Connect with us


      




ಕ್ರೀಡೆ

ಕ್ರಿಕೆಟ್: ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ಸೋನಿಯಲ್ಲಿ ಪ್ರಸಾರ

Iranna Anchatageri

Published

on

ನವದೆಹಲಿ: ಜೂನ್ 23 (ಯು.ಎನ್.ಐ.) ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ಭಾರತೀಯ ಅಭಿಮಾನಿಗಳಿಗೆ ತಡೆರಹಿತ ಕ್ರಿಕೆಟ್ ಅನುಭವವನ್ನು ನೀಡಲು ಸಿದ್ಧವಾಗಿದೆ. ಜೂನ್ 26 ರಿಂದ ಭಾರತದ ಐರ್ಲೆಂಡ್ ಮತ್ತು ನಂತರ ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಉಭಯ ದೇಶಗಳ ನಡುವಿನ ಸರಣಿಯ ನೇರ ಪ್ರಸಾರ ಇರಲಿದೆ.

ಟೀಂ ಇಂಡಿಯಾ ತನ್ನ ಕೊನೆಯ ಸರಣಿಯನ್ನು ಐರ್ಲೆಂಡ್ ವಿರುದ್ಧ 2018 ರಲ್ಲಿ ಆಡಿತ್ತು. ಇದೀಗ ಟೀಂ ಇಂಡಿಯಾ ಎರಡು ಟಿ20 ಪಂದ್ಯಗಳನ್ನು ಆಡಲು ಐರ್ಲೆಂಡ್‌ಗೆ ತೆರಳಲಿದೆ. ಇದರ ನಂತರ ಭಾರತದ ಇಂಗ್ಲೆಂಡ್ ಪ್ರವಾಸವು ಜುಲೈ 1, 2022 ರಿಂದ ಐದನೇ ಟೆಸ್ಟ್‌ನೊಂದಿಗೆ ಪ್ರಾರಂಭವಾಗಲಿದೆ. ಇದು ಕಳೆದ ವರ್ಷ ನಡೆದ ಟೆಸ್ಟ್ ಸರಣಿಯ ಕೊನೆಯ ಉಳಿದ ಪಂದ್ಯವಾಗಿದೆ. ಈ ಟೆಸ್ಟ್ ಪಂದ್ಯಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದರು. ಇದಾದ ಬಳಿಕ ಭಾರತ, ಇಂಗ್ಲೆಂಡ್ ವಿರುದ್ಧ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನೂ ಆಡಲಿದೆ. ಎರಡೂ ಸರಣಿಗಳು ಸೋನಿ ಸಿಕ್ಸ್ (ಇಂಗ್ಲಿಷ್), ಸೋನಿ ಟೆನ್ 3 (ಹಿಂದಿ) ಮತ್ತು ಸೋನಿ ಟೆನ್ 4 (ತಮಿಳು ಮತ್ತು ತೆಲುಗು) ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ. ಈ ಪಂದ್ಯಗಳನ್ನು Sony Liv ನ OnDemand OTT ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಸ್ಟ್ರೀಮ್ ಸಹ ಮಾಡಬಹುದಾಗಿದೆ.

ವಿದೇಶದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಯಲ್ಲಿ ರೋಹಿತ್ ಶರ್ಮಾ ಚೊಚ್ಚಲ ಬಾರಿಗೆ ಟೀಂ ಇಂಡಿಯಾ ನಾಯಕನಾಗಲಿದ್ದಾರೆ. ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದು, ಪ್ರಸ್ತುತ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯ ಐದನೇ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಇಬ್ಬರೂ ಹೊಸ ನಾಯಕರು ಈ ಅಧ್ಯಾಯವನ್ನು ಕೊನೆಗೊಳಿಸಲಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಸರಣಿಯು ಕಳೆದ ವರ್ಷ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ನಾಯಕತ್ವದಲ್ಲಿ ಪ್ರಾರಂಭಗಿತ್ತು. ಸದ್ಯ ಭಾರತ ಈ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸುವ ಗುರಿ ಹೊಂದಿದೆ. ಆದರೆ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು 2-2 ರಿಂದ ಸರಣಿಯನ್ನು ಡ್ರಾ ಮಾಡಲು ಐದನೇ ಟೆಸ್ಟ್ ಅನ್ನು ಗೆಲ್ಲಬೇಕಾಗಿದೆ.

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಲು ಕ್ರಿಕೆಟ್ ಜಗತ್ತಿನ ಪ್ರಮುಖ ವ್ಯಕ್ತಿಗಳ ಹೆಸರನ್ನು ಪ್ರಕಟಿಸಿದೆ. ಚಾನೆಲ್‌ನಲ್ಲಿ ಪ್ರಸಾರವಾಗಲಿರುವ ಲೈವ್ ಸ್ಟುಡಿಯೋ ಶೋ ಎಕ್ಸ್‌ಟ್ರಾ ಇನ್ನಿಂಗ್ಸ್‌ನ ಇಂಗ್ಲಿಷ್ ಮತ್ತು ಹಿಂದಿ ಕಾಮೆಂಟರಿ ಪ್ಯಾನೆಲ್‌ನಲ್ಲಿ ಡೇವಿಡ್ ಗವಾರ್, ಗ್ರೇಮ್ ಸ್ವಾನ್, ವೀರೇಂದ್ರ ಸೆಹ್ವಾಗ್, ಆಶಿಶ್ ನೆಹ್ರಾ, ಅಜಿತ್ ಅಗರ್ಕರ್, ಮೊಹಮ್ಮದ್ ಕೈಫ್, ಅಜಯ್ ಜಡೇಜಾ, ಸಂಜಯ್ ಮಂಜ್ರೇಕರ್, ಸಬಾ ಕರೀಮ್ ಮತ್ತು ವಿವೇಕ್ ರಜ್ದಾನ್ ಕಾಣಿಸಿಕೊಳ್ಳಲಿದ್ದಾರೆ.

ಇದಲ್ಲದೆ, ಇಂಗ್ಲೆಂಡ್‌ನ ಕ್ರಿಕೆಟ್ ಮೈದಾನದಿಂದ ನಾಸರ್ ಹುಸೇನ್ ಮತ್ತು ಮೈಕ್ ಅಥರ್ಟನ್ ನೇರವಾಗಿ ಈ ಕಾಮೆಂಟರಿ ಪ್ಯಾನೆಲ್‌ಗೆ ಸೇರಿಕೊಳ್ಳಲಿದ್ದಾರೆ. ತಮಿಳು ಕಾಮೆಂಟರಿ ಪ್ಯಾನಲ್‌ನಲ್ಲಿ ಡಬ್ಲ್ಯುವಿ ರಾಮನ್, ವಿದ್ಯುತ್ ಶಿವರಾಮಕೃಷ್ಣನ್, ಟಿಆರ್ ಅರಸು ಮತ್ತು ಆರ್. ಶ್ರೀಧರ್ ಪಾಲ್ಗೊಳ್ಳುವರು. ತೆಲುಗು ಕಾಮೆಂಟರಿಯನ್ನು ವೆಂಕಟಪತಿ ರಾಜು, ಜ್ಞಾನೇಶ್ವರ್ ರಾವ್, ಸಿ.ವೇಕಟೇಶ್, ವಿಜಯ್ ಮಹಾವಾದಿ ಮತ್ತು ಸಂದೀಪ್ ಕುಮಾರ್ ಭಾಗವಹಿಸಲಿದ್ದಾರೆ. ಈ ಎರಡು ಸರಣಿಗಳ ನಿರೂಪಕರ ಪಟ್ಟಿಯಲ್ಲಿ ಹರ್ಷಾ ಭೋಗ್ಲೆ, ಸಂಜನಾ ಗಣೇಶನ್, ಮೆಟ್ ಫ್ಲಾಯ್ಡ್ ಮತ್ತು ಅರ್ಜುನ್ ಪಂಡಿತ್ ಸೇರಿದ್ದಾರೆ.

Share