Connect with us


      




ದೇಶ

ಸಮಾಜವಾದಿ ಪಕ್ಷದ ನಿಕಟವರ್ತಿ ಅಜಯ್ ಚೌಧರಿ ಮೇಲೆ ಐಟಿ ದಾಳಿ

Vanitha Jain

Published

on

ನವದೆಹಲಿ: ಜನವರಿ 04(ಯು.ಎನ್.ಐ) ಸಮಾಜವಾದಿ ಪಕ್ಷದ ನಿಕಟವರ್ತಿ ಹಾಗೂ ರಿಯಲ್ ಎಸ್ಟೇಟ್ ಕಂಪನಿ ಎಸಿಇ ಗ್ರೂಪ್ ಪ್ರವರ್ತಕ ಅಜಯ್ ಚೌಧರಿ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆಯು ದಾಳಿ ನಡೆಸಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿ, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಇತರ ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಆಗ್ರಾದಲ್ಲಿ ಶೂಗಳ ವ್ಯಾಪಾರದಲ್ಲಿ ವ್ಯವಹರಿಸುವ ಕಂಪನಿಗಳಲ್ಲೂ ಶೋಧ ಮುಂದುವರೆದಿದೆ ಎಂದು ಆದಾಯ ತೆರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ, ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‍ಟಿ ಅಧಿಕಾರಿಗಳು ಹಲವಾರು ಉದ್ಯಮಿಗಳ ಮೇಲೆ ನಡೆಸುತ್ತಿರುವ ಶೋಧಗಳು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಎಸ್‍ಪಿ ನಡುವೆ ರಾಜಕೀಯ ದೋಷಾರೋಪಣೆಗೆ ಕಾರಣವಾಗಿವೆ.

ತೆರಿಗೆ ವಂಚನೆ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಅಲ್ಲದೇ ಬಿಲ್ಡರ್‍ನ ಹಣದ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಜೊತೆಗೆ ಬಿಲ್ಡರ್‍ನ ಹಾರ್ಡ್ ಡಿಸ್ಕ್ ಮತ್ತು ಡಿಜಿಟಲ್ ಉಪಕರಣಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಐಟಿ ತಂಡ ಹೇಳಿದೆ.

Share