Published
5 months agoon
By
Vanitha Jainನವದೆಹಲಿ, ಡಿಸೆಂಬರ್ 6, (ಯು.ಎನ್.ಐ): ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗನ್ನು ಒಮ್ಮೆಲೆ ತೊಡೆದುಹಾಕಲು ಕಾನೂನುಗಳು ಮಾತ್ರವಲ್ಲ, ಜನರು ಅಂತರಂಗದಿಂದ ಸ್ವಯಂ ಬದಲಾವಣೆಗೆ ಒಳಗಾಗಬೇಕು. ಆಗ ಮಾತ್ರ ವರದಕ್ಷಿಣಾ ಪದ್ಧತಿಯನ್ನು ಬುಡಸಮೇತ ಕಿತ್ತು ಹಾಕಲು ಮತ್ತು ಮಹಿಳೆಯರನ್ನು ಗೌರವದಿಂದ ಕಾಣಲು ಸಾಧ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಠಿಣ ಕ್ರಿಮಿನಲ್ ಕಾನೂನು ನಿಬಂಧನೆಗಳ ಹೊರತಾಗಿಯೂ ವರದಕ್ಷಿಣೆ ಎಂಬ ಅನಿಷ್ಟ ಪದ್ಧತಿ ಇನ್ನೂ ಮುಂದುವರಿದಿದೆ ಎಂದು ಹೇಳಿದ ವಕೀಲ ಬಿಜು ಅವರ ವಾದಕ್ಕೆ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಪ್ರತಿಕ್ರಿಯಿಸಿದೆ.
ಭಾರತೀಯ ದಂಡ ಸಂಹಿತೆ, 1961 ರ ವರದಕ್ಷಿಣೆ ನಿಷೇಧ ಕಾಯಿದೆ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ರೂಪದಲ್ಲಿ ವರದಕ್ಷಿಣೆ ವಿರುದ್ಧ ಹೋರಾಡಲು ಹೊಸ ಕಾನೂನು ಪರಿಚಯಿಸಲಾಗಿದೆ. ಆದರೂ ವರದಕ್ಷಿಣೆ ಎಂಬುದು ವ್ಯಾಪಕವಾಗಿ ಹರಡಿದೆ. ದೇಶದ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳ ರಾಜ್ಯದಲ್ಲೂ ಗಂಡನ ಮನೆಯವರು ಚಿನ್ನದ ದಾಹಕ್ಕಾಗಿ ಯುವತಿಯರನ್ನು ಪೀಡಿಸುತ್ತಾರೆ, ಕೊಲ್ಲುತ್ತಾರೆ. ಎಂದು ಬಿಜು ಹೇಳಿದರು.
ಮದುವೆಗಳಲ್ಲಿ ಹೆಂಗಸರನ್ನು ಹೇಗೆ ಚಿನ್ನಾಭರಣಗಳಿಂದ ಅಲಂಕರಿಸುವ ಮೂಲಕ ಅವರನ್ನು ವಸ್ತುನಿಷ್ಠಗೊಳಿಸಲಾಗುತ್ತಿದೆ ಎಂಬುದನ್ನು ಅವರು ವಿವರಿಸಿದರು.
ವರದಕ್ಷಿಣೆ ವಿರುದ್ಧ ಎಷ್ಟೇ ಕಠಿಣ ಕಾನೂನುಗಳಿದ್ದರೂ ಅದು ದೊಡ್ಡ ಪಿಡುಗಾಗಿ ಮುಂದುವರೆಯುತ್ತಾ ಮುಗ್ಧ ಯುವತಿಯರ ಬದುಕನ್ನು ಹಾಳು ಮಾಡುತ್ತಿರುವುದರ ಬಗ್ಗೆ ವಿವರಿಸಿದರು. ಆಗ ಚಂದ್ರಚೂಡ ಅವರು “ಬದಲಾವಣೆಯು ಅಂತರಂಗದಿಂದ ಬರಬೇಕು. ಮದುವೆಯ ಮೂಲಭೂತ ಸಾಮಾಜಿಕ ಮೌಲ್ಯದ ಬಗ್ಗೆ ತಿಳುವಳಿಕೆ ಇರಬೇಕು. ಹೊಸದಾಗಿ ಮದುವೆಯಾದ ಮಹಿಳೆಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನವನ್ನು ವ್ಯಕ್ತಿಯು ಹೊಂದಿರಬೇಕು ಎಂದು ಹೇಳಿದರು.
ಮದುವೆ ಪೂರ್ವ ತರಬೇತಿ ಕಡ್ಡಾಯ
ಅರ್ಜಿದಾರರು ದಂಪತಿಗಳಿಗೆ ವರದಕ್ಷಿಣೆಯ ವಿರುದ್ಧ ಎಚ್ಚರಿಕೆ ನೀಡಲು ಮತ್ತು ಜಾಗೃತಿ ಮೂಡಿಸಲು “ವಿವಾಹಪೂರ್ವ” ತರಬೇತಿಗಳನ್ನು ಕಡ್ಡಾಯ ಮಾಡಬೇಕು ಎಂದು ಚಂದ್ರಚೂಡ್ ಅವರು ಸೂಚಿಸಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರ: ಯುಪಿ ಸರ್ಕಾರ ತರಾಟೆಗೆ ತೆಗೆದುಕೊಂಡ ಎಸ್ಸಿ
ಪರಮ್ ಬೀರ್ ಸಿಂಗ್ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂ ಆದೇಶ
ಹಿಜಾಬ್ ಕುರಿತು ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಉಕ್ರೇನ್ ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯ ಸಂಪೂರ್ಣವಾಗಿದೆ
ಹಿಜಾಬ್ ವಿವಾದ: ತುರ್ತು ವಿಚಾರಣೆಯ ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್
ಲಖೀಂಪುರ ಖೇರಿ ಪ್ರಕರಣ: ಆರೋಪಿ ಆಶಿಶ್ ಮಿಶ್ರಾ, ಯುಪಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