Connect with us


      
ರಾಜಕೀಯ

ಹಿಜಾಬ್ ವಿವಾದದ ಹಿಂದೆ ಅಂತರಾಷ್ಟ್ರೀಯ ಷಡ್ಯಂತ್ರ : ಶಾಸಕ ರಘುಪತಿ ಭಟ್

UNI Kannada

Published

on

ಹಿಜಾಬ್ ವಿವಾದದ ಹಿಂದೆ ಅಂತರಾಷ್ಟ್ರೀಯ ಷಡ್ಯಂತ್ರ ಶಾಸಕ ರಘುಪತಿ ಭಟ್

ಶಾಸಕ ರಘುಪತಿ ಭಟ್

ಹಿಜಾಬ್ ವಿವಾದದ ಹಿಂದೆ ಅಂತರಾಷ್ಟ್ರೀಯ ಷಡ್ಯಂತ್ರವಿದೆ ಎಂಬ ಮಾತನ್ನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ಈಗ ಭಾರತ, ಪ್ರಧಾನಿ ನರೇಂದ್ರಮೋದಿ ಅವರ ನಾಯಕತ್ವದಲ್ಲಿ ಉನ್ನತ ಸ್ಥಾನ ಹೊಂದಿದೆ. ಇಂಥ ಭಾರತವನ್ನು ಇಲ್ಲಿ ಮುಸಲ್ಮಾನ ಮಹಿಳೆಯರಿಗೆ ಉತ್ತಮ ಸ್ಥಾನಮಾನವಿಲ್ಲ ಎಂದು ಸುಳ್ಳು ಹೇಳುವ ಮೂಲಕ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕುಕೃತ್ಯ ನಡೆಯುತ್ತಿದೆ. ಎಂಬುದು ನನ್ನ ಗ್ರಹಿಕೆ.

ನಮ್ಮ ರಾಜ್ಯದಲ್ಲಿ, ನನ್ನ ಜಿಲ್ಲೆ, ಕ್ಷೇತ್ರದಲ್ಲಿ ಹಿಜಾಬ್ ವಿವಾದವೇ ಇರಲಿಲ್ಲ. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರು ಕ್ಲಾಸಿಗೆ ತೆರಳುವ ಮುನ್ನ ಹಿಜಾಬ್ ತೆಗೆದಿಟ್ಟು ತೆರಳುತ್ತಿದ್ದರು. ಉಡುಪಿಯ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನ. ತರಗತಿಗಳಲ್ಲಿಯೂ ಹಿಜಾಬ್ ಗಾಗಿ ಒತ್ತಾಯಿಸಿದ ವಿದ್ಯಾರ್ಥಿನಿಯರು ಯಾವುದೇ ತಕಾರರು ಇಲ್ಲದೇ ಒಂದೂವರೆ ವರ್ಷ ತರಗತಿಗಳಲ್ಲಿ ಕುಳಿತು ಪಾಠ ಕೇಳಿದ್ದಾರೆ.

ಹೀಗೆ ಯಥಾಪ್ರಕಾರ ತಮ್ಮ ಪಠ್ಯಕ್ಕೆ ಸಂಬಂಧಿಸಿದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದ ವಿದ್ಯಾರ್ಥಿನಿಯರು ಇದ್ದಕ್ಕಿದ್ದ ಸಿ.ಎಫ್. ಐ. ಸಂಪರ್ಕದಿಂದ ಹಿಜಾಬ್ ಗಾಗಿ ಒತ್ತಾಯ ಮಾಡುತ್ತಾರೆಂದರೆ ಆಶ್ಚರ್ಯವಾಗುತ್ತದೆ. ಇದಕ್ಕೂ ಮೊದಲು ಎಂ.ಐ.ಟಿ. ವಿದ್ಯಾರ್ಥಿನಿ ಅತ್ಯಾಚಾರ ಖಂಡಿಸಿ ಎಬಿವಿಪಿ ಹೋರಾಟಕ್ಕೆ ಕರೆ ನೀಡುತ್ತದೆ. ಇದರಲ್ಲಿ ಈ ೧೨ ವಿದ್ಯಾರ್ಥಿನಿಯರು ಬುರ್ಖಾ ಹಾಕಿಕ್ಕೊಂಡೇ ಹೋಗಿದ್ದರು. ಮುಂಚೂಣಿಯಲ್ಲಿ ನಿಂತು ಪ್ರತಿಭಟನೆ ನಡೆಸಿದ್ದರು.

