Connect with us


      
ದೇಶ

ಕಾರ್ ಗಳಲ್ಲಿ 6 ಏರ್ ಬ್ಯಾಗ್ ಕಡ್ಡಾಯ ನಿಯಮ ಜಾರಿ ಯಾವಾಗ?

Lakshmi Vijaya

Published

on

ನವದೆಹಲಿ: ಏಪ್ರಿಲ್ 21 (ಯು.ಎನ್.ಐ.) ಭಾರತದ ರಸ್ತೆ ಸಾರಿಗೆ ಸಚಿವಾಲಯವು ಎಲ್ಲಾ ಪ್ರಯಾಣಿಕ ಕಾರುಗಳಿಗೆ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರಬೇಕೆಂಬ ತನ್ನ ನಿರ್ಧಾರವನ್ನು ಬಲಗೊಳಿಸುತ್ತಿದೆ.  6 ಏರ್ ಬ್ಯಾಗ್  ಕಡ್ಡಾಯಗೊಳಿಸಿದರೆ ಕಾರ್ ಗಳ ಬೆಲೆಯಲ್ಲಿ ಏರಿಕೆಯಾಗುತ್ತದೆ ಎಂದು ಕಾರು ತಯಾರಕರ ವಿರೋಧದ ಹೊರತಾಗಿಯೂ ಸರ್ಕಾರ ಕಾರ್ ಗಳಲ್ಲಿ 6 ಏರ್ ಬ್ಯಾಗ್ ಕಡ್ಡಾಯ ನಿಮಯ ಜಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸುರಕ್ಷತೆ ಎಂಬುದು ಮುಖ್ಯ, ಅದು ನಿರ್ಲಕ್ಷ್ಯದ ವಿಚಾರವಲ್ಲ. ಹೊಸ ನಿಯಮಕ್ಕೆ ಸಂಬಂಧಿಸಿದಂತೆ ಸಚಿವಾಲಯವು ನಿಯಮಗಳನ್ನು ಅಂತಿಮಗೊಳಿಸುತ್ತಿದೆ. ಜಾರಿಗೆ ತರಲು ಕೆಲ ಸಮಯ ತೆಗೆದುಕೊಳ್ಳುತ್ತದೆ ಎಂದಿದೆ.

ಜನವರಿಯಲ್ಲಿ ರಸ್ತೆ ಸಾರಿಗೆ ಸಚಿವಾಲಯವು ಅಕ್ಟೋಬರ್ 1 ರಿಂದ ಎಲ್ಲಾ ಹೊಸ ಕಾರುಗಳಿಗೆ ನಾಲ್ಕು ಪ್ರಯಾಣಿಕರ ಏರ್‌ಬ್ಯಾಗ್‌ಗಳು ಮತ್ತು ಎರಡು ಬದಿ ಅಥವಾ ಕರ್ಟನ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ಆರು ಏರ್‌ಬ್ಯಾಗ್‌ಗಳನ್ನು ಅಳವಡಿಸಬೇಕೆಂದು ಕರಡು ಮಾರ್ಗಸೂಚಿಗಳನ್ನು ಹೊರಡಿಸಿತು.ಈ ನಿಯಮವನ್ನು ಒಂದು ತಿಂಗಳೊಳಗೆ ಅಂತಿಮಗೊಳಿಸುವ ನಿರೀಕ್ಷೆಯಿತ್ತು.  ಆದರೆ ಸಚಿವಾಲಯವು  ಇನ್ನೂ ಆಟೋ ಕಂಪನಿಗಳಿಂದ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

ಇಂತಹ ನಿಯಮವು ಸಣ್ಣ ಕಾರುಗಳನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ ಮತ್ತು ವಾಹನಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲು ಸಾಧ್ಯವಾಗದ ಕೆಲವು ಸಂಭಾವ್ಯ ಖರೀದಿದಾರರು ಕಾರು ಖರೀದಿಯಿಂದ ಹಿಂದೆ ಸರಿಯುತ್ತಾರೆ ಎಂದು ಎಂದು ಭಾರತದ ಅತಿದೊಡ್ಡ ಕಾರು ತಯಾರಕ ರಾಯಿಟರ್ಸ್ ಹೇಳಿದ ನಂತರ ಸಚಿವಾಲಯವು ನಿಯಮಗಳನ್ನು ಪರಾಮರ್ಷಿಸುತ್ತಿದೆ.

ಈಗಾಗಲೇ ಎಲ್ಲಾ ಕಾರುಗಳಲ್ಲಿ ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ ಏರ್‌ಬ್ಯಾಗ್‌ಗಳು ಕಡ್ಡಾಯವಾಗಿದೆ.

Share