Connect with us


      
ವಿದೇಶ

100 ಟನ್ ನ್ಯಾನೊ ಸಾರಜನಕ ರಸಗೊಬ್ಬರ ಶ್ರೀಲಂಕಾಕ್ಕೆ ರವಾನಿಸಿದ ಭಾರತ

Bindushree Hosuru

Published

on

ಕೊಲಂಬೊ: ನ. 4 (ಯುಎನ್ಐ) 100 ಟನ್ ನ್ಯಾನೊ ಸಾರಜನಕ ರಸಗೊಬ್ಬರವನ್ನು ಹೊತ್ತ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಗುರುವಾರ ಕೊಲಂಬೊದಲ್ಲಿ ಇಳಿದಿವೆ.

ನ್ಯಾನೊ ಸಾರಜನಕ ರಸಗೊಬ್ಬರವನ್ನು ಏರ್‌ಲಿಫ್ಟಿಂಗ್ ಮೂಲಕ ಶ್ರೀಲಂಕಾ ಸರ್ಕಾರದ ಕೋರಿಕೆಯ ಮೇರೆಗೆ ನೀಡಲಾಗಿದೆ ಎಂದು ಟ್ವಿಟರ್‌ನಲ್ಲಿ ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ.

ಬೆಳಕಿನ ಹಬ್ಬ ದೀಪಾವಳಿಯ ದಿನದಂದು, ಭಾರತೀಯ ವಾಯುಪಡೆಯು ಮತ್ತೊಮ್ಮೆ ಶ್ರೀಲಂಕಾಕ್ಕೆ ಭರವಸೆಯ ಬೆಳಕನ್ನು ನೀಡಿದೆ. ಭಾರತದಿಂದ ನ್ಯಾನೋ ಗೊಬ್ಬರವನ್ನು ಏರ್‌ಲಿಫ್ಟಿಂಗ್ ಮೂಲಕ ತುರ್ತು ಬೆಂಬಲಕ್ಕಾಗಿ 100 ಟನ್‌ಗಳಷ್ಟು ಗೊಬ್ಬರ ಹೊತ್ತ ಎರಡು ವಿಮಾನಗಳು ಕೊಲಂಬೊಕ್ಕೆ ಬಂದಿವೆ.ಈ ಬೆಳವಣಿಗೆ ಶ್ರೀಲಂಕಾ ಸರ್ಕಾರದ ಸಾವಯವ ಕೃಷಿ ಉಪಕ್ರಮವನ್ನು ಬೆಂಬಲಿಸುತ್ತದೆ. ಅಲ್ಲದೆ, ಶ್ರೀಲಂಕಾ ರೈತರಿಗೆ ನ್ಯಾನೋ ಸಾರಜನಕ ಲಭ್ಯತೆಯನ್ನು ತ್ವರಿತಗೊಳಿಸುತ್ತದೆ ಎಂದು ಇಲ್ಲಿನ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.

ರಾಸಾಯನಿಕ ಗೊಬ್ಬರದ ಆಮದು ನಿಲ್ಲಿಸಲು ಮೇ ತಿಂಗಳಲ್ಲಿ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿರ್ಧಾರ ಮಾಡಿದ್ರು. ಇದರಿಂದ ಅಲ್ಲಿ ಸಾರಜನಕ ದ್ರವ ಗೊಬ್ಬರದ ಆಮದು ನಿಂತಿತ್ತು. ಈ ನಿಷೇಧದ ನಂತರ ಶ್ರೀಲಂಕಾ ರಸಗೊಬ್ಬರಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಶ್ರೀಲಂಕಾಕ್ಕೆ ನ್ಯಾನೊ ರಸಗೊಬ್ಬರ ಪೂರೈಕೆಯನ್ನು ವೇಗಗೊಳಿಸಲು ಭಾರತ ಮುಂದಾಗಿದೆ.

Share