ಈ ವಿದ್ಯಾರ್ಥಿನಿಯರು ಎಬಿವಿಪಿ ಸಂಘಟಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಸಿ.ಎಫ್.ಐ. ಸಂಘಟನೆಯವರಿಗೆ ಅಪಥ್ಯವಾಗಿದೆ. ಮುಸ್ಲೀಮ್ ವಿದ್ಯಾರ್ಥಿನಿಯರು ಹಿಂದೂಗಳು ಸಂಘಟಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಬಾರದು ಎಂದು ಹೇಳಿದ್ದಾರೆ. ಅದಲ್ಲದೇ ಅವರೆಲ್ಲರನ್ನೂ ಸಂಪರ್ಕಿಸಿ ತರಬೇತಿ ನೀಡಿದ್ದಾರೆ. ಇದಾದ ನಂತರ ೨೭ನೇ ತಾರೀಖು.ವಿದ್ಯಾರ್ಥಿನಿಯರ ಪೋಷಕರು ಬಂದು ತಮ್ಮ ಮಕ್ಕಳು ಹಿಜಾಬ್ ಧರಿಸಿಕೊಂಡು ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಬೇಕೆಂದು ಮನವಿ ಮಾಡುತ್ತಾರೆ.

ಇಷ್ಟು ಸಮಯ ಮುಸ್ಲೀಮ್ ವಿದ್ಯಾರ್ಥಿನಿಯರು ತರಗತಿಗಳಲ್ಲಿ ಹಿಜಾಬ್ ಧರಿಸದೇ ಪಾಠ ಕೇಳಿದ್ದಾರೆ. ಇದ್ದಕ್ಕಿದ್ದ ಹಾಗೆ ಇದೇನಿದು ಹೊಸ ಬೇಡಿಕೆ ಎಂದು ಕಾಲೇಜಿನ ಪ್ರಿನ್ಸಿಪಾಲರಿಗೆ ಆಶ್ಚರ್ಯವಾಗಿದೆ. ಏಕೆ ಎಂದು ಕೇಳಿದ್ದಾರೆ. ನಮಗೆ ಹಿಜಾಬ್ ಬೇಕೇಬೇಕು ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರಿನ್ಸಿಪಾಲರು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಸ್ತ್ರಸಂಹಿತೆಯಿದೆ. ಹಿಜಾಬ್ ಹಾಕಿಕೊಂಡು ಬರಲು ಅವಕಾವಿಲ್ಲ ಎಂದು ಹೇಳಿದ್ದಾರೆ, ಆದರೂ ಅವರು ೩೦ನೇ ತಾರೀಖು ಕಾಲೇಜಿಗೆ ಬಂದು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಬೇಕೆಂದು ಲಿಖಿತವಾಗಿ ಪತ್ರ ನೀಡುತ್ತಾರೆ.

