Published
6 months agoon
2020-21ರಲ್ಲಿ ತತ್ಕಾಲ್ ಟಿಕೆಟ್ ಶುಲ್ಕದಿಂದ 403 ಕೋಟಿ ರೂ., ಪ್ರೀಮಿಯಂ ತತ್ಕಾಲ್ ಟಿಕೆಟ್ಗಳಿಂದ 119 ಕೋಟಿ ರೂ. ಮತ್ತು ಡೈನಾಮಿಕ್ ದರದಿಂದ 511 ಕೋಟಿ ರೂ.ಗಳನ್ನು ರೈಲ್ವೇ ಗಳಿಸಿದೆ. ಈ ಮಾಹಿತಿಯನ್ನು ಆರ್ಟಿಐದಿಂದ ಪಡೆಯಲಾಗಿದ್ದು, ಮಧ್ಯಪ್ರದೇಶದ ನಿವಾಸಿ ಚಂದ್ರಶೇಖರ್ ಗೌರ್ ಎಂಬವರು ಪ್ರಶ್ನೆ ಮಾಡಿದ್ದರು.
ರೈಲ್ವೇಯಲ್ಲಿನ ಡೈನಾಮಿಕ್ ದರ ವ್ಯವಸ್ಥೆಯು ಬೇಡಿಕೆಗೆ ಅನುಗುಣವಾಗಿ ದರವನ್ನು ನಿಗದಿಪಡಿಸುವ ವ್ಯವಸ್ಥೆಯಾಗಿದೆ. ರಾಜಧಾನಿ, ಶತಾಬ್ದಿ ಮತ್ತು ದುರಂತೋ ರೈಲುಗಳಲ್ಲಿ ಈ ದರದ ವ್ಯವಸ್ಥೆ ಇದೆ. ಈ ಮೂರು ವರ್ಗದ ಪ್ರಯಾಣಿಕರು ಸಾಮಾನ್ಯವಾಗಿ ಪ್ರೀಮಿಯಂ ಶುಲ್ಕವನ್ನು ಪಾವತಿಸುವ ಮೂಲಕ ಈ ಸೇವೆಗಳನ್ನು ಕೊನೆಯ ನಿಮಿಷದವರೆಗೂ ಪಡೆಯಬಹುದಾಗಿದೆ.
ಇದೇ ರೀತಿ ಐಆರ್ಸಿಟಿಸಿ 2021 ರಿಂದ 22ರ ಆರ್ಥಿಕ ವರ್ಷದಲ್ಲಿ ಡೈನಾಮಿಕ್ ದರಗಳಿಂದ 240 ಕೋಟಿ, ತತ್ಕಾಲ್ ಟಿಕೆಟ್ಗಳಿಂದ 353 ಕೋಟಿ ಮತ್ತು ಪ್ರೀಮಿಯಂ ತತ್ಕಾಲ್ ಶುಲ್ಕದಿಂದ 89 ಕೋಟಿ ರೂಪಾಯಿ ಸಂಗ್ರಹಿಸಿದೆ. ಇನ್ನು ರೈಲು ಕಾರ್ಯಾಚರಣೆಯಲ್ಲಿ ಯಾವುದೇ ನಿರ್ಬಂಧಗಳಿಲ್ಲದಿದ್ದಾಗ 2019-20 ರ ಹಣಕಾಸು ವರ್ಷದಲ್ಲಿ ರೈಲ್ವೇಯು ‘ಡೈನಾಮಿಕ್’ ದರಗಳಿಂದ ರೂ 1,313 ಕೋಟಿ, ತತ್ಕಾಲ್ ಟಿಕೆಟ್ಗಳಿಂದ ರೂ 1,669 ಕೋಟಿ ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್ಗಳಿಂದ ರೂ 603 ಕೋಟಿ ಗಳಿಸಿದೆ.
ಸ್ಕ್ರ್ಯಾಪ್ ಮಾರಾಟ ಮಾಡಿ 402.5 ಕೋಟಿ ಗಳಿಕೆ
ಉತ್ತರ ರೈಲ್ವೇ ಸ್ಕ್ರ್ಯಾಪ್ ಮಾರಾಟದಲ್ಲಿ 402.51 ಕೋಟಿ ರೂಪಾಯಿ ಗಳಿಸಿ ದಾಖಲೆ ಮಾಡಿದೆ. ಇದು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಗಳಿಸಿದ 208.12 ಕೋಟಿ ರೂ.ಗಳ ಮಾರಾಟಕ್ಕಿಂತ ಶೇಕಡ 93.40 ಅಧಿಕವಾಗಿದೆ. ಹೀಗಾಗಿ, 2021 ರ ಸೆಪ್ಟೆಂಬರ್ನಲ್ಲಿ ರೂ.200 ಕೋಟಿಗಳು, ಅಕ್ಟೋಬರ್ 2021 ರಲ್ಲಿ ರೂ.300 ಕೋಟಿಗಳು ಮತ್ತು ಡಿಸೆಂಬರ್ 2021 ರಲ್ಲಿ 400 ಕೋಟಿಗಳ ಸ್ಕ್ರ್ಯಾಪ್ ಮಾರಾಟ ಮಾಡಿ ಉತ್ತರ ರೇಲ್ವೇ ಅಗ್ರಸ್ಥಾನದಲ್ಲಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!