Published
5 months agoon
By
Vanitha Jainಜಕರ್ತಾ, ಡಿಸೆಂಬರ್ 13 (ಯು.ಎನ್.ಐ) ಇಂಡೋನೇಷ್ಯಾ ಡಿಸೆಂಬರ್ 14ರಿಂದ 6 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕೆ ಹಾಕಲು ಪ್ರಾರಂಭಿಸಲಿದೆ ಎಂದು ಆರೋಗ್ಯ ಸಚಿವಾಲಯದ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಕಾರ್ಯನಿರ್ವಾಹಕ ಮಹಾನಿರ್ದೇಶಕ ಮ್ಯಾಕ್ಸಿ ರೇನ್ ರೊಂಡೊನುವು ತಿಳಿಸಿದ್ದಾರೆ.
6 ರಿಂದ 11 ವರ್ಷದೊಳಗಿನ ಕೋವಿಡ್ ಲಸಿಕಾಕರಣವನ್ನು ರಾಜ್ಯದ ಹಲವು ಪ್ರದೇಶಗಳಲ್ಲಿ ಮಂಗಳವಾರದಿಂದ (ಡಿ.14) ಆರಂಭಿಸಲಾಗುವುದು. ಇದನ್ನು ಮುಂದಿನ ವರ್ಷದವರೆಗೂ ವಿಸ್ತರಿಸುವ ಆಲೋಚನೆ ಇದೆ ಎಂದು ಇಂಡೋನೇಷ್ಯಾ ನಿಯತಕಾಲಿಕೆ ಟೆಂಪೋದಲ್ಲಿ ಲಿಖಿತ ಹೇಳಿಕೆ ನೀಡಿದ್ದಾರೆ.
ಲಸಿಕಾ ಅಭಿಯಾನವು ಸುಮಾರು 26.6 ಮಿಲಿಯನಷ್ಟು ಮಕ್ಕಳನ್ನು ಗುರಿಯಾಗಿಸಿದೆ. ಯಾವ ಪ್ರದೇಶಗಳು ಲಸಿಕಾ ಅಭಿಯಾನದಲ್ಲಿ ಶೇ 70ರಷ್ಟು ತಲುಪಿದೆಯೋ ಅಲ್ಲಿಂದ ಮಕ್ಕಳ ಲಸಿಕಾ ಅಭಿಯಾನದ ಮೊದಲ ಹಂತವನ್ನು ಕೈಗೊಳ್ಳಲಾಗುತ್ತದೆ. ಅಧಿಕೃತ ಮಾಹಿತಿಯ ಪ್ರಕಾರ 106 ನಗರಗಳಲ್ಲಿ 8.8 ಮಿಲಿಯನ್ ಮಕ್ಕಳಿದ್ದಾರೆ.
ಕೊಲಂಬಿಯಾ, ಈಕ್ವೆಡಾರ್, ಹಾಂಗ್ಕಾಂಗ್ನಲ್ಲಿನ ಮಕ್ಕಳಿಗೆ ಈಗಾಗಲೇ ಚೀನಾ ಅನುಮೋದಿತ ಲಸಿಕೆ ಸಿನೋವ್ಯಾಕ್ ಲಸಿಕೆ ನೀಡಲಾಗುತ್ತಿದೆ. ಇನ್ನು ಇದೀಗ ಆರಂಭಿಸಲಾಗುತ್ತಿರುವ ಲಸಿಕಾ ಅಭಿಯಾನದಲ್ಲಿ ಶಾಲೆಗಳು ಮತ್ತು ಇತರ ಶಿಕ್ಷಣ ಕೇಂದ್ರಗಳು ಮತ್ತು ಅನಾಥಾಶ್ರಮಗಳಲ್ಲಿ ಲಸಿಕೆ ಸೇವಾ ಪೆÇೀಸ್ಟ್ಗಳು ಲಭ್ಯವಿರುತ್ತವೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಕೋವಿಡ್-19 ಸೋಂಕಿನ ಪ್ರಮಾಣವು ಇಂಡೋನೇಷ್ಯಾದಲ್ಲಿ ಕಡಿಮೆಯಾಗಿದೆ ಮತ್ತು ಕಳೆದ 24 ಗಂಟೆಗಳಲ್ಲಿ ಕೇವಲ 163 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,158 ರಷ್ಟಿದೆ.
ಲಂಡನ್: ಕರ್ನಾಟಕದ ಸಾವಿರ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆ
ಶ್ರೀಲಂಕಾದಲ್ಲಿ ಇಂಧನ ಕಳ್ಳ ದಂಧೆಕೋರರ ಮೇಲೆ ದಾಳಿ!
“ಲಡಾಖ್ನಲ್ಲಿ ಉಕ್ರೇನ್ನಂಥ ಪರಿಸ್ಥಿತಿ” – ರಾಹುಲ್ ಗಾಂಧಿ ಲಂಡನ್ನಲ್ಲಿ ಹೇಳಿಕೆ
ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ತೆರವುಗೊಳಿಸಿದ ಸರ್ಕಾರ
ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್
ಕಾನ್ ಚಲನಚಿತ್ರೋತ್ಸವ 2022; ರೆಡ್ ಕಾರ್ಪೆಟ್ ಮೇಲೆ ‘ಅತ್ಯಾಚಾರ’ದ ಪ್ರತಿಭಟನೆ!