Connect with us


      




ಸಿನೆಮಾ

‘ಅವಳು ಡಾರ್ಲಿಂಗ್’ ಎಂದು ವಿಜಯ್ ದೇವರಕೊಂಡ ಹೇಳಿದ್ಯಾರಿಗೆ?

Vanitha Jain

Published

on

ಮುಂಬೈ: ಜುಲೈ 29 (ಯು.ಎನ್.ಐ.) ಸ್ಟಾರ್ ಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವಿನ ಬಾಂಧವ್ಯದ ಬಗ್ಗೆ ಸಾಕಷ್ಟು ವದಂತಿಗಳಿವೆ. ಇದೆಲ್ಲದರ ನಡುವೆಯೂ ಅವರಿಬ್ಬರು ತಾವು ಉತ್ತಮ ಸ್ನೇಹಿತರು ಎಂದೇ ಹೇಳುತ್ತಿದ್ದಾರೆ. ಕೆಲವೊಮ್ಮೆ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಅವರು ತಮ್ಮ ಡೇಟಿಂಗ್ ವಿಚಾರವನ್ನು ತಳ್ಳಿ ಹಾಕುತ್ತಲೇ ಇದ್ದಾರೆ.

ಡಿಯರ್ ಕಾಮ್ರೇಡ್ ಮತ್ತು ಗೀತ ಗೋವಿಂದಂ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಇಬ್ಬರು ನಟರು, ಡೇಟಿಂಗ್ ಬಗ್ಗೆ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಈ ವಿಚಾರವಾಗಿ ಕಾಫಿ ವಿತ್ ಕರಣ್ ನಲ್ಲಿ ವಿಜಯ ದೇವರಕೊಂಡ ಮಾತನಾಡಿದ್ದಾರೆ.

ವಿಜಯ್ ಅವರು ಅನನ್ಯ ಪಾಂಡೆ ಜೊತೆಗೆ ಜುಲೈ 28 ರಂದು ಕಾಫಿ ವಿತ್ ಕರಣ್ ೭ ಸಂಚಿಕೆಯಲ್ಲಿ ಪಾಲ್ಗೊಂಡಿದ್ದರು. ಕರಣ್ ಜೋಹರ್ ಅವರು ರಶ್ಮಿಕಾ ಅವರೊಂದಿಗಿನ ಸಂಬಂಧದ ಬಗ್ಗೆ ನಟನನ್ನು ಕೇಳಿದಾಗ, ಉತ್ತಮ ಸ್ನೇಹಿತರು ಎಂದೇ ಉತ್ತರಿಸಿದ್ದಾರೆ.

“ನಾವು ನನ್ನ ಜೀವನದಲ್ಲಿ ನಿಜವಾಗಿಯೂ ಆರಂಭಿಕ ಹಂತದಲ್ಲಿ ಎರಡು ಚಲನಚಿತ್ರಗಳನ್ನು ಒಟ್ಟಿಗೆ ಮಾಡಿದ್ದೇವೆ. ಅವಳು ಡಾರ್ಲಿಂಗ್. ನಾನು ಅವಳನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಉತ್ತಮ ಸ್ನೇಹಿತರು. ನಾವು ಚಲನಚಿತ್ರ ವಲಯದಲ್ಲಿ ಸಂಭವಿಸುವ ಸಾಕಷ್ಟು ಏರಿಳಿತಗಳನ್ನು ಹಂಚಿಕೊಳ್ಳುತ್ತೇವೆ. ಇದು ನಮ್ಮ ನಡುವೆ ಬಾಂಧವ್ಯ ಹುಟ್ಟಿಸಿದೆ ಎಂದು ಹೇಳಿದರು.

Share