Connect with us


      




ದೇಶ

ರೈಲಿನಲ್ಲಿ ಯೋಗಾಭ್ಯಾಸ ಮಾಡಿದ ಪ್ರಯಾಣಿಕರು

Lakshmi Vijaya

Published

on

ಮುಂಬೈ: ಜೂನ್ 21 (ಯು.ಎನ್.ಐ.) ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ, ಜನರು ಆಸನಗಳನ್ನು ಮತ್ತು ಯೋಗದ ಭಂಗಿಗಳನ್ನು ಅಭ್ಯಾಸ ಮಾಡುವುದನ್ನು ತೋರಿಸುವ ಹಲವಾರು ಫೋಟೋ  ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಿವೆ. ಆದರೆ ಅವರಲ್ಲಿ ಕೆಲವರು ಮುಂಬೈ ಲೋಕಲ್ ಟ್ರೈನ್‌ಗಳಲ್ಲಿ ಯೋಗಾಭ್ಯಾಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಾದ್ಯಂತ ಜನರ ಹೃದಯವನ್ನು ಆಕರ್ಷಿಸಿವೆ.

ಮುಂಬೈನಲ್ಲಿರುವ ಲೋಕಲ್ ರೈಲುಗಳು ಪ್ರಪಂಚದಲ್ಲೇ ಅತ್ಯಂತ ಜನನಿಬಿಡ ರೈಲುಗಳಾಗಿವೆ. ನಗರದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಈ ರೈಲುಗಳನ್ನು ಹತ್ತುವವರ ಸಂಖ್ಯೆ ಯಾವಾಗಲೂ ಹೆಚ್ಚಾಗೇ ಇರುತ್ತದೆ.  ಮಂಗಳವಾರ ಪಶ್ಚಿಮ ರೈಲ್ವೇಸ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಫೋಟೋಗಳು ಮಹಿಳಾ ಕೋಚ್‌ನೊಳಗೆ ಶಿಕ್ಷಕರ ಸೂಚನೆಯ ಮೇರೆಗೆ ಮಹಿಳೆಯರು ವಿವಿಧ ಯೋಗದ ಭಂಗಿಗಳನ್ನು ಅಭ್ಯಾಸ ಮಾಡುತ್ತಿರುವುದನ್ನ ತೋರಿಸಿವೆ.

ವಿಶೇಷ ದಿನದಂದು ಅನೇಕ ಯೋಗ ಶಿಕ್ಷಕರು ‘ಹೀಲ್ ಸ್ಟೇಷನ್’ ಹೆಸರಿನ ಸಂಸ್ಥೆ ಸಹಯೋಗದೊಂದಿಗೆ ರೈಲುಗಳಲ್ಲಿ ಯೋಗವನ್ನು ಅಭ್ಯಾಸ ಮಾಡುವ ಅಭಿಯಾನವನ್ನು ಪ್ರಾರಂಭಿಸಲು ಒಂದು ಉಪಕ್ರಮವನ್ನು ಆರಂಭಿಸಿದ್ದರು.ಅಂತರರಾಷ್ಟ್ರೀಯ ಯೋಗದಿನ 2022 ರ ಸಂದರ್ಭದಲ್ಲಿ ಹೀಲ್-ಸ್ಟೇಷನ್  ಪಶ್ಚಿಮ ರೈಲ್ವೇಸ್ ಸಹಯೋಗದೊಂದಿಗೆ ಮುಂಬೈ ಸ್ಥಳೀಯ ರೈಲಿನಲ್ಲಿ ಯೋಗವನ್ನು ಆಯೋಜಿಸಿದೆ ಎಂದು ಪಶ್ಚಿಮ ರೈಲ್ವೆ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುವಾಗ ಯೋಗಾಭ್ಯಾಸ ಮಾಡುವ ಮೂಲಕ ತಮ್ಮ ಪ್ರಯಾಣದ ಸಮಯವನ್ನು ಫಿಟ್‌ನೆಸ್‌ಗಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪ್ರಯಾಣಿಕರಿಗೆ ಕಲಿಸಲಾಯಿತು ಎಂದು ಅದು ಹೇಳಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಇತರ ವೀಡಿಯೊಗಳು ಮತ್ತು ಫೋಟೋಗಳು ಜನರು ವಿಶಿಷ್ಟ ರೀತಿಯಲ್ಲಿ ಯೋಗ ದಿನವನ್ನು ಆಚರಿಸುವುದನ್ನು ತೋರಿಸಿದೆ.

Share