Connect with us


      
ಕೃಷಿ

ಅಂತಾರಾಷ್ಟ್ರೀಯ ವೆಚ್ಚದ ಹೆಚ್ಚಳ; ಪೋಟ್ಯಾಷ್ ರಸಗೊಬ್ಬರದಲ್ಲಿ ಕೊಂಚ ಏರಿಕೆ

Published

on

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಪೋಟ್ಯಾಷ್ ರಸಗೊಬ್ಬರ ಬೆಲೆ ಏರಿಕೆಯಾಗಿದೆ‌

ಬೆಂಗಳೂರು: ಜನೆವರಿ 10 (ಯು.ಎನ್.ಐ.) ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾವಸ್ತುಗಳ‌‌ ಬೆಲೆ ಏರಿಕೆಯಿಂದಾಗಿ ಬಂದರಿನಲ್ಲಿ ರಸಗೊಬ್ಬರ ನಿರ್ವಹಣಾ ವೆಚ್ಚ ಹೆಚ್ಚಾದ ಕಾರಣ ಪೋಟ್ಯಾಷ್ ರಸಗೊಬ್ಬರಗಳ ಬೆಲೆ ಕೊಂಚ ಏರಿಕೆಯಾಗಿದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ಎಮ್.ಒ.ಪಿ ರಸಗೊಬ್ಬರದ ಪರಿಷ್ಕೃತ ಗರಿಷ್ಕೃ ಮಾರಾಟ ಬೆಲೆ ಪ್ರತಿ ಚೀಲಕ್ಕೆ ರೂ . 1700 ದೇಶದಲ್ಲಿ ಶೇಕಡ 100 ರಷ್ಟು ಎಮ್.ಒ.ಪಿ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತಿದ್ದು ರಸಗೊಬ್ಬರದ ಗರಿಷ್ಠ ಮಾರಾಟ ದರವನ್ನು ಸರಬರಾಜು ಸಂಸ್ಥೆಗಳಿಂದಲೇ ನಿಗಧಿ ಪಡಿಸಲಾಗುತ್ತದೆ . ಕಳೆದ ನಾಲ್ಕು ತಿಂಗಳುಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದಂತೆ ಎಮ್.ಒ.ಪಿ ರಸಗೊಬ್ಬರದ ಬೆಲೆಯು ಸಹ ಏರಿಕೆಯಾಗಿರುತ್ತದೆ.ಇದರಿಂದ ಎಮ್.ಒ.ಪಿ ರಸಗೊಬ್ಬರದ ಸರಬರಾಜಿನಲ್ಲಿ ವ್ಯತ್ಯಯವಾಗಿರುತ್ತದೆ .

ಆದಾಗ್ಯೂ ಇಂಡಿಯನ್ ಪೊಟ್ಯಾಷ್ ಲಿಮಿಟೆಡ್ ಸಂಸ್ಥೆಯು ಅಂತಾರಾಷ್ಟ್ರೀಯ ಸರಬರಾಜುದಾರರೊಂದಿಗೆ ಎಮ್.ಒ.ಪಿ ರಸಗೊಬ್ಬರ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿರುತ್ತದೆ . ಪ್ರಸ್ತುತವಿರುವ ರಸಗೊಬ್ಬರದ ವಿನಿಮಯ ದರ , ಹೊಸ ಆಮದು ಬೆಲೆ , ಕಸ್ಟಮ್ಸ್ ಸುಂಕ ಹಾಗೂ ಜಿ.ಎಸ್.ಟಿ , ಬಂದರಿನಲ್ಲಿ ರಸಗೊಬ್ಬರದ ನಿರ್ವಹಣೆಯ ಇತರ ವೆಚ್ಚಗಳು ಸೇರಿ ಒಟ್ಟು ದರವು ಪ್ರತಿ ಟನ್ ಗೆ ರೂ . 40,147 ಎಂದು ನಿಗಧಿಪಡಿಸಲಾಗಿದೆ . ಇದರಲ್ಲಿ ಕೇಂದ್ರ ಸರ್ಕಾರವು ಪುತಿ ಟನ್ ಎಂ.ಒ.ಪಿ ಗೆ ನೀಡುವ ರಿಯಾಯಿತಿ ದರ ರೂ . 6,070 ಹೊರತು ಪಡಿಸಿದಲ್ಲಿ ಪ್ರತಿ ಟನ್ನಿನ ಮಾರಾಟ ದರವು ರೂ . 34,000 ಆಗುತ್ತದೆ . ಹಾಗಾಗಿ ಪ್ರತಿ ಚೀಲದ ದರವು ರೂ . 1700 ಆಗಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ.

