Published
5 months agoon
ಹೈದರಾಬಾದ್: ಡಿ. 15 (ಯು.ಎನ್.ಐ) ಸಾಯಿ ಕಿರಣ್ ರೆಡ್ಡಿ ಎಂಬ ಯೋಧ ಮೂರು ವಾರಗಳ ರಜೆ ಮುಗಿಸಿ, ಈ ತಿಂಗಳ ಆರಂಭದಲ್ಲಿ ಪಂಜಾಬ್ ಗಡಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಮರಳುತ್ತಿದ್ದಾಗ ನಾಪತ್ತೆಯಾಗಿದ್ದಾರೆ.
ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಚೆರ್ಯಾಲ ಮಂಡಲದ ಪೋತಿರೆಡ್ಡಿಪಲ್ಲಿ ನಿವಾಸಿಯಾಗಿರುವ ಸಾಯಿ ಕಿರಣ್ ರೆಡ್ಡಿ ಅವರು ನವೆಂಬರ್ 16 ರಿಂದ ಮೂರು ವಾರಗಳ ರಜೆಯನ್ನು ಮುಗಿಸಿ, ಫರೀದ್ಕೋಟ್ನಲ್ಲಿರುವ ತಮ್ಮ ನಿಯೋಜನೆ ಕೇಂದ್ರಕ್ಕೆ ವರದಿ ಮಾಡಲು ಹೊರಟಿದ್ದರು.
ಡಿಸೆಂಬರ್ 7 ರಂದು ರೆಡ್ಡಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಹಿರಿಯ ಅಧಿಕಾರಿಗಳು ಅವರ ಪೋಷಕರಿಗೆ ಕರೆ ಮಾಡಿದ್ದಾರೆ. ಆದ್ರೆ ಪೋಷಕರು ಡಿ. 5 ರಂದು ಆತ ಪಂಜಾಬ್ಗೆ ಹೋರಟಿದ್ದಾರೆ ಎಂದು ಹೇಳಿದ್ದಾರೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವಾಗ, ಕೊನೆಯ ಬಾರಿಗೆ ವಾಟ್ಸಾಪ್ ಕರೆ ಮೂಲಕ ರೆಡ್ಡೊಯೊಂದಿಗೆ ಮಾತನಾಡಿದ್ದೇವೆ ಎಂದು ಕುಟುಂಬ ತಿಳಿಸಿದೆ.
ಆದರೆ ಇದಾದ ಬಳಿಕ 4 ದಿನಗಳ ಕಾಲ ಆತನ ಫೋನ್ ಸ್ವಿಚ್ ಆಫ್ ಆಗಿದ್ದು, ಆತ ಎಲ್ಲಿದ್ದಾನೆ ಎಂಬ ಆತಂಕ ಮನೆಯವರನ್ನು ಕಾಡಿತ್ತು. ಬಳಿಕ ಸೀನಿಯರ್ ಅಧಿಕಾರಿಗಳಿಂದ ಬಂದ ಕರೆ ತಮ್ಮ ಮಗನಿಗೆ ಏನೋ ಆಗಿದೆ ಎಂಬುದನ್ನು ದೃಢಪಡಿಸಿತ್ತು.
ಸಾಯಿ ಕಿರಣ್ನ ಕುಟುಂಬಸ್ಥರು ಚೆರಿಯಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮತ್ತು ಘಟನೆಯ ಬಗ್ಗೆ ದೆಹಲಿ ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ‘ಶೂನ್ಯ ಎಫ್ಐಆರ್’ ದಾಖಲಾಗಿದ್ದು, ಸೇನಾ ಯೋಧರ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಐ ನರೇಂದ್ರ ರೆಡ್ಡಿ ತಿಳಿಸಿದ್ದಾರೆ.
ಅಲ್ಲಿಂದ ಫರೀದ್ಕೋಟ್ ವಿಮಾನ ಹತ್ತಲು ಉದ್ದೇಶಿಸಿ ಯೋಧ ದೆಹಲಿಗೆ ಬಂದಿಳಿದಿರುವುದು ದೆಹಲಿ ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳಿಂದ ದೃಢಪಟ್ಟಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ದೆಹಲಿ ಸೇನಾ ಪೊಲೀಸರಿಗೆ ವರ್ಗಾಯಿಸಲಾಗಿದೆ. ಇದೇ ವೇಳೆ ನಾಪತ್ತೆಯಾಗಿರುವ ಯೋಧನ ಪತ್ತೆಗೆ ಸಿದ್ದಿಪೇಟೆ ಪೊಲೀಸರು 3 ತಂಡಗಳನ್ನು ರಚಿಸಿದ್ದಾರೆ.
ತೆಲಂಗಾಣವನ್ನ ಓರ್ವ ಸಿಎಂ ಆಳುತ್ತಿಲ್ಲ, ರಾಜ ಆಳುತ್ತಿದ್ದಾನೆ: ಕೆಸಿಆರ್ ವಿರುದ್ಧ ರಾಹುಲ್ ವಾಗ್ದಾಳಿ
ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ ಕೇಸ್; ಅಪರಾಧಿಗಳ ಪರ ನಿಲ್ಲುವುದಿಲ್ಲ ಎಂದ ಓವೈಸಿ
ಹೈದರಾಬಾದ್ v/s ಬೆಂಗಳೂರು; ಕೆ.ಟಿ.ರಾಮರಾವ್ v/s ಡಿಕೆಶಿ
ಇಬ್ಬರು ನಾಗರಿಕರ ಮೇಲೆ ಬೈ ಮಿಸ್ಟೇಕ್ ಹಾರಿದ ಗುಂಡು
ಮಾಸ್ಕ್ ಧರಿಸುವುದು ಜನರ ಆಯ್ಕೆ; ತೆಲಂಗಾಣ ಸರ್ಕಾರ
ಹೈದರಾಬಾದ್ನಲ್ಲಿ ಬೆಂಕಿ ಅವಘಡ : 10 ಕಾರ್ಮಿಕರು ಸಜೀವ ದಹನ