ಪ್ರಪ್ರಥಮವಾಗಿ ಪಾಕಿಸ್ತಾನಿ ಟಿವಿಯಲ್ಲಿ ಪ್ರಸಾರ

ಆಶ್ಚರ್ಯವೆಂದರೆ ಅದೇದಿನ ಸಂಜೆ ಈ ವಿಷಯ ಪಾಕಿಸ್ತಾನ ಟಿವಿ, ಆಲ್ ಜಜೀರಾ ಟಿವಿಗಳಲ್ಲಿ ಪ್ರಸಾರವಾಗುತ್ತದೆ. ಇದಕ್ಕೂ ಮೊದಲು ಭಾರತೀಯ ಟಿವಿಗಳಲ್ಲಿ ಈ ವಿಷಯವೇ ಪ್ರಕಟವಾಗಿರುವುದಿಲ್ಲ. ಉಡುಪಿಯ ಸ್ಥಳೀಯ ಚಾನೆಲ್ ಗಳಲ್ಲಿಯೂ, ಪೇಪರ್ ಗಳಲ್ಲಿಯೂ ಪ್ರಸಾರವಾಗಿರುವುದಿಲ್ಲ. ಹೀಗಿರುವಾಗ ಅವರಿಗೆ ನ್ಯೂಸ್ ಕೊಟ್ಟವರು ಯಾರು? ಇದು ಸಣ್ಣ ವಿಷಯವಲ್ಲ.ಇದರಿಂದ ಸಿ ಎಫ್. ಐ. ಸಂಘಟನೆಗೆ ಅಂತರಾಷ್ಟ್ರೀಯ ಭಯೋತ್ದಪಾದಕ ಸಂಘಟನೆಗಳ ನಂಟು ಇರಬಹುದೇ ಎಂಬ ಸಂಶಯ ಉಂಟಾಗುತ್ತದೆ.

ತಿಳಿವಳಿಕೆ ಹೇಳಿದ್ದು ವಿಫಲ

ಈ ನಂತರ ನಾವು ಅಂದರೆ ಕಾಲೇಜು ಪ್ರಿನ್ಸಿಪಾಲ್, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮುಸ್ಲೀಮ್ ಮುಖಂಡರು ಎಷ್ಟೇ ತಿಳಿ ಹೇಳಲು ಪ್ರಯತ್ನಿಸಿದರೂ ಆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತರಗತಿಗಳಿಗೆ ಹಾಜರಾಗುವುದೆಂದು ಪಟ್ಟು ಹಿಡಿದರು. ಈಗ ಆಲ್ ಖೈದಾದವರು ಈ ವಿಷಯಕ್ಕೆ ಪ್ರವೇಶ ಮಾಡಿದ್ದಾರೆ. ಆಲ್ ಕೈದಾದ ಓರ್ವ ಭಯೋತ್ಪಾದಕ, ಮೂರು ವರ್ಷದ ಹಿಂದೆಯೇ ಸತ್ತು ಹೋಗಿದ್ದಾನೆ ಎಂದು ಸುದ್ದಿ ಆಗಿದ್ದವನು ಇಲ್ಲಿನ ಹಿಜಾಬ್ ವಿಷಯದ ಬಗ್ಗೆ ಹೇಳಿಕೆ ಕೊಡುತ್ತಾನೆಂದರೆ ಇಲ್ಲಿಯ ಸಂಘಟನೆ ಜೊತೆ ಯಾವ ರೀತಿ ಸಂಪರ್ಕವಿರಬಹುದು ?

ಕರಾವಳಿಯಲ್ಲಿ ಹಿಂದೂ ಮುಸ್ಲೀಮ್ ನಡುವೆ ಸಂಘರ್ಷವೇಕೆ ?
ವಿಶ್ಲೇಷಣೆ ಮಾಡಿ; ಎಲ್ಲಿ ಸಂಘರ್ಷವಾಗುತ್ತದೆ ಎಂದರೆ ಎಲ್ಲಿ ಮುಸ್ಲೀಮ್ ಬಾಹುಳ್ಯವಿರುತ್ತದೋ ಅಲ್ಲಿ ಸಂಘರ್ಷವಾಗುತ್ತದೆ. ಎಲ್ಲಿ ಹಿಂದೂಗಳ ಜನಸಮಖ್ಯೆ ಅಧಿಕವಾಗಿರುತ್ತದೋ ಮತ್ತು ಮುಸ್ಲೀಮ್ ಜನಸಂಖ್ಯೆ ಕಡಿಮೆಯಿರುತ್ತದೋ ಅಲ್ಲಿ ಯಾವುದೇ ಗಲಾಟೆಯಾಗುವುದಿಲ್ಲ. ಇಲ್ಲಿ ಈ ಎರಡೂ ಸಮುದಾಯಗಳು ಸೌಹಾರ್ದತೆಯಿಂದ ಇರುತ್ತವೆ. ಎಲ್ಲಿ ಮುಸ್ಲೀಮ್ ಜನಸಂಖ್ಯೆ ಶೇಕಡ ೩೦ಕ್ಕಿಂತ ಹೆಚ್ಚಿರುತ್ತದೆಯೋ ಅಲ್ಲಿ ಗಲಾಟೆಗಳು ಆರಂಭವಾಗುತ್ತವೆ. ಇದರರ್ಥ ಎಂದರೆ ಮುಸ್ಲೀಮರ ಸಂಖ್ಯೆ ಹೆಚ್ಚಾದಂತೆಲ್ಲ ಅವರು ಮುಸ್ಲೀಮ್ ಧೋರಣೆಗಳನ್ನು ಹೆಚ್ಚೆಚ್ಚು ಪ್ರತಿಪಾದನೆ ಮಾಡುತ್ತಾರೆ.  ಆದರೆ ಹಿಂದೂಗಳು ಎಂದೂ  ಆಕ್ರಮಣಕಾರಿಯಾಗಿ ಹೋಗಿಲ್ಲ.

ದಕ್ಷಿಣ ಕನ್ನಡದಲ್ಲಿ ಉಲ್ಲಾಳ್, ಕೃಷ್ಣಪುರ, ಬಂದರು ಪ್ರದೇಶ ಇಂಥ ಕಡೆಗಳಲ್ಲಿಯೇ ಗಲಾಟೆಯಾಗುತ್ತದೆ. ಆದರೆ ಮಂಗಳೂರು, ಮುಲ್ಕಿಯಲ್ಲಿ, ಹಂಪನಕಟ್ಟೆಯಲ್ಲಿ ಗಲಾಟೆಯಾಗುವುದಿಲ್ಲ. ಅದೇ ಬಂಟ್ವಾಳದಲ್ಲಿ, ಬಿಸಿ ರೋಡಿನಲ್ಲಿ ಗಲಾಟೆಯಾಗುತ್ತದೆ. ಇಂಥಲೆಲ್ಲ ಮುಸ್ಲೀಮರ ಸಂಖ್ಯೆ ಜಾಸ್ತಿಯಿರುತ್ತದೆ.

ಮುಸಲ್ಮಾನರಲ್ಲಿ ದೇಶಭಕ್ತರೂ ಇದ್ದಾರೆ, ಸಾಮರಸ್ಯದ ಬದುಕು ಸಾಗಿಸಬೇಕೆಂದು ಹೇಳುವವರೂ ಇದ್ದಾರೆ. ಸಮಸ್ಯೆ ಎಲ್ಲಿ ಎಂದರೆ ಎಸ್.ಡಿ.ಪಿ. ಐ., ಪಿ.ಎಫ್.ಐ. ಇಂಥ ಮತೀಯ ಸಂಘಟನೆಗಳು. ಇದಲ್ಲದೇ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಸಂಘಟನೆಗಳಿಂದಲೂ ಸಮಸ್ಯೆ ಉಂಟಾಗುತ್ತಿದೆ. ಇಂಥವರು ದೇಶಭಕ್ತ ಮುಸ್ಲೀಮರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಇವರದೇ ದೊಡ್ಡ ಸಂಖ್ಯೆಯಾದರೆ ಇವರದೇ ಧ್ವನಿ ಹೆಚ್ಚಾಗುತ್ತದೆ.

ಈ ಕೋಮು ಗಲಭೆಗಳೇ ಹೀಗೆ. ಹಾಗೆ ನೋಡುವುದಾದರೆ ಉಡುಪಿಯಲ್ಲಿ ಯಾವಾಗಲೂ ಕೋಮು ಗಲಾಭೆಗಳೇ ಆಗಿಲ್ಲ. ಕೋಮು ಗಲಭೆಗಳು ಎಂದಿಗೂ ಮುಲ್ಕಿ ಗಡಿಯನ್ನು ಬಿಟ್ಟು ಉಡುಪಿಗೆ ಬಂದಿಲ್ಲ. ವಿ.ಎಸ್. ಆಚಾರ್ಯ ಅಂಥವರು ಗೃಹ ಸಚಿವರಾಗಿದ್ದರು. ನಾವೆಲ್ಲ ಅವರ ಶಿಷ್ಯರು. ಪೇಜಾವರದ ಹಿಂದಿನ ಶ್ರೀಗಳು ಅವರು ವಿಶ್ವ ಹಿಂದೂ ಪರಿಷತ್ತಿನ ಸ್ಥಾಪಕರು. ಅವರು ಕೃಷ್ಣಮಠದಲ್ಲಿಯೇ ಇಫ್ತಾರ್ ಕೂಟ ಆಯೋಜಿಸಿದ್ದರು. ಅವರು  ಅಲ್ಲಿ ನಮಾಜ್ ಮಾಡಲು ಕೂಡ ಅವಕಾಶ ನೀಡಿದ್ದರು.. ಅಂಥ ಔದಾರ್ಯ ಇದ್ದಂಥ ಸ್ವಾಮೀಜಿ. ಉಡುಪಿಯಲ್ಲಿ ಇವತ್ತಿಗೂ ಹಿಂದೂ ಮತ್ತು ಮುಸ್ಲೀಮರು ಸೌಹಾರ್ದತೆಯಿಂದಲೇ ಇದ್ದೇವೆ.

ಮತೀಯ ಸಂಘಟನೆಗಳಿಂದ ಸಮಸ್ಯೆ:

ಈ ಸೌಹಾರ್ದತೆಗೆ ಮತೀಯ ಸಂಘಟನೆಗಳು ಸಮಸ್ಯೆ ಉಂಟು ಮಾಡುತ್ತಿವೆ. ಅದಕ್ಕೆ ಬೇಕಾದ ಹಣಕಾಸು ವ್ಯವಸ್ಥೆಯನ್ನೂ ಮಾಡುತ್ತಿವೆ. ಆ ೧೨ ವಿದ್ಯಾರ್ಥಿನಿಯರಿಗೆ ಮೂರು ದಿನದ ತರಬೇತಿ ಆಗಿದೆ. ಅವರಲ್ಲಿ ಓರ್ವ ವಿದ್ಯಾರ್ಥಿನಿ “ತರಬೇತಿಗೆ ಹೋಗಿ ಬಂದ ಮೇಲೆ ನಮ್ಮ ಪಕ್ಕ ಕುಳಿತುಕೊಳ್ಳುವ ಹಿಂದೂ ವಿದ್ಯಾರ್ಥಿನಿಯನ್ನು ನೋಡಿ ಆಕ್ರೋಶವಾಗುತ್ತಿತ್ತು.” ಎಂದು ಹೇಳಿದ್ದಾರೆ. ಇಂಥ ಧರ್ಮ ಅಂಧ ಶ್ರದ್ದೆಯನ್ನು ಅವರಲ್ಲಿ ತುಂಬಿದ್ದಾರೆ.

ಸಾಮಾನ್ಯವಾಗಿ ಸರ್ಕಾರಿ ಶಾಲಾ – ಕಾಲೇಜುಗಳಲ್ಲಿ ಓದಲು ಬರುವವರು ಕಡಿಮೆ ಆರ್ಥಿಕತೆಯವರು ಮತ್ತು ಬಡವರು. ಇಂಥವರ ಬಡತನ ದುರುಪಯೋಗಪಡಿಸಿಕೊಂಡು ಅವರಿಗೆ ಹಣಕಾಸು ಸಹಾಯ ಮಾಡಿ ಅವರ ಸೌಹಾರ್ದ ಮನೋಭಾವನೆಯೇ ನಿವಾರಣೆಯಾಗುವಂತೆ ಮಾಡುತ್ತಿದ್ದಾರೆ.

ಏಪ್ರಿಲ್ ೩೦ಕ್ಕೆ ಇಲ್ಲಿನ ಹಿಜಾಬ್ ವಿಷಯ ಪಾಕಿಸ್ತಾನ ಟಿವಿಯಲ್ಲಿ ಪ್ರಸಾರವಾಯಿತು. ಏಪ್ರಿಲ್ ೩೧ಕ್ಕೆ ಎನ್.ಡಿ.ಟಿವಿಯಲ್ಲಿ ಪ್ರಸಾರವಾಯಿತು. ೧ನೇ ತಾರೀಖು ನಮ್ಮ ರಾಜ್ಯದ ಟಿವಿಗಳಲ್ಲಿ ಪ್ರಸಾರವಾಯಿತು.  ಹಿಜಾಬ್ ಬೇಕೇಬೇಕೆಂದು ಒತ್ತಾಯ ಮಾಡಿದ ವಿದ್ಯಾರ್ಥಿನಿಯರಿಗೆ ಹೇಳಿದಿಷ್ಟು “ ನಾವು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ, ಅಲ್ಲಿಯ ತನಕ ನೀವು ಯಥಾಸ್ಥಿತಿ ಕಾಪಾಡಿ. ಆದರೆ ಇದಕ್ಕೆ ಅವರು ಒಪ್ಪಲಿಲ್ಲ. ಈ ನತರ ಸರ್ಕಾರದಿಂದ ಸ್ಪಷ್ಟೀಕರಣ ಬಂತು. ನಾವು ಉನ್ನತಮಟ್ಟದ ಸಮಿತಿ ಮಾಡಿದ್ದೇವೆ, ಅಲ್ಲಿಯ ತನಕ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಂದಿನಂತೆ ವಸ್ತ್ರಸಂಹಿತೆ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಲಾಗಿತ್ತು.

ಈ ಬಳಿಕ ಮುಸ್ಲೀಮ್ ಮುಖಂಡರು ಬಂದು ಹಿಜಾಬ್ ಬೇಕೆಂದು ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಇವರ ಮಹಿಳಾ ಪೋಷಕರು ನಾವು ಈ ವಿಷಯವನ್ನು ನಮ್ಮನಮ್ಮ ಮನೆಗಳ ಪುರುಷರೊಂದಿಗೆ ಮಾತನಾಡುತ್ತೇವೆ ಎಂದು ಹೇಳಿದರು. ಹೆಚ್ಚುಕಡಿಮೆ ಅವರು ತರಗತಿಗೆ ಹಿಜಾಬ್ ಧರಿಸಿ ತರಗತಿಗಳಿಗೆ ಬಾರದಿರಲು ಒಪ್ಪಿಕೊಂಡಂತಿತ್ತು. ಆದರೆ ಮರುದಿನ ಪುನಃ ಪ್ರತಿಭಟನೆ ಶುರುವಾಯಿತು.

ಇನ್ನೊಂದು ಗಮನಾರ್ಹ ಸಂಗತಿಯೆಣದರೆ ಮಾಧ್ಯಮಗಳವರು ಹಿಜಾಬ್ ಬೇಕೆಂದು ಪಟ್ಟು ಹಿಡಿದ್ದಿದ್ದ ವಿದ್ಯಾರ್ಥಿನಿಯರನ್ನು ನೇರವಾಗಿ ಮಾತನಾಡಿಸಲು ಆಗಿಲ್ಲ, ಸಿ.ಎಫ್.ಐ. ಸಂಘಟನೆ ಮೂಲಕವೇ ಅವರನ್ನು ಮಾತನಾಡಿಸಬೇಕಾಗಿತ್ತು.ಆಗ ಸಿ.ಎಫ್.ಐ. ಸಂಘಟನೆಯವರು ಆಚೀಚೆ ನಿಂತು ಹೀಗೀಗೆ ಮಾತನಾಡಬೇಕೆಂದು ಹೇಳುತ್ತಿದ್ದರು

ಉಡುಪಿ ನಂತರ ಈ ಗಲಾಟೆ ಕುಂದಾಪುರಕ್ಕೂ ಹೋಯಿತು. ಅಲ್ಲಿ ತರಗತಿಗಳಿಗೆ ಹಿಜಾಬ್ ಧರಿಸಿಕೊಂಡು ಹೋಗದ ೨೭ ವಿದ್ಯಾರ್ಥಿನಿಯರು ಒಂದೇದಿನ ಹಿಜಾಬ್ ಧರಿಸಿಕೊಂಡು ಹೋದರು. ಹಾಲಾಡಿ ಶ್ರೀನಿvಸ ಶೆಟ್ಟರು ಹೋಗಿ ಪಂಚಾಯತಿಕೆ ಮಾಡಿದರು, ಅವರ ಮಾತಿಗೂ ಮಾನ್ಯತೆ ನೀಡಲಿಲ್ಲ. ಶಾಸಕರೂ ಹೇಳಿದ್ದೂ ಕೇಳುವುದಿಲ್ಲ ಎಂದಾಗ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿದರು. ಇದು ಯಾರ ಪ್ರೇರೇಪಣೆಯಿಂದಲೂ ಧರಿಸಿದ್ದಲ್ಲ. ವಿದ್ಯಾರ್ಥಿಗಳೇ ಸ್ವಯಂ ಪ್ರೇರಿತರಾಗಿ ಕೇಸರಿ ಶಾಲು ಧರಿಸಿದರು.ಇದು ಗಲಾಟೆಗೆ ಕಾರಣವಾಯ್ತು. ಆಗ ಕಾಲೇಜು ಗೇಟಿನಲ್ಲಿಯೇ ತಡೆದರು.

ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಆರಂಭಿಸಿದರು. ಮೂರನೇ ದಿನಕ್ಕೆ ಇದು ರಾಜ್ಯದ್ಯಂತ ಹರಡಿತು. ಇವರು ಕೇಸರಿ ಶಾಲು ಧರಿಸಬೇಕೆಂದು ಯಾವುದೇ ಸಂಘಟನೆಯೂ ಪ್ರಚೋದನೆ ನೀಡಿಲ್ಲ. ಹಿಂದೂ ವಿದ್ಯಾರ್ಥಿಗಳೇ ಸ್ವಯಂಪ್ರೇರಿತರಾಗಿ ಧರಿಸಿದ್ದು.

ಈ ನಂತರ ಸರ್ಕಾರದ ಆದೇಶ ಬಂತು. ಹಿಜಾಬ್ ಅನ್ನೇ ಆಗಲಿ ಕೇಸರಿ ಶಾಲನ್ನಾಗಲಿ ತರಗತಿಗಳಿಗೆ ಧರಿಸಿಕೊಂಡು ಬರಬಾರದೆಂದು ಕಟ್ಟುನಿಟ್ಟಾಗಿ ಹೇಳಲಾಯಿತು. ಅವರು ಹೈಕೋರ್ಟಿಗೆ ಹೋದರು,ಮಧ್ಯಂತರ ಆದೇಶ ಬಂತು. ಮುಸ್ಲೀಮ್ ವಿದ್ಯಾರ್ಥಿನಿಯರು ನ್ಯಾಯಾಲಯದ ಮಧ್ಯಂತರ ಆದೇಶ ಪಾಲಿಸಲಿಲ್ಲ.ಸುದೀರ್ಘ ವಿಚಾರಣೆ ನಂತರ ಮುಖ್ಯ ಆದೇಶ ಬಂತು. ಅದಕ್ಕೂ ಬೆಲೆ ನೀಡಲಿಲ್ಲ. ಆದೇಶ ವಿರೋಧಿಸಿ ಮುಸಲ್ಮಾನ್ ಸಮಾಜ ಬಂದ್ ಆಚರಣೆ ಮಾಡಿತು.
ಹೈಕೋರ್ಟ್ ಆರ್ಡರಿಗೂ ಬೆಲೆ ಕೊಡಲಿಲ್ಲ ಎಂದಾಗ ಹಿಂದೂ ಸಮಾಜದವರು ಸಹಜವಾಗಿ ಅಸಮಾಧಾನಕ್ಕೀಡಾದರು. ನ್ಯಾಯಾಲಯದ ಆದೇಶಕ್ಕೂ ಬೆಲೆ ಕೊಡಲಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸತೊಡಗಿದರು. ತರಗತಿಗಳಲ್ಲಿ ಹಿಜಾಬ್ ತೆಗೆದು ಪಾಠ ಕೇಳುವುದಿಲ್ಲ ಎಂದರೆ ಹೇಗೆ ಎಂಬ ಪ್ರಶ್ನೆ ಮೂಡಿತು. ಇದು ಬೇರೆಬೇರೆ ಬೆಳವಣಿಗೆಗಳಿಗೆ ಕಾರಣವಾಯ್ತು…
ಮುಂದುವರಿಯುತ್ತದೆ…

Share