Connect with us


      




ದೇಶ

ಭಾರತ ಭೂಪಟದಲ್ಲಿ ಪಾಕಿಸ್ತಾನ, ಚೀನಾ ಕಾಣಿಸುವುದಿಲ್ಲ.. ಆದರೆ ಶ್ರೀಲಂಕಾ ಏಕೆ ಕಾಣಿಸುತ್ತದೆ?

UNI Kannada

Published

on

ನವದೆಹಲಿ, ಜ 6( ಯು ಎನ್‌ ಐ) – ಭಾರತದ ಭೂಪಟ ನೋಡಿದಾಗ ಶ್ರೀಲಂಕಾ ಅದರಲ್ಲಿ ಕಾಣಿಸುತ್ತದೆ. ಹೊರತುಪಡಿಸಿ ಯಾವುದೇ ನೆರೆ ಹೊರೆ ದೇಶಗಳು ಕಾಣಿಸುವುದಿಲ್ಲ. ಅಂದರೆ, ಶ್ರೀಲಂಕಾದೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದು ಕೊಂಡರೆ ತಪ್ಪಾಗುತ್ತದೆ. ಇದರ ಹಿಂದೆ ಒಂದು ಪ್ರಮುಖ ಕಾರಣವಿದೆ. ಭಾರತ ಭೂಪಟದಲ್ಲಿ ಶ್ರೀಲಂಕಾ ಕಾಣಿಸಿಕೊಂಡಿರುವುದರ ಹಿಂದೆ ಕಡಲ ಕಾನೂನು ಕಾರಣವಾಗಿದೆ. ಇದನ್ನು ಸಾಗರ ಕಾನೂನು ಎಂದು ಕರೆಯಲಾಗುತ್ತದೆ. ವಿಶ್ವಸಂಸ್ಥೆ ಸ್ಥಾಪನೆಯ ನಂತರ ಈ ಕಾನೂನು ಅಸ್ತಿತ್ವಕ್ಕೆ ಬಂದಿದೆ. ಈ ಕಾಯ್ದೆ ಜಾರಿಗೆ ತರಲು, ಸಾಗರ ಕಾನೂನಿನ ಮೇಲಿನ ವಿಶ್ವಸಂಸ್ಥೆಯ ಸಮಾವೇಶ (UNCLOC-1) ಮೊದಲ ಬಾರಿ 1956 ರಲ್ಲಿ ನಡೆಸಲಾಯಿತು. 1958 ರಿಂದ ಈ ಕಾನೂನು ಜಾರಿಯಲ್ಲಿದೆ. UNCLOC-1 ನಲ್ಲಿ, ಕಡಲಿಗೆ ಸಂಬಂಧಿಸಿದ ಗಡಿಗಳು, ಒಪ್ಪಂದಗಳಿಗೆ ಸಂಬಂಧಿಸಿದ ಒಮ್ಮತಕ್ಕೆ ಬರಲಾಗಿದೆ. ನಂತರ 1982 ರವರೆಗೆ ಮೂರು ಸಮ್ಮೇಳನಗಳು ನಡೆದಿವೆ. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮುದ್ರಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ.

ಸಾಗರ ಕಾನೂನು ಎಂದರೆ ಏನು?

ಕಾಯ್ದೆಯನ್ನು ಜಾರಿಗೆ ತಂದಾಗ, ಭಾರತದ ನಕ್ಷೆಯಲ್ಲಿ ಬೇಸ್‌ಲೈನ್‌ನಿಂದ 200 ನಾಟಿಕಲ್ ಮೈಲಿ ದೂರದಲ್ಲಿರುವ ಪ್ರದೇಶವನ್ನು .. ಅಂದರೆ ಆ ದೇಶದ ಬೇಸ್‌ ಲೈನ್‌ ತೋರಿಸುವುದು ಕಡ್ಡಾಯವೆಂದು ನಿರ್ಧರಿಸಲಾಗಿದೆ. ಅಂದರೆ ಒಂದು ದೇಶ ಕರಾವಳಿಯಲ್ಲಿದ್ದರೆ ಅಥವಾ ಅದರ ಭಾಗ ಸಮುದ್ರಕ್ಕೆ ಸಂಪರ್ಕ ಹೊಂದಿದ್ದರೆ, ಆ ದೇಶದ ಗಡಿಯ ಸುತ್ತಲಿನ ಪ್ರದೇಶವನ್ನು ಸಹ ಆ ದೇಶದ ನಕ್ಷೆಯಲ್ಲಿ ತೋರಿಸಲಾಗುತ್ತದೆ. ಭಾರತದ ಭೂಪಟದಲ್ಲಿ ಶ್ರೀಲಂಕಾವನ್ನು ತೋರಿಸಲು ಇದೇ ಕಾರಣ. ಏಕೆಂದರೆ ಶ್ರೀಲಂಕಾ ಭಾರತದಿಂದ 200 ನಾಟಿಕಲ್ ಮೈಲುಗಳ ಅಂತರದಲ್ಲಿದೆ. ಭಾರತದ ಗಡಿಯ 200 ನಾಟಿಕಲ್ ಮೈಲುಗಳೊಳಗಿನ ಎಲ್ಲಾ ಸ್ಥಳಗಳನ್ನು ನಕ್ಷೆಯಲ್ಲಿ ತೋರಿಸಲಾಗಿದೆ. ಶ್ರೀಲಂಕಾ ಭಾರತದ ಧನುಷ್ಕೋಡಿಯಿಂದ ಕೇವಲ 18 ಮೈಲುಗಳಷ್ಟು ದೂರದಲ್ಲಿದೆ. ಅದಕ್ಕಾಗಿಯೇ ಶ್ರೀಲಂಕಾ ಭಾರತದ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

Share