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಅದರಲ್ಲಿ ಹೊರಗಿನ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಭಾರತ ಯಾವಾಗಲೂ ಹೇಳುತ್ತಲೇ ಬಂದಿದೆ. ಆದರೆ, ಈ ವಿಚಾರ ಇಮ್ರಾನ್‌ ಖಾನ್ ಕಿವಿಗೆ ಕೇಳುತ್ತಿಲ್ಲ.

Share