Connect with us


      




ಕ್ರೀಡೆ

ಇಂಗ್ಲೆಂಡ್- ಭಾರತ ನಡುವೆ ಮರುನಿಗದಿ ಮಾಡಿದ್ದ 5 ನೇ ಟೆಸ್ಟ್ ಪಂದ್ಯ; ಇಂಗ್ಲೆಂಡ್ ಗೆ ಗೆಲುವು, ಸರಣಿ ಸಮಬಲ

Lakshmi Vijaya

Published

on

ಬರ್ಮಿಂಗ್ ಹ್ಯಾಮ್: ಜುಲೈ 05 (ಯು.ಎನ್.ಐ.) ಭಾರತ ಮತ್ತು ಇಂಗ್ಲೆಂಡ್ ನಡುವೆ ಬರ್ಮಿಂಗ್‌ಹ್ಯಾಮ್‌ನ ಎಡ್ಜ್ ಬಾಸ್ಟನ್‌ನಲ್ಲಿ ಮರುನಿಗದಿಪಡಿಸಲಾದ 5 ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭಾರತವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ.

ನಾಲ್ಕನೇ ವಿಕೆಟ್‌ಗೆ ಜೋ ರೂಟ್ ಮತ್ತು ಜಾನಿ ಬೈರ್ಟ್‌ಸೊ ಅವರ ಅಜೇಯ 269 ರನ್‌ಗಳ ಜೊತೆಯಾಟವು ನಾಲ್ಕನೇ ಇನ್ನಿಂಗ್ಸ್ ನಲ್ಲಿ 378 ರನ್‌ಗಳ ಗುರಿಯನ್ನು ಬೆನ್ನಟ್ಟಲು ನೆರವಾಯಿತು. ಇದು ಟೆಸ್ಟ್ ಪಂದ್ಯದ ಅಂತಿಮ ಇನ್ನಿಂಗ್ಸ್ ನಲ್ಲಿ ಅವರ ಗರಿಷ್ಠ ಯಶಸ್ವಿ ಚೇಸ್ ಆಗಿದೆ. ರೂಟ್ 142 ರನ್ ಗಳಿಸಿ ಅಜೇಯರಾಗಿ ಉಳಿದರೆ, ಬೈರ್‌ಸ್ಟೋ ಔಟಾಗದೆ 114 ರನ್ ಗಳಿಸಿದರು.

ಮಂಗಳವಾರ 3 ವಿಕೆಟ್‌ಗೆ 259 ಸ್ಕೋರ್‌ನಲ್ಲಿ ತಮ್ಮ ಇನ್ನಿಂಗ್ಸ್ ಅನ್ನು ಪುನರಾರಂಭಿಸಿದ ಆತಿಥೇಯರು ಸುಲಭವಾಗಿ ಗೆಲುವು ದಾಖಲಿಸಿದರು.  ನಿನ್ನೆ ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲೌಟ್ ಆದ ನಂತರ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್ 378 ರನ್‌ಗಳ ಗುರಿಯನ್ನು ಪಡೆದಿತ್ತು. ಮರುನಿಗದಿಪಡಿಸಲಾದ ಐದನೇ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ, ಭಾರತ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 2-2 ರಲ್ಲಿ ಅಂತ್ಯಗೊಳಿಸಿದೆ.

ಜಸ್ಪ್ರೀತ್ ಬುಮ್ರಾ  ಸರಣಿಯಲ್ಲಿ 23 ವಿಕೆಟ್ ಪಡಿದಿದ್ದು ಭಾರತದ ಸರಣಿ ಶ್ರೇಷ್ಠ ಆಟಗಾರರಾದರು. ಸರಣಿಯಲ್ಲಿ 737 ರನ್ ಗಳಿಸಿದ ಜೋ ರೂಟ್ ಇಂಗ್ಲೆಂಡ್‌ನ ಸರಣಿ ಶ್ರೇಷ್ಠ ಆಟಗಾರರಾದ್ರೆ,  ಬೈರ್‌ಸ್ಟೋವ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು

Share