Published
5 months agoon
By
Vanitha Jainಲಖನೌ, ಡಿಸೆಂಬರ್ 15(ಯು.ಎನ್.ಐ) ಉತ್ತರಪ್ರದೇಶ ಸರ್ಕಾರವು ನೋಯ್ಡಾ ಹೆಲಿಪೋರ್ಟ್ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಇದು ಭಾರತದ ಅತಿದೊಡ್ಡ ಹೆಲಿಪೋರ್ಟ್ ಎಂಬ ಖ್ಯಾತಿಗೆ ಒಳಗಾಗಲಿದೆ.
ಹೆಲಿಪೋರ್ಟ್ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯ ಸತತ ವರ್ಷಗಳಿಂದ ನಡೆಯುತ್ತಿದೆ ಎಂದು ಸಿಇಒ ರಿತು ಮಹೇಶ್ವರಿ ದೃಢಪಡಿಸಿದ್ದಾರೆ. ನೋಯ್ಡಾ ಹೆಲಿಪೋರ್ಟ್ನಿಂದ ಕೆಲವು ಕಿ.ಲೋ ಮೀಟರ್ ದೂರದಲ್ಲಿರುವ ಹೊಸ ಜೆವಾರ್ ವಿಮಾನ ನಿಲ್ದಾಣವನ್ನು ಆಧರಿಸಿದೆ.
ವರದಿಯ ಪ್ರಕಾರ, ನೋಯ್ಡಾ ಪ್ರಾಧಿಕಾರವು ಸೆಕ್ಟರ್ 151ಎ ನಲ್ಲಿ ಯಮುನಾ ಎಕ್ಸ್ಪ್ರೆಸ್ವೇ ಬಳಿ 9.35 ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿದೆ. ಬಹು ಹೆಲಿಕಾಪ್ಟರ್ಗಳನ್ನು ನಿಲುಗಡೆ ಮಾಡುವ ಸಾಮಥ್ರ್ಯದೊಂದಿಗೆ ಆಧುನಿಕ ಹೆಲಿಪೋರ್ಟ್ ಅನ್ನು ನಿರ್ಮಿಸಲು ಸರಿಸುಮಾರು 45 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು ಮತ್ತು 2-26 ಆಸನಗಳ ಹೆಲಿಕಾಪ್ಟರ್ಗಳಿಂದ ಹಿಡಿದು ಸಣ್ಣ ಮತ್ತು ದೊಡ್ಡ ಹೆಲಿಕಾಪ್ಟರ್ಗಳ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಹೆಲಿಪೋರ್ಟ್ 15 ಮೀಟರ್ ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು 50 ಕಾರುಗಳ ಸಾಮಥ್ರ್ಯದ ಪಾರ್ಕಿಂಗ್ ವ್ಯವಸ್ಥೆಯನ್ನು ಸಹ ಹೊಂದಿರಲಿದೆ.
ಬಹಿರಂಗ ಕ್ಷಮೆಯಾಚಿಸುವಂತೆ ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸಿದ ಎಎಪಿ ಶಾಸಕ
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರ್ಕಾರ
ಅಜಯ್ ದೇವಗನ್ ರಂತೆ ಸ್ಟಂಟ್ ಪ್ರದರ್ಶನ; ಖಾಕಿ ಅತಿಥಿಯಾದ ಯುವಕ
ಬೆಚ್ಚಿಬೀಳಿಸುವ ಪ್ಲಾನ್!; ಮನೆಯನ್ನೇ ಗ್ಯಾಸ್ ಚೇಂಬರ್ ಮಾಡಿಕೊಂಡು ಮೂವರ ಆತ್ಮಹತ್ಯೆ!
ಥಾಮಸ್ ಕಪ್ ವಿಜೇತ ಲಕ್ಷ್ಯಸೇನ್ ಬಳಿ ‘ಆ ಸ್ವೀಟ್’ ತರಲು ಹೇಳಿದ್ದರಂತೆ ಪ್ರಧಾನಿ ಮೋದಿ
ರಾಂಬನ್-ಬನಿಹಾಲ್ ಸುರಂಗ ಕುಸಿತ: ತನಿಖೆಗೆ ಕೇಂದ್ರದಿಂದ ಸಮಿತಿ ರಚನೆ