Connect with us


      




ದೇಶ

ಅಫ್ಘಾನಿಸ್ತಾನಕ್ಕೆ 5 ಲಕ್ಷ ಕೋವ್ಯಾಕ್ಸಿನ್ ಲಸಿಕೆ ಕಳುಹಿಸಿಕೊಟ್ಟ ಭಾರತ

Vanitha Jain

Published

on

ನವದೆಹಲಿ, ಜನವರಿ 01(ಯು.ಎನ್.ಐ) ಭಾರತವು ಸುಮಾರು 5 ಲಕ್ಷ ಕೋವ್ಯಾಕ್ಸಿನ್ ಕೋವಿಡ್ -19 ಲಸಿಕೆಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿ ಕೊಟ್ಟಿದೆ.

ಭಾರತವು ಇಂದು ಅಫ್ಘಾನಿಸ್ತಾನಕ್ಕೆ 5 ಲಕ್ಷ ಕೋವ್ಯಾಕ್ಸಿನ್ ಡೋಸ್‍ಗಳನ್ನು ಕಳುಹಿಸಿಕೊಟ್ಟಿದೆ. ಈ ಲಸಿಕೆಗಳನ್ನು ಕಾಬೂಲ್‍ನ ಇಂದಿರಾಗಾಂಧಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಮುಂಬರುವ ದಿನಗಳಲ್ಲಿ ಪುನಃ 5 ಲಕ್ಷ ವ್ಯಾಕ್ಸಿನ್ ಅನ್ನು ಕಳುಹಿಸಿಕೊಡಲಾಗುತ್ತದೆ. ಈ ಮೂಲಕ ಒಟ್ಟು 10 ಲಕ್ಷ ವ್ಯಾಕ್ಸಿನ್ ಅನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗುತ್ತದೆ ಎಂದು ಎಂಇಎ ಹೇಳಿದೆ.

ಆಹಾರ ಧಾನ್ಯಗಳು, ಒಂದು ಮಿಲಿಯನ್ ಕೋವಿಡ್ ಲಸಿಕೆ ಮತ್ತು ಅಗತ್ಯ ಜೀವ ಉಳಿಸುವ ಔಷಧಿಗಳನ್ನು ಆಫ್ಘನ್ ಜನರಿಗೆ ಕಳುಹಿಸಿ ಕಡೊಉವ ಮೂಲಕ ಮಾನವೀಯ ನೆರವು ನೀಡಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಅದು ಹೇಳಿದೆ.

ಕಳೆದ ತಿಂಗಳ ಆರಂಭದಲ್ಲಿ, ಭಾರತವು ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಅಫ್ಘಾನಿಸ್ತಾನಕ್ಕೆ 1.6 ಟನ್ ವೈದ್ಯಕೀಯ ನೆರವು ನೀಡಿತು. ಮುಂಬರುವ ವಾರಗಳಲ್ಲಿ, ನಾವು ಗೋಧಿ ಪೂರೈಕೆ ಮತ್ತು ಉಳಿದ ವೈದ್ಯಕೀಯ ಸಹಾಯವನ್ನು ಕೈಗೊಳ್ಳುತ್ತೇವೆ. ಈ ನಿಟ್ಟಿನಲ್ಲಿ, ನಾವು ಯುಎನ್ ಏಜೆನ್ಸಿಗಳು ಮತ್ತು ಸಾರಿಗೆಯ ವಿಧಾನಗಳನ್ನು ಅಂತಿಮಗೊಳಿಸಲು ಇತರರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಎಂಇಎ ಹೇಳಿದೆ.

Share