Connect with us


      




ದೇಶ

ಪಾಕಿಸ್ತಾನದ 280 ಕೋಟಿ ಮೌಲ್ಯದ ಹೆರಾಯಿನ್ ಭಾರತೀಯರ ವಶ

Vanitha Jain

Published

on

ನವದೆಹಲಿ: ಏಪ್ರಿಲ್ 25 (ಯು.ಎನ್.ಐ.) ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಜತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಸೋಮವಾರ ರಾಜ್ಯದ ಕರಾವಳಿ ಸಮೀಪ ಅರಬ್ಬಿ ಸಮುದ್ರದಲ್ಲಿ ಒಂಬತ್ತು ಸಿಬ್ಬಂದಿಯೊಂದಿಗೆ ಪಾಕಿಸ್ತಾನದ ದೋಣಿಯನ್ನು ಬಂಧಿಸಿ 280 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ.

ಪಾಕಿಸ್ತಾನದ ಬೋಟ್ ‘ಅಲ್ ಹಜ್’ ಭಾರತದ ಸಮುದ್ರಕ್ಕೆ ನುಗ್ಗಿದಾಗ ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳು ತಡೆಹಿಡಿದು ಬಂಧಿಸಿವೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ದೋಣಿಯಲ್ಲಿ 280 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಹೆಚ್ಚಿನ ತನಿಖೆಗಾಗಿ ಬೋಟ್ ಮತ್ತು ಅದರ ಸಿಬ್ಬಂದಿಯನ್ನು ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರಿಗೆ ಕರೆತರಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಭಾರತೀಯ ಕೋಸ್ಟ್ ಗಾರ್ಡ್ ಅಧಿಕಾರಿಗಳು ಬಂಧಿಸಿರುವ ಒಂಬತ್ತು ಸಿಬ್ಬಂದಿಗಳು ಪಾಕಿಸ್ತಾನಿ ಪ್ರಜೆಗಳು ಎಂದು ನಂಬಲಾಗಿದೆ. ಗುಜರಾತ್ ಕರಾವಳಿಯ ಜಾಖಾವೊ ಮೀನುಗಾರಿಕೆ ಬಂದರಿನ ಬಳಿ ದೋಣಿಯ ಮೂಲಕ ಹೆರಾಯಿನ್ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿದೆ.

ಎಟಿಎಸ್ ಪಾಕಿಸ್ತಾನದಿಂದ ಡ್ರಗ್ಸ್ ತರುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದು, ಭಾರತೀಯ ಕೋಸ್ಟ್ ಗಾರ್ಡ್ ಸಹಾಯದಿಂದ ಗಡಿಯಾಚೆಯಿಂದ ಬರುತ್ತಿರುವ ದೋಣಿಯನ್ನು ಸೆರೆಹಿಡಿಯಲು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

Share