Published
6 months agoon
By
UNI Kannadaಬೆಂಗಳೂರು, ನ 15 (ಯುಎನ್ಐ) ವಿಧಾನಪರಿಷತ್ತಿನ ಚುನಾವಣೆ ಮತ್ತೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಆರೋಪ- ಪ್ರತ್ಯಾರೋಪ ಬಿರುಸುಗೊಂಡು ರಾಜಕೀಯ ಪಕ್ಷಗಳ ನಡುವೆ ಟ್ವೀಟ್ ವಾರ್ ಸುದ್ದಿಗೆ ಬಹಳ ಗುದ್ದು ಕೊಡುತ್ತಿದೆ.
ಮಾನ್ಯ ಹೆಚ್ ಡಿ ಕುಮಾರಸ್ವಾಮಿಯವರೇ ನಿಮ್ಮ ಪಕ್ಷದ ಅಧಿಕೃತ ವೆಬ್ಸೈಟ್ನಲ್ಲಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷರ ಭಾವ ಚಿತ್ರಕ್ಕೇ ಜಾಗವಿಲ್ಲ. ಅವರು ನಿಮ್ಮ ಕುಟುಂಬದವರಲ್ಲ ಎಂಬ ಕಾರಣಕ್ಕಾಗಿ ಈ ದ್ವೇಷವೇ? ಇದೂ ಕುಟುಂಬ ರಾಜಕಾರಣದ ಭಾಗವೇ? ಇದು ಮಿಷನ್ ಕುಟುಂಬ ರಾಜಕಾರಣವಲ್ಲವೇ ಎಂದು ರಾಜ್ಯ ಬಿಜೆಪಿ ಮಾಜಿ ಮುಖ್ಯಮಂತ್ರಿ ಹೆಚ್ .ಡಿ . ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಜೆಪಿ ಕುಟುಂಬ ರಾಜಕಾರಣ ಕುರಿತಂತೆ ನಿನ್ನೆ ಜೆಡಿಎಸ್ ಮಾಡಿದ್ದ ಟ್ವಿಟ್ ಗೆ ಖಡಕ್ ಉತ್ತರಿ ನೀಡಿರುವ ಬಿಜೆಪಿ ಕುಮಾರಸ್ವಾಮಿ ಅವರೇ, ಜಾತ್ಯತೀತ ಜನತಾ ದಳ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಯಾರ ಕುಟುಂಬಕ್ಕೆ ನೀಡಿದ್ದೀರಿ?
ರಾಜ್ಯ ಅಧ್ಯಕ್ಷ ಸ್ಥಾನದಲ್ಲಿ ಸುದೀರ್ಘ ಅವಧಿಗೆ ಇದ್ದಿದ್ದು ಯಾರ ಕುಟುಂಬ? ಎಂದು ಪ್ರಶ್ನಿಸಿದೆ.ಕುಮಾರಸ್ವಾಮಿ ಅವರೇ, ಜೆಡಿಎಸ್ಗೆ ಅಧಿಕಾರ ಸಿಗುತ್ತದೆ ಎಂದು ಸ್ಪಷ್ಟವಾದ ಕ್ಷಣದಿಂದ ನಿಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ನೀವೇ ಯಾಕೆ ಆಯ್ಕೆಯಾಗುತ್ತೀರಿ? ಪಕ್ಷಕ್ಕಾಗಿ ದುಡಿಮೆ ಮಾಡಿದವರಿಗೆ ಸ್ವಲ್ಪ ಅವಕಾಶ ಕೊಡಬಹುದಲ್ಲವೇ!!? ಎಂದು ಬಿಜೆಪಿ ತಿರುಗೇಟು ಕೊಟ್ಟಿದೆ
ಓವೈಸಿ.. ಕೇಳಿಸಿಕೊಳ್ಳಿ, ನಾಯಿ ಕೂಡ ಔರಂಗಜೇಬನ ಗೋರಿ ಮೇಲೆ ಮೂತ್ರ ಮಾಡಲ್ಲ: ದೇವೇಂದ್ರ ಫಡ್ನವೀಸ್
ಕೇಜ್ರಿವಾಲ್, ಶರದ್ ಪವಾರ್ ಮೇಲೆ ಸಚಿವ ಧರ್ಮೇಂದ್ರ ಪ್ರಧಾನ್ ‘ಕಪಾಳಮೋಕ್ಷ’
ದೆಹಲಿಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ; ಸ್ವತಂತ್ರ ಭಾರತದ ದೊಡ್ಡ ವಿನಾಶ ಎಂದ ಕೇಜ್ರಿವಾಲ್
ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಇಲ್ಲವೇ ; ಹೆಚ್ಡಿಕೆ ಪ್ರಶ್ನೆ
ರಾಷ್ಟ್ರವನ್ನು ದಾರಿತಪ್ಪಿಸುವ ನಕಲಿ ಹಿಂದುತ