Connect with us


      




ಕರ್ನಾಟಕ

ದತ್ತಿ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ

Kumara Raitha

Published

on

ಬೆಂಗಳೂರು: ಡಿಸೆಂಬರ್ 10 (ಯು.ಎನ್.ಐ.) ಬುದ್ಧ ಬಸವ ಗಾಂಧಿ ಸಾಂಸ್ಕøತಿಕ ಟ್ರಸ್ಟ್ (ರಿ) ನೀಡುವ ಸಾಹಿತಿ ರಾಂ. ಕೆ. ಹನುಮಂತಯ್ಯ ಹೆಬ್ಬಗೋಡಿ ಗೋಪಾಲ್ ದತ್ತಿ ಪುಸ್ತಕ ಬಹುಮಾನಕ್ಕೆ ಕೃತಿಗಳನ್ನು ಆಹ್ವಾನಿಸಿದೆ.
ಪುಸ್ತಕ ಬಹುಮಾನಕ್ಕೆ 2020-21ನೇ ಸಾಲಿನಲ್ಲಿ ಪ್ರಕಟವಾದ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಪ್ರವಾಸ ಕಥನ, ಮಹಾತ್ಮರ ಜೀವನ ಚರಿತೆ ಪ್ರಕಾರದ ತಲಾ ಎರಡು ಪ್ರತಿಗಳನ್ನು ಡಾ. ರಾಮಲಿಂಗೇಶ್ವರ (ಸಿಸಿರಾ), 24/16-1, 9 ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, ದೀಪಾಂಜಲಿನಗರ, ಬೆಂಗಳೂರು-26. ಇಲ್ಲಿಗೆ ಡಿ.25ರೊಳಗೆ ಕಳುಹಿಸಬೇಕು.
ಆಯ್ಕೆಯಾದ ಕೃತಿಗಳಿಗೆ 2022ರ ಜನವರಿ ಮೂರನೇ ವಾರದಲ್ಲಿ ಆಯೋಜಿಸುವ ರಾಜ್ಯ ಮಟ್ಟದ 7ನೇ ಯುವಜನ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗೆ ಮೊಬೈಲ್: 94488 80985.

Share