ಕೃಷಿ

ಪೊಟ್ಯಾಷ್ ರಸಗೊಬ್ಬರ ದುಬಾರಿ

Published

on

ಬೆಂಗಳೂರು:ಜನೆವರಿ 09 (ಯು.ಎನ್.ಐ.) ರಾಜ್ಯದಲ್ಲಿ ಪೊಟ್ಯಾಷ್ ರಸಗೊಬ್ಬರ ದರ ದಿಢೀರೆಂದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ದರ ಏರಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಗೊಬ್ಬರದ ಕೊರತೆಯು ಉಂಟಾಗಿದೆ. ಪೊಟ್ಯಾಷ್ ಗೊಬ್ಬರ ಸಿಗದೆ ಕಬ್ಬು, ಬಾಳೆ, ತೆಂಗು, ಕಲ್ಲಂಗಡಿ ಬೆಳೆಗಾರರು ಕಂಗಾಲಾಗಿದ್ದಾರೆ.
ಕಳೆದ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ 50 ಕೆ.ಜಿ. ಪೊಟ್ಯಾಷ್‍ಗೆ 950-1050 ರೂ. ಇದ್ದುದು ದಿಢೀರ್ 1700 ರೂ. ಗೆ ಏರಿಕೆಯಾಗಿ ರೈತರನ್ನು ಕಂಗೆಡಿಸಿದೆ. ಒಂದೆಡೆ ಕೃಷಿ ಇಲಾಖೆಯು ರಸಗೊಬ್ಬರದ ಕೊರತೆಯಿಲ್ಲ ಎನ್ನುತ್ತಿದೆ. ಆದರೆ ಮಾರಾಟಗಾರರು ಪೊಟ್ಯಾಷ್ ಸ್ಟಾಕ್ ಇಲ್ಲ. ಇದಕ್ಕೆ ಬದಲಿಯಾಗಿ ಎಸ್‍ಒಪಿ (ಫಾಸ್ಪರಸ್ ಆಫ್ ಸಲ್ಫೇಟ್) ಯನ್ನು ಬಳಸಿ ಎಂದು ರೈತರಿಗೆ ಸಲಹೆ ನೀಡುತ್ತಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಡಿಎಪಿ, ಪೊಟ್ಯಾಷ್ ಮೊದಲಾದ ರಸಗೊಬ್ಬರಗಳ ಬೆಲೆಯಲ್ಲಿ ಶೇ.30ರವರೆಗೆ ಏರಿಕೆ ಮಾಡಲಾಗಿತ್ತು. ಇದನ್ನು ಸುಧಾರಿಸಿಕೊಳ್ಳುವ ಮುನ್ನವೇ ಪೊಟ್ಯಾಷ್ ದರ ಏರಿಕೆ ಮಾಡಲಾಗಿದೆ. ವರ್ಷಕ್ಕೆ ಎರಡು ಮೂರು ಬಾರಿ ರಸಗೊಬ್ಬರಗಳ ದರ ಹೆಚ್ಚಿಸಿದರೆ ಅನ್ನದಾತರು ಏನು ಮಾಡಬೇಕು ಎಂದು ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಇಳುವರಿಗೆ ಪೊಟ್ಯಾಷ್ ಬೇಕು :
ಕಬ್ಬು, ಬಾಳೆ, ತೆಂಗು, ಕಲ್ಲಂಗಡಿ, ಟೊಮ್ಯಾಟೊ ಸೇರಿದಂತೆ ನಾನಾ ಬೆಳೆಗಳಿಗೆ ಪೊಟ್ಯಾಷ್ ಬಳಸಿದರೆ ಉತ್ತಮ ಇಳುವರಿ ಬರಲಿದೆ. ಅದರಲ್ಲೂ ತೆಂಗು, ಬಾಳೆ, ಅಡಕೆ, ಮಾವು ಮತ್ತಿತರ ವಾಣಿಜ್ಯ ಬೆಳೆಗಳಿಗೆ ಸಕಾಲದಲ್ಲಿ ಪೊಟ್ಯಾಷ್ ಗೊಬ್ಬರ ಹಾಕದಿದ್ದರೆ ಗೊನೆ ಉತ್ತಮ ಫಸಲು ಸಿಗುವುದಿಲ್ಲ. ದುಬಾರಿ ಬೆಲೆ ಕೊಟ್ಟು ಖರೀದಿಸೋಣ ಎಂದರೆ ಬೆಂಗಳೂರು, ಮೈಸೂರು ಭಾಗಗಳಲ್ಲಿ ಎಲ್ಲಿ ಹುಡುಕಿದರೂ ಪೊಟ್ಯಾಷ್ ಖಾಲಿಯಾಗಿದೆ ಎನ್ನುತ್ತಿದ್ದಾರೆ ಎಂದು ತುಮಕೂರು ಭಾಗದ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

