Published
2 weeks agoon
By
Vanitha Jainಬೆಂಗಳೂರು: ಆಗಸ್ಟ್ 05 (ಯು.ಎನ್.ಐ.) 80 ದಾಟಿರುವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಗಾಗಿ ಯಾರು ದುಃಖಿಸುವವರೇ ಇಲ್ಲ ಎಂದು #CONgressAgainstDalits ಎಂಬ ಹ್ಯಾಷ್ ಟ್ಯಾಗ್ ಅಡಿ ಸರಣಿ ಕೂ ಮಾಡಿದೆ ಬಿಜೆಪಿ ಕರ್ನಾಟಕ.
ಸಿದ್ದರಾಮಯ್ಯ, ಡಿಕೆಶಿ ಆದಿಯಾಗಿ ಕಾಂಗ್ರೆಸ್ ನಾಯಕರೆಲ್ಲರೂ 75 ರ ಈ ಇಳಿ ಹರೆಯದಲ್ಲೂ ಸೋನಿಯಾ #ED ವಿಚಾರಣೆಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮರುಕಪಟ್ಟರು. ದುರಂತ ನಾಯಕ ಖರ್ಗೆ 80 ವರ್ಷ ದಾಟಿದ್ದಾರೆ, ದುಃಖಿಸುವವರೇ ಇಲ್ಲ! ದಲಿತ ಎಂಬ ಕಾರಣಕ್ಕಾಗಿ ಇಷ್ಟೊಂದು ನಿಕೃಷ್ಟವೇ?
ಸೋನಿಯಾ ಗಾಂಧಿ ಅವರನ್ನು #ED ವಿಚಾರಣೆ ನಡೆಸುವ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ತಮ್ಮ 80 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ನಕಲಿ ಗಾಂಧಿ ಕುಟುಂಬಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಿರುವ ದಲಿತ ನಾಯಕ ಖರ್ಗೆ ಅವರನ್ನು ತನಿಖೆ ನಡೆಸುತ್ತಿರುವಾಗ ಕಾಂಗ್ರೆಸ್ ಪಕ್ಷ ಮೌನವಾಗಿದೆ. ಏಕೆ ಈ ತಾರತಮ್ಯ?
– BJP KARNATAKA (@BJP4Karnataka) 5 Aug 2022
ನಕಲಿ ಗಾಂಧಿಗಳು ತನಿಖಾ ಸಂಸ್ಥೆಯ ಎದುರು ವಿಚಾರಣೆಗೆ ಹಾಜರಾದಾಗ ಕಾಂಗ್ರೆಸ್ ಪಕ್ಷ ಆಕಾಶ ಭೂಮಿ ಒಂದಾಗುವಂತೆ ಪ್ರತಿಭಟಿಸಿತು. ಆದರೆ ಈಗ ದಲಿತ ನಾಯಕ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಜಾರಿ ನಿರ್ದೇಶನಾಲಯದ ಎದುರು ಕುಳಿತಾಗ ಕಾಂಗ್ರೆಸ್ ದಿವ್ಯ ಮೌನ ಅನುಸರಿಸುತ್ತಿದೆ. ಏಕೆ ಈ ದ್ವಂದ್ವ ನೀತಿ?
– BJP KARNATAKA (@BJP4Karnataka) 5 Aug 2022
ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿದ ಡಾ. ರಾಜ್ ಕುಟುಂಬ
ಸ್ವಾತಂತ್ರ್ಯೋತ್ಸವದಲ್ಲಿ ಸಾವರ್ಕರ್ ಫೋಟೋ ವಿವಾದ; ಓರ್ವನಿಗೆ ಚಾಕು ಇರಿತ
ಸಂಗೊಳ್ಳಿ ರಾಯಣ್ಣನ ದೇಶಭಕ್ತಿ, ಧೈರ್ಯ ಎಲ್ಲಾ ಯುವಜನರಿಗೂ ಬರಬೇಕು: ಸಿಎಂ
ಕಾಂಗ್ರೆಸ್ #FreedomMarch: ಇಂದಿನ ಬೃಹತ್ ನಡಿಗೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಹೆಜ್ಜೆ!
ತ್ಯಾಗ ಬಲಿದಾನದ ಫಲ ಸ್ವಾತಂತ್ರ್ಯ : ಸಿದ್ದರಾಮಯ್ಯ
ಕೆಯುಡಬ್ಲ್ಯೂಜೆ ಮನೆಯಂಗಳದಲ್ಲಿ ಗೌರವ ಕಾರ್ಯಕ್ರಮ..