Connect with us


      
ಬೆಂಗಳೂರು

ಅನಂತ ಪ್ರೇರಣಾ ಕೇಂದ್ರ ಉದ್ಘಾಟನೆ

Kumara Raitha

Published

on

ಬೆಂಗಳೂರು: ಮೇ 06 (ಯು.ಎನ್.‌ಐ.) ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್ ಅವರ ಆದರ್ಶ ಮತ್ತು ಅವರು ನಡೆದು ಬಂದ ದಾರಿ ಕುರಿತು ನಾಗರಿಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ನಿರ್ಮಿಸಿರುವ ಅನಂತ ಪ್ರೇರಣ ಕೇಂದ್ರವನ್ನು ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶುಕ್ರವಾರ ಉದ್ಘಾಟಿಸಿದರು.
ಅದಮ್ಯ ಚೇತನ ಸಂಸ್ಥೆಯಿಂದ ನಿರ್ಮಿಸಲಾಗಿರುವ ಅನಂತ ಪ್ರೇರಣ ಕೇಂದ್ರವನ್ನು ರಾಜ್ಯಪಾಲರು ಉದ್ಘಾಟಿಸಿ, ದಿವಂಗತ ಅನಂತಕುಮಾರ್ ಅವರ ಜೀವನ ಚರಿತ್ರೆ, ನಡೆದ ಬಂದ ಹಾದಿ, ವ್ಯಕ್ತಿತ್ವ ಮಾಹಿತಿಯನ್ನೊಳಗೊಂಡ ಸಂಗ್ರಹಾಲಯ ಮತ್ತು ಸಂಗ್ರಹಾಲಯದ ಮುಂಭಾಗದಲ್ಲಿ ಅನಂತಕುಮಾರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ನಂತರ ಕಾರ್ಯಕ್ರಮದಲ್ಲಿ ದಿವಂಗತ ಅನಂತಕುಮಾರ್ ಅವರೊಂದಿಗೆ ಇದ್ದ ಸ್ನೇಹದ ಬಗ್ಗೆ ಸ್ಮರಿಸಿದ ಗೌರವಾನ್ವಿತ ರಾಜ್ಯಪಾಲರು. ಮಧ್ಯಪ್ರದೇಶದಲ್ಲಿ ನಾನು ಯುವಮೋರ್ಚಾದ ನಾಯಕನಾಗಿದ್ದಾಗ ಅನಂತಕುಮಾರ್ ಅವರ ಬಗ್ಗೆ ಬಹಳ ಪ್ರಶಂಸನೀಯ ಮಾತುನಗಳನ್ನಾ ಕೇಳುತ್ತಿದ್ದೆ. 1996ರಲ್ಲಿ ಸಂಸದರಾಗಿ ಆಯ್ಕೆಯಾಗಿ ಸಂಸತ್ತಿಗೆ ಹೋದಾಗ ಅನಂತಕುಮಾರ್ ಅವರು ಆಯ್ಕೆಯಾಗಿ ಬಂದಿದ್ದರು. ಅಂದಿನಿಂದ ಅವರು ನಿಧನರಾಗುವ ತನಕ ನಿರಂತರ ಸಂಪರ್ಕದಲ್ಲಿದ್ದೆವು. ದಿ.ಅನಂತಕುಮಾರ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಕೇಂದ್ರದ ಸಚಿವರಾಗಿದ್ದರು. ಸಂಸದನಾಗಿದ್ದಾಗ ನಾನು ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯ ಸಂಬಂಧಿಸಿದಂತೆ ಸಚಿವರಾಗಿದ್ದ ಅವರನ್ನು ಭೇಟಿಯಾದಾಗ ತ್ವರಿತವಾಗಿ ಅವರು ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡುವುದರ ಜೊತೆಗೆ ಖುದ್ದಾಗಿ ಮಧ್ಯಪ್ರದೇಶಕ್ಕೆ ಆಗಮಿಸಿ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದ್ದರು ಎಂದು ಹೇಳಿದರು.
ದಿವಂಗತ ಅನಂತ ಕುಮಾರ್ ಸದಾಕಾಲ ದೇಶ ಸೇವೆಯಲ್ಲಿ ತೊಡಗಿದ್ದರು. ಅವರ ಕರ್ತವ್ಯ ನಿಷ್ಠೆ ಪ್ರತಿಯೊಬ್ಬರಿಗೂ ಪ್ರೇರಣೆ. ನಗುಮೊಗದ ಅನಂತ್ ಜೀ ಅವರು, ಆರೋಗ್ಯ ಸರಿಯಿಲ್ಲದಿದ್ದರೂ, ಕರ್ತವ್ಯ ಪರಿಪಾಲನೆಯಲ್ಲಿ ಹಿಂದೇಟು ಹಾಕುತ್ತಿರಲಿಲ್ಲ. ಸದಾಕಾಲ ಕಾರ್ಯನಿರತವಾಗಿರುತ್ತಿದ್ದರು. ಕರ್ತವ್ಯ ನಿಷ್ಠೆ ಹಾಗೂ ಸದಾಕಾಲ ಚುರುಕಾಗಿರುತ್ತಿದ್ದ ಅನಂತ ಕುಮಾರ್ ಅವರು ಪ್ರತಿಯೊಬ್ಬರಿಗೂ ಪ್ರೇರಣೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದರಾದ ತೇಜಸ್ವಿ ಸೂರ್ಯ, ನಟಿ ತಾರ, ಶಾಸಕರು, ತೇಜಸ್ವಿನಿ ಅನಂತಕುಮಾರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Share