Published
6 days agoon
By
Vanitha Jainನವದೆಹಲಿ: ಮೇ 14 (ಯು.ಎನ್.ಐ.) ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ವೆಬ್ಸೈಟ್ ಅಥವಾ ಅಪ್ಲಿಕೇಶನ್ ಬಳಸಿ ತಮ್ಮ ರೈಲು ಟಿಕೆಟ್ ಗಳನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಪರಿಷ್ಕರಿಸಿದೆ. ಐಆರ್ ಸಿಟಿಸಿ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ನಲ್ಲಿ ಲಭ್ಯವಿದೆ.
ಐಆರ್ ಸಿಟಿಸಿ ತನ್ನ ಅಪ್ಲಿಕೇಶನ್ ಅಥವಾ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಬುಕ್ ಮಾಡುವ ಮೊದಲು ಬಳಕೆದಾರರ ಫೋನ್ ಸಂಖ್ಯೆಗಳು ಮತ್ತು ಇಮೇಲ್ ಐಡಿಗಳ ಪರಿಶೀಲನೆ ಕಡ್ಡಾಯಗೊಳಿಸಿದೆ. ಪರಿಶೀಲನೆ ಇಲ್ಲದೆ ಗ್ರಾಹಕರು ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ ಎಂದು ಐಆರ್ ಸಿಟಿಸಿ ಸ್ಪಷ್ಟಪಡಿಸಿದೆ.
ಹಾಗಾದರೆ ಐಆರ್ ಸಿಟಿಸಿ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಮೂಲಕ ರೈಲು ಟಿಕೆಟ್ ಗಳನ್ನು ಬುಕ್ ಮಾಡಲು ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೀವು ಹೇಗೆ ಪರಿಶೀಲಿಸಬಹುದು ಎಂಬ ಮಾಹಿತಿ ಇಲ್ಲಿದೆ.
ಹಂತ 1: ಐಆರ್ ಸಿಟಿಸಿ ವೆಬ್ಸೈಟ್ ಅಥವಾ ಅಪ್ಲಿಕೇಶನ್ಗೆ ತೆರಳಿ
ಹಂತ 2: ಪರಿಶೀಲನೆ ವಿಂಡೋಗೆ ನ್ಯಾವಿಗೇಟ್ ಮಾಡಿ
ಹಂತ 3: ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ
ಹಂತ 4: ನಿಮ್ಮ ಬಲಭಾಗದಲ್ಲಿ ಪರಿಶೀಲನೆ ಆಯ್ಕೆ ಮತ್ತು ಎಡಭಾಗದಲ್ಲಿ ಎಡಿಟ್ ಬಟನ್ ಕಾಣುತ್ತದೆ
ಹಂತ 5: ವಿವರಗಳನ್ನು ಸೇರಿಸಿದ ನಂತರ, ಪರಿಶೀಲನೆಗಾಗಿ ನಿಮ್ಮ ಫೋನ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ನೀವು ಒಟಿಪಿ (OTP) ಅನ್ನು ಸ್ವೀಕರಿಸುತ್ತೀರಿ
ಈ ವಿವರಗಳನ್ನು ನಮೂದಿಸಿ ಮತ್ತು ಐಆರ್ ಸಿಟಿಸಿಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಪರಿಶೀಲಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನಂತರ ರೈಲು ಟಿಕೆಟ್ಗಳನ್ನು ತ್ವರಿತವಾಗಿ ಬುಕ್ ಮಾಡಲು ಸಾಧ್ಯವಾಗುತ್ತದೆ.
ಪರಿಶೀಲನೆಯ ನಂತರ ರೈಲು ಟಿಕೆಟ್ ಗಳನ್ನು ಬುಕ್ ಮಾಡುವುದು ಹೇಗೆ
ಹಂತ 1: ಐಆರ್ ಸಿಟಿಸಿ ಪೋರ್ಟಲ್ ಅಥವಾ ಅಪ್ಲಿಕೇಶನ್ಗೆ ಹೋಗಿ
ಹಂತ 2: ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಬಳಸಿ ಲಾಗ್ ಇನ್ ಮಾಡಿ
ಹಂತ 3: ಮೂಲ ನಿಲ್ದಾಣ, ಗಮ್ಯಸ್ಥಾನ, ಪ್ರಯಾಣದ ದಿನಾಂಕ ಮತ್ತು ಇತರ ವಿವರಗಳನ್ನು ನಮೂದಿಸಿ
ಹಂತ 4: ರೈಲನ್ನು ಆಯ್ಕೆ ಮಾಡಿ ಮತ್ತು ‘ಬುಕ್ ನೌ’ ಕ್ಲಿಕ್ ಮಾಡಿ
ಹಂತ 5: ವಿವರಗಳನ್ನು ನಮೂದಿಸಿ – ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ಬರ್ತ್ ಆದ್ಯತೆ ಮತ್ತು ಇನ್ನಷ್ಟು
ಹಂತ 6: ಪಾವತಿ ಮಾಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಪಾವತಿಯ ವಿಧಾನವನ್ನು ಆರಿಸಿ ಮತ್ತು ಪೂರ್ಣಗೊಳಿಸಿ
ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಐಆರ್ ಸಿಟಿಸಿ ಬುಕ್ಕಿಂಗ್ ದೃಢೀಕರಣ ಮತ್ತು ಪ್ರಯಾಣದ ವಿವರಗಳನ್ನು ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸದಲ್ಲಿ ಸಿಗುತ್ತದೆ.
ಬೀದಿನಾಯಿಗಳಿಗೆ ನಿವಾಸಿಗಳು ಆಹಾರ ನೀಡಬಹುದು: ದೆಹಲಿ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್
ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಕಾರ್ತಿ ಚಿದಂಬರಂ
ಕಾನ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಕಾರ್ಯ ಬಣ್ಣಿಸಿದ ನಟ ಆರ್. ಮಾಧವನ್
ಕೇರಳದ ಕೆಲವು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ
ಹೈದರಾಬಾದ್ ನಲ್ಲಿ ಗ್ಯಾಂಗ್ ರೇಪ್ ಆರೋಪಿಗಳ ಮೇಲೆ ಎನ್ ಕೌಂಟರ್ ಕೇಸ್; ಉದ್ದೇಶಪೂರ್ವಕ ಕೊಲೆ ಎಂದ ವರದಿ
ಪೇಟಿಎಂ ಸಂಸ್ಥಾಪಕರ ‘ಮಸಾಲಾ ಟೀ’ ಟ್ವೀಟ್ ಸಖತ್ ವೈರಲ್