Connect with us


      




ಕ್ರೀಡೆ

IPL- 2022: ಬಿಸಿಸಿಐ ಮಹತ್ವದ ಹೇಳಿಕೆ !

UNI Kannada

Published

on

ಮುಂಬೈ, ಜ 10 (ಯುಎನ್‌ ಐ) ಐ ಪಿ ಎಲ್-2022ಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ಹರಿದಾಡುತ್ತಿವೆ. ಈ ವರ್ಷದ ಐಪಿಎಲ್ ಅನ್ನು ಸ್ವದೇಶದಲ್ಲಿ ಮಾತ್ರವಲ್ಲದೆ, ವಿದೇಶದಲ್ಲೂ ಆಯೋಜಿಸಲು ಬಿಸಿಸಿಐ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಈ ನಡುವೆ ಬಿಸಿಸಿಐ ಮಹತ್ವದ ಹೇಳಿಕೆ ನೀಡಿದ್ದು, ಐಪಿಎಲ್ ಬಗ್ಗೆ ಹರಿದಾಡುತ್ತಿರುವ ಈ ಎಲ್ಲಾ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂಬರುವ ಮೆಗಾ ಹರಾಜಿನ ನಂತರ ಐಪಿಎಲ್-2022 ನಡೆಯವ ಸ್ಥಳಗಳು, ವೇಳಾಪಟ್ಟಿ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಐಪಿಎಲ್ ಮೆಗಾ ಹರಾಜಿಗೆ ಬಿಸಿಸಿಐ ಆದ್ಯತೆ ನೀಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಐಪಿಎಲ್-2022ಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ನಂಬಬೇಡಿ. ಐಪಿಎಲ್ ವೇಳಾಪಟ್ಟಿ ಅಥವಾ ಪಂದ್ಯ ನಡೆಯುವ ಸ್ಥಳಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ನಮಗೆ ಈಗ ಮೆಗಾ ಹರಾಜು ಪ್ರಮುಖವಾಗಿದೆ. ನಾವು ಕೋವಿಡ್‌ -19 ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಹರಾಜು ನಡೆಸಿದ ನಂತರ ಐಪಿಎಲ್‌ -2022 ನಡೆಯಲಿರುವ ಸ್ಥಳಗಳು, ವೇಳಾಪಟ್ಟಿಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿ ಇನ್‌ ಸೈಡ್‌ ಸ್ಪೋರ್ಟ್‌ ನಿಯತಕಾಲಿಕೆಗೆ ಹೇಳಿದ್ದಾರೆ. ಇನ್ನೂ ಫೆಬ್ರವರಿ ಎರಡನೇ ವಾರದಲ್ಲಿ ಮೆಗಾ ಹರಾಜು ನಡೆಯುವ ನಿರೀಕ್ಷೆಯಿದೆ.

Share