Connect with us


      
ವಿದೇಶ

ರಷ್ಯಾದಲ್ಲಿ ತೀವ್ರಗೊಂಡ ಯುದ್ಧ ವಿರೋಧಿ ಹೋರಾಟ: 14 ಸಾವಿರಕ್ಕೂ ಹೆಚ್ಚು ಮಂದಿ ಬಂಧನ

Iranna Anchatageri

Published

on

ಮಾಸ್ಕೋ: ಮಾರ್ಚ್ 13 (ಯು.ಎನ್.ಐ.) ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಆರಂಭದಿಂದಲೂ, ರಷ್ಯಾದಲ್ಲಿ ಯುದ್ಧ ವಿರೋಧಿ ಹೋರಾಟಗಳು ತೀವ್ರಗೊಂಡಿವೆ. ಈ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ 14,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಒಂದು ಅಂದಾಜಿನ ಪ್ರಕಾರ ಈ ಹೋರಾಟ ರಷ್ಯಾ ತುಂಬ ವ್ಯಾಪಿಸಿದ್ದು, 112 ನಗರಗಳಲ್ಲಿ ಈ ಬಂಧನಗಳು ನಡೆದಿವೆ. ಮಾನಿಟರಿಂಗ್ ಸೈಟ್ OVD ಮಾಹಿತಿಯ ಪ್ರಕಾರ ಫೆಬ್ರವರಿ 24 ರಿಂದ 28 ನಗರಗಳಲ್ಲಿ ಕನಿಷ್ಠ 359 ಜನರನ್ನು ಬಂಧಿಸಲಾಗಿದೆ. ಆದರೆ, ಬಂಧನದ ವಾಸ್ತವಿಕ ಅಂಕಿ-ಅಂಶ ಇನ್ನೂ ಹೆಚ್ಚಿರಬಹುದು ಎಂದೂ ಅದು ಹೇಳಿದೆ.

Share