Published
5 months agoon
By
Vanitha Jainಬೆಂಗಳೂರು,ಡಿಸೆಂಬರ್ 09(ಯು.ಎನ್.ಐ) ಒಮೈಕ್ರಾನ್ ಪಸರಿಸುವಿಕೆಯ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳುತ್ತಿರುವ ಸರ್ಕಾರ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳು ಎಲ್ಲರೂ ಒಂದೇ ಬಾರಿಗೆ ಊಟಕ್ಕೆ ಹೋಗುವಂತಿಲ್ಲ ಎಂದಿದೆ.
ಹಾಸ್ಟೆಲ್ಗಳಲ್ಲ್ಲಿ ಊಟಕ್ಕೆ ಎಲ್ಲಾ ವಿದ್ಯಾರ್ಥಿಗಳು ಸಾಮಾನ್ಯವಾಗಿ ಒಂದೇ ಸಮಯಕ್ಕೆ ಗುಂಪಾಗಿ ಹೋಗುವುದು ಸಾಮಾನ್ಯ. ಹೀಗೆ ಬೇರೆಬೇರೆ ಕಡೆಯಿಂದ ಬಂದು ಹಾಸ್ಟೆಲ್ಗಳಲ್ಲ್ಲಿ ಒಟ್ಟಿಗೆ ಗುಂಪಾಗಿ ಸೇರುವುದರಿಂದ ಸೋಂಕು ಹರಡುವುದನ್ನು ಗಮನಿಸಿರುವ ಸರ್ಕಾರ ಇಂತಹ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ.
ಈ ಬಗ್ಗೆ ಸೂಚನೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ವಿದ್ಯಾರ್ಥಿ ನಿಲಯಗಳಿಗೆ ಮಾರ್ಗಸೂಚಿ ನೀಡಲಾಗಿದ್ದು, ಎಲ್ಲರೂ ಒಂದೇ ಬಾರಿ ಊಟಕ್ಕೆ ಹೋಗದಂತೆ ಸೂಚಿಸಿದ್ದಾರೆ. ಹಾಸ್ಟೆಲ್ಗಳ ವಾರ್ಡನ್ಗಳು ಅಡುಗೆಯವರು ಎರಡು ಡೋಸ್ ವ್ಯಾಕ್ಸಿನ್ ಪಡೆದಿರಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಮೂರು ಜನರಿಗೆ ಕೋವಿಡ್ ಸೋಂಕು ಪಾಸಿಟಿವ್ ಕಂಡು ಬಂದಲ್ಲಿ ಅಂತಹ ಪ್ರದೇಶವನ್ನು ಕ್ಲಸ್ಟರ್ ಎಂದು ನಿರ್ಧರಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ವ್ಯಾಕ್ಸಿನ್ ಡ್ರೈವ್ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಚವರಿಂದ ಸಲಹೆಯನ್ನೂ ಪಡೆದಿದ್ದಾರೆ.
ಲಸಿಕೆ ಪಡೆಯದವರು ಕಂಡುಬAದಲ್ಲಿ ಅವರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು, ಕೇರಳದಲ್ಲಿ ಹೆಚ್ಚಿನ ಪ್ರಕರಣದಿಂದ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಸೋಂಕು ಇವೆಲ್ಲವನ್ನು ಪರಿಗಣಿಸಿ ಗಡಿಭಾಗಗಳಲ್ಲಿ ಕಟ್ಟೆಚ್ಚರ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಎರಡು ಡೋಸ್ ಕಡ್ಡಾಯಗೊಳಿಸಿರುವ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧರಿಸಿರುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ 191 ಹೊಸ ಕೋವಿಡ್ ಪ್ರಕರಣಗಳು ಪತ್ತೆ
ರಾಜ್ಯದಲ್ಲಿ 104 ಹೊಸ ಕೋವಿಡ್ ಪ್ರಕರಣಗಳು ಪತ್ತೆ: ಸಚಿವ ಕೆ. ಸುಧಾಕರ್
ಕೋವಿಡ್ ಹೆಚ್ಚಳ ಭೀತಿ: ಮಾಸ್ಕ್ ಕಡ್ಡಾಯಗೊಳಿಸಿದ ಕೇರಳ ಸರ್ಕಾರ
ಕೊರೋನಾ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ: ಮೋದಿ
ಕೋವಿಡ್ -19 ಪ್ರಕರಣಗಳು ಹೆಚ್ಚಳ: ಕಳೆದ 24 ಗಂಟೆಗಳಲ್ಲಿ 30 ಸಾವುಗಳು
ಕೋವಿಡ್ ಹೆಚ್ಚಳ: ದೆಹಲಿ ಸರ್ಕಾರ ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಏನು?