Connect with us


      
ಸಾಮಾನ್ಯ

ಐಪಿಎಲ್ 2022: ಅಫ್ಘನ್ ಆಟಗಾರನಿಗೆ ಬಂಪರ್ ಆಫರ್.. ಇನ್ನು ಸಹಾಗೆ ಸ್ಥಾನ ಸಿಗುವುದು ಕಷ್ಟ

UNI Kannada

Published

on

ಗುಜರಾತ್ : ಮಾರ್ಚ್ 09 (ಯು.ಎನ್.ಐ.) ಅಫ್ಘಾನಿಸ್ತಾನದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ ಗುಜರಾತ್ ಟೈಟಾನ್ಸ್‌ನಲ್ಲಿ ಆಡಲು ಐಪಿಎಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಾರಣಾಂತರಗಳಿಂದ ಜೆಸನ್ ರಾಯ್ ಸ್ಥಾನದಲ್ಲಿ ಗುರ್ಬಾಜ್ ರನ್ನ ಕನಿಷ್ಠ ಬೆಲೆ ರೂ. 50 ಲಕ್ಷ ತೆಗೆದುಕೊಂಡರು. ಗುರ್ಬಾಜ್ ರಶೀದ್ ಮತ್ತು ನೂರ್ ಅಹ್ಮದ್ ನಂತರ ತಂಡಕ್ಕೆ ಆಯ್ಕೆಯಾದ ಮೂರನೇ ಅಫ್ಘಾನ್ ಕ್ರಿಕೆಟಿಗರಾಗಿದ್ದಾರೆ. 2018ರ ಅಂಡರ್-19 ವಿಶ್ವಕಪ್‌ನೊಂದಿಗೆ ಬೆಳಕಿಗೆ ಬಂದ ಗುರ್ಬಾಜ್ 9 ಏಕದಿನ ಪಂದ್ಯಗಳಲ್ಲಿ 3 ಶತಕಗಳನ್ನು ಬಾರಿಸಿದ್ದರು.

 ವೈಯಕ್ತಿಕ ಕಾರಣಗಳಿಂದಾಗಿ ದೂರವಾದ ಜಸನ್ ರಾಯ್ ಅವರ ಬದಲಿಗೆ ವೃದ್ಧಿಮಾನ್ ಸಹಾ ಜೊತೆಗೆ ಆಸ್ಟ್ರೇಲಿಯಾದ ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್ ಕೂಡ ಲಭ್ಯವಿದ್ದು, ಜಸನ್ ರಾಯ್ ಸ್ಥಾನದಲ್ಲಿ ಗುರ್ಬಾಜ್ ರನ್ನ  ಆಯ್ಕೆ ಮಾಡಿರುವುದರಿಂದ ಸಹಾ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ. ಇದೇ ವೇಳೆ ಟೀಂ ಇಂಡಿಯಾದಿಂದ ದೂರ ಉಳಿದಿರುವ ಸಾಹಾ ಹೆಸರಿಗೆ ತಂಡದಲ್ಲಿದ್ದರೂ ಐಪಿಎಲ್ ನಲ್ಲಿ ಅವಕಾಶ ಸಿಗದೇ ಹೋಗಬಹುದು. ಮಾರ್ಚ್ 26ರಂದು ಆರಂಭವಾಗಲಿರುವ ಐಪಿಎಲ್ 15ನೇ ಸೀಸನ್ ನ ಮೊದಲ ಪಂದ್ಯ ಸಿಎಸ್ ಕೆ ಮತ್ತು ಕೆಕೆಆರ್ ನಡುವೆ ನಡೆಯಲಿದೆ.

Share