`ಟೊಮೇಟೊ ಹೂವು ಬಿಟ್ಟಿದೆ. ಇದೀಗ ಪೊಟ್ಯಾಷ್ ಹಾಕಬೇಕು. ಕಳೆದ ನಾಲ್ಕು ದಿನದಿಂದ ಹುಡುಕುತ್ತಿದ್ದೇನೆ. ಎಲ್ಲಿಯೂ ಸಿಗುತ್ತಿಲ್ಲ. ಬಹುತೇಕ ಮಾರಾಟಗಾರರು ಖಾಲಿಯಾಗಿದೆ. ಸ್ಟಾಕ್ ಇಲ್ಲ ಎನ್ನುತ್ತಿದ್ದಾರೆ’ ಎಂದು ಕೋಲಾರ ಜಿಲ್ಲೆ ಹೂವಳ್ಳಿಯ ರೈತ ಶ್ರೀನಿವಾಸ್ ಹೇಳುತ್ತಾರೆ.

ಆರು ತಿಂಗಳಲ್ಲಿ ದುಪ್ಪಟ್ಟು ಏರಿಕೆ

ಕೊರೊನಾ ಕಾರಣದಿಂದ ಕಬ್ಬಿಣ, ಪೇಪರ್, ಪ್ಲಾಸ್ಟಿಕ್ ಎಲ್ಲವೂ ದುಬಾರಿಯಾಗಿದೆ. ಆದರೆ ಇವುಗಳು ಶೇ.20-30ರಷ್ಟು ಏರಿಕೆಯಾಗಿವೆ. ಅದೇ ರಸಗೊಬ್ಬರಗಳ ದರ ಮಾತ್ರ ಶೇ.70-100ರಷ್ಟು ಏರಿಕೆ ಯಾಕೆ? ಕಳೆದ ಒಂದು ವರ್ಷದಿಂದೀಚೆಗೆ ಸಂಗ್ರಹದಲ್ಲಿ ಕೊರತೆ ಸೃಷ್ಟಿಸುತ್ತಾ ಒಂದೇ ವರ್ಷದಲ್ಲಿ ಪೊಟ್ಯಾಷ್‍ನ ದರದಲ್ಲಿ ಏಕಾಏಕಿ ದುಪ್ಪಟ್ಟು ಮಾಡಿರುವುದರ ಹಿಂದೆ ಕಮಿಷನ್‍ನ ದಂಧೆಯ ಅನುಮಾನ ಮೂಡುತ್ತಿದೆ ಎಂದು ಬಾಳೆ ಬೆಳೆಗಾರ ನವೀಶ್ ಸರಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಏರಿಕೆಗೆ ಕಾರಣವೇನು?

ಕಚ್ಚಾವಸ್ತುಗಳ ದರ ಏರಿಕೆಯಾದ ಹಿನ್ನೆಲೆಯಲ್ಲಿ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ದರ ಏರಿಕೆ ಮಾಡಲಾಗಿದೆ. ಚೀನಾ, ಆಫ್ರಿಕಾ, ದುಬೈ ಮತ್ತಿತರ ದೇಶಗಳಿಂದ ರಸಗೊಬ್ಬರದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಇದೀಗ ಕೋವಿಡ್‍ನಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಜತೆಗೆ ಶಿಪ್ ಕಂಟೈನರ್ ದರ ಕೂಡ ಏರಿಕೆಯಾಗಿದೆ. ಹೀಗಾಗಿ ಪೊಟ್ಯಾಷ್ ದರದಲ್ಲಿ ಏರಿಕೆಯಾಗಿದೆ. ಬೆಲೆ ಏರಿಕೆಯಾಗಿದ್ದರೂ, ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ರೈತರಿಗೆ ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಯಾಗುತ್ತಿದೆ. ಜನವರಿ ತಿಂಗಳಲ್ಲಿ ಎಲ್ಲಾ ಬಗೆಯ ರಸಗೊಬ್ಬರಗಳಿಗೆ ರೈತರಿಂದ 3 ಲಕ್ಷ ಮೆಟ್ರಿಕ್ ಟನ್‍ಗೂ ಅಧಿಕ ಬೇಡಿಕೆಯಿದ್ದು, ಕೇಂದ್ರ ಸರಕಾರ 3.45 ಲಕ್ಷ ಮೆಟ್ರಿಕ್ ಟನ್‍ಗೂ ಹೆಚ್ಚು ರಸಗೊಬ್ಬರಗಳನ್ನು ಪೂರೈಸಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ರೈತರ ಮಾತು
ಹಣ್ಣು, ತರಕಾರಿ, ವಾಣಿಜ್ಯ ಬೆಳೆಗಳು ಹಾಗೂ ಹೂವು ಸೇರಿದಂತೆ ಬಹುತೇಕ ಬೆಳೆಗಳಿಗೆ ಒಂದು ಅಥವಾ ಎರಡು ಬಾರಿ ಪೆÇಟ್ಯಾಷ್ ಹಾಕಲೇಬೇಕು. ಡಿಸೆಂಬರ್‍ನಲ್ಲಿ 50 ಕೆ.ಜಿ.ಯ ಬ್ಯಾಗ್‍ಗೆ 1,040-1050 ರೂ. ಇದ್ದುದು, ಇದೀಗ 1,700 ರೂ.ಗೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ಕಳೆದ ಒಂದು ವರ್ಷದ ಹಿಂದೆ ಪೊಟ್ಯಾಷ್‍ನ ಬೆಲೆ ಕೇವಲ 900-950 ರೂ. ಇತ್ತು. ಇದೀಗ ಸುಮಾರು ಒಂದು ಸಾವಿರ ರೂ.ನಷ್ಟು ಏರಿಕೆ ಮಾಡಲಾಗಿದೆ. ಅಷ್ಟು ಹಣ ಕೊಟ್ಟು ರಸಗೊಬ್ಬರ ಹಾಕಿ ಬೆಳೆ ಬೆಳೆದರೂ ಕೂಡ ನಮಗೆ ಬೆಲೆ ಸಿಗುತ್ತದೆ ಎಂಬ ಗ್ಯಾರಂಟಿಯೇ ಇಲ್ಲವಲ್ಲ. ಸರಕಾರ ಪೂರ್ವನಿಯೋಜಿತವಾಗಿಯೇ ರೈತರನ್ನು ನಾಶ ಮಾಡುತ್ತಿದೆ – ಬೈರೇಗೌಡ, ಕೊಮ್ಮಘಟ್ಟ

ಕೃಷಿ ಇಲಾಖೆ ಅಂಕಿ-ಅಂಶ
ಜನವರಿ ತಿಂಗಳ ರಸಗೊಬ್ಬರ ಹಂಚಿಕೆ (ಮೆ. ಟನ್‍ಗಳಲ್ಲಿ)
ಬೇಡಿಕೆ ಕೇಂದ್ರ ಸರಕಾರದ ಹಂಚಿಕೆ
ಡಿಎಪಿ 32,054 33,425
ಎಂಒಪಿ 23,316 23,500
ಕಾಂಪ್ಲೆಕ್ಸ್ 1,37,076 1,37,080
ಯೂರಿಯಾ 1,08,523 1,51,200
ಒಟ್ಟು 3,00,969 3,45,205

Continue Reading

ಕೃಷಿ

ಕರ್ನಾಟಕದ 30 ಎಫ್‌ಒಗಳಿಗೆ 1 ಕೋಟಿ 21ಲಕ್ಷಕ್ಕೂ ಹೆಚ್ಚಿನ ಅನುದಾನ ಬಿಡುಗಡೆ

Published

on

ಬೆಂಗಳೂರು,ಜನವರಿ 1 (ಯು.ಎನ್.ಐ.) ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ 14 ಕೋಟಿ ಇಕ್ವಿಟಿ ಅನುದಾನದಲ್ಲಿ ಕರ್ನಾಟಕದ ಒಟ್ಟು 30 ಎಫ್‌ಪಿಒಗಳ 12047 ಸದಸ್ಯರಿಗೆ 1 ಕೋಟಿ 21 ಲಕ್ಷದ 42 ಸಾವಿರ ರೂಪಾಯಿ ಅನುದಾನವನ್ನು ಪ್ರಧಾನಿ ಮೋದಿ ಇಂದು ಬಿಡುಗಡೆ ಮಾಡಿದ್ದಾರೆ.
ಈ 1,21,42000 ಅನುದಾನದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಎಫ್‌ಪಿಓಗಳಿಗೆ 57 ಲಕ್ಷದ 74 ಸಾವಿರ ರೂ, ನಬಾರ್ಡ್‌ನ 11 ಎಫ್‌ಪಿಓಗಳಿಗೆ 43 ಲಕ್ಷದ 69ಸಾವಿರ ರೂ, ಎಸ್‌ಎಫ್‌ಎಸಿಯ 6 ಎಫ್‌ಪಿಓಗಳಿಗೆ 19 ಲಕ್ಷದ 19 ಸಾವಿರ ರೂ.ಅನುದಾನ ಇಕ್ವಿಟಿ ಗ್ರ್ಯಾಂಟ್ ಆಗಿದೆ.

ರೈತ ಉತ್ಪಾದಕರ ಸಂಸ್ಥೆ ಈಕ್ವಿಟಿ ಅನುದಾನ ಬಿಡುಗಡೆ ಕಾರ್ಯಕ್ರಮ ಭಾರತ ಸರ್ಕಾರದ 2020-21 ನೇ ಸಾಲಿನ ಆಯವ್ಯಯದಲ್ಲಿ Formation and Promotion of 10,000 Farmer Producer Organizations ಎಂದು ಘೋಷಿಸಲಾಗಿರುತ್ತದೆ. ರಾಜ್ಯಕ್ಕೆ ವಿವಿಧ ಅನುಷ್ಠಾನ ಸಂಸ್ಥೆಗಳಿಂದ 185 ರೈತ ಉತ್ಪಾದಕರ ಸಂಸ್ಥೆ ( ಜಲಾನಯನ ಅಭಿವೃದ್ಧಿ ಇಲಾಖೆ -100 , SFAC – 25 , NABARD – 37 ಮತ್ತು NCDC – 23 ) ಗಳನ್ನು ರಚಿಸಲು ವಿವಿಧ ಅನುಷ್ಠಾನ ಸಂಸ್ಥೆಗಳಿಗೆ ಗುರಿ ನೀಡಲಾಗಿದೆ. ಅಲ್ಲದೇ ಯೋಜನೆಯಡಿ ಇಲ್ಲಿಯವರೆಗೂ ಒಟ್ಟಾರೆ 152 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದ್ದು, ಜಲಾನಯನ ಅಭಿವೃದ್ಧಿ ಇಲಾಖೆ -99 SFAC – 21 , NABARD – 313 , NCDC – 1 ಎಫ್‌ಪಿಒ ಆಗಿವೆ.

ರೈತ ಉತ್ಪಾದಕರ ಸಂಸ್ಥೆಗಳಿಗೆ ಸಂಗ್ರಹಿಸಲಾದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ರೂ 15 ಲಕ್ಷಗಳ ವರೆಗೆ ಮ್ಯಾಚಿಂಗ್ ಅನುದಾನವಾಗಿ ಇಕ್ವಿಟಿ ಗ್ರ್ಯಾಂಟ್ ನೀಡಲಾಗುತ್ತಿದೆ. ಈ 15‌ ಲಕ್ಷ ಇಕ್ವಿಟಿ ಗ್ರ್ಯಾಂಟ್‌ಗಳನ್ನು ಗರಿಷ್ಠ ಮೂರು ಹಂತಗಳಲ್ಲಿ ನೀಡಲಾಗುವುದು. ಇದರಿಂದ ರೈತ ಉತ್ಪಾದಕರ ಸಂಸ್ಥೆಗಳ ಬಂಡವಾಳ ನಿಧಿ ಹೆಚ್ಚಾಗಿ ಇದು ವ್ಯವಹಾರ ಅಭಿವೃದ್ಧಿಗೆ ನೆರವಾಗುತ್ತದೆ.

ಇನ್ನು ರೈತ ಉತ್ಪಾದಕರ ಸಂಸ್ಥೆಗಳು ಪಡೆದ ಇಕ್ವಿಟಿ ಗ್ರ್ಯಾಂಟ್ ಅನುದಾನದಲ್ಲಿ ಸದಸ್ಯರುಗಳಿಂದ ಸಂಗ್ರಹಿಸಿದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ರೂ 2000ವರೆಗೆ ಸೀಮಿತಗೊಳಿಸಿ ಷೇರುಗಳನ್ನು ನೀಡಲಾಗುವುದು. ಮೊದಲ ಹಂತದಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ 30 ರೈತ ಉತ್ಪಾದಕರ ಸಂಸ್ಥೆಗಳ 12047 ಸದಸ್ಯರುಗಳಿಗೆ 1 ಕೋಟಿ 21ಲಕ್ಷದ 42 ಸಾವಿರ ರೂ.ಅನುದಾನವನ್ನು ಪ್ರಧಾನ ಮಂತ್ರಿಗಳು ಇಂದು ಬಿಡುಗಡೆ ಮಾಡಿದ್ದಾರೆ.

Continue Reading

ಕೃಷಿ

ಕಾರ್ಬನ್ ಫೈಬರ್ ದೋಟಿ ಆವಿಷ್ಕಾರ, ಅಡಿಕೆ ಬೆಳೆಗಾರರಿಗೆ ವರದಾನ:  ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ

Published

on

ತೀರ್ಥಹಳ್ಳಿ, ಡಿಸೆಂಬರ್ 28 (ಯು.ಎನ್.ಐ.) ರೈತರು ಎದುರಿಸುತ್ತಿರುವ, ಅಡಕೆ ಕೊನೆ ತೆಗೆಯುವ ಸಮಸ್ಯೆಗೆ, ಕಾರ್ಬನ್ ಫೈಬರ್ ದೋಟಿ ವರವಾಗಲಿದೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರರವರು ತಿಳಿಸಿದ್ದಾರೆ.

ಕೃಷಿ ಮಲೆನಾಡು ಕೃಷಿಕರ ಸಮುದಾಯ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ, ಇವರ ಸಂಯುಕ್ತಾಶ್ರಯದಲ್ಲಿ, ಇಂದು ಆಯೋಜಿಸಿದ್ದ, ಕಾರ್ಬನ್ ಫೈಬರ್ ದೋಟಿಯಲ್ಲಿ ಕೊನೆ ತೆಗೆಯುವ ತರಬೇತಿ ಕಾರ್ಯಾಗಾರದ ಸಮಾರೋಪ, ಸಮಾರಂಭದಲ್ಲಿ ಮಾತನಾಡಿದರು.

ಬದುಕನ್ನು ಸಹನೀಯ ಗೊಳಿಸಲು, ಹಲವಾರು ವ್ಯಕ್ತಿಗಳು ಹಾಗೂ ಸಂಸ್ಥೆಗಳು, ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ರೈತರು ಇತ್ತೀಚಿನ ದಿನಗಳಲ್ಲಿ ಅಡಿಕೆ ಕೊನೆ ತೆಗೆಯುವ ವಿಚಾರದಲ್ಲಿ, ಬಹಳವಾಗಿ, ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊನೆ ತೆಗೆಯುವ ಕಾಯಕದಲ್ಲಿ ಹಲವಾರು ಕಾರ್ಮಿಕರೂ ಆಕಸ್ಮಿಕವಾಗಿ ಮೇಲಿನಿಂದ ಬಿದ್ದು ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಇದಕ್ಕೆಲ್ಲಾ ವರದಾನ ವೆಂಬಂತೆ, ಅತ್ಯಂತ ಹಗುರವಾದ ಹಾಗೂ ಬಹಳವಾಗಿ ಉಪಯೋಗವಾಗುವ ಹಾಗೂ ನೆರವಾಗುವ ಕಾರ್ಬನ್ ಧೋಟಿ ಯ ಆವಿಷ್ಕಾರ ಆಗಿದೆ ಎಂದರು. ಇದಕ್ಕಾಗಿ ಶ್ರಮಿಸಿದ, ಯುವ ಸಂಶೋಧನಾಕಾರರಿಗೆ ಅಭಿನಂದನೆಗಳು.

ಸಾಮಾನ್ಯ ರೈತರೂ ಈ ವಿನೂತನ ದೋಟಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ, ಕೃಷಿ ಹಾಗೂ ತೋಟಗಾರಿಕೆ ಇಲಾಖಯಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ, ಮಾಡಲಾಗುವುದು ಎಂದೂ ಸಚಿವರು ತಿಳಿಸಿದರು.

ಅಡಕೆಯಿಂದ ಹತ್ತು ಹಲವು ಇತರ ಉತ್ಪನ್ನಗಳು ಹೊರ ಬರುತ್ತಿವೆ, ಇದೊಂದು ಅತ್ಯಂತ ಸಂತೋಷದಾಯಕ ವಿಚಾರವಾಗಿದೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ತಿಳಿಸಿದರು. ಕೂಳೂರು ರಾವ್,  ಸಾಹಿತಿ,  ಛಾಯಾ ಚಿತ್ರಗ್ರಾಹಕ ಶ್ರೀಪಡ್ರೆ, ಡಾ. ರವಿಕುಮಾರ್ ಹಾಗೂ ಇತರರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

Continue Reading
Advertisement
ಕರ್ನಾಟಕ3 mins ago

ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದ ಒಮೈಕ್ರಾನ್!

ಬೆಂಗಳೂರು: ಜನೆವರಿ 17 (ಯು.ಎನ್.ಐ) ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ ಬರೋಬ್ಬರಿ 287 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ತೀವ್ರ ನಿಗಾದ ಮಧ್ಯೆಯೇ ಒಮೈಕ್ರಾನ್ ಪ್ರಕರಣಗಳು...

ದೇಶ16 mins ago

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ...

ದೇಶ18 mins ago

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು...

ಸಿನೆಮಾ35 mins ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ50 mins ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ55 mins ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ1 hour ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು1 hour ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ2 hours ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ದೇಶ2 hours ago

ಐಐಟಿ ಬಾಂಬೆಯ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಜನೆವರಿ 17  (ಯು.ಎನ್.ಐ.) ಐಐಟಿ ಬಾಂಬೆಯ ವಿದ್ಯಾರ್ಥಿ ಸೋಮವಾರ ಮುಂಜಾನೆ ಇಲ್ಲಿನ ಪೊವೈ ಕ್ಯಾಂಪಸ್ ನಲ್ಲಿರುವ ತನ್ನ ಹಾಸ್ಟೆಲಿನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ...

ಟ್ರೆಂಡಿಂಗ್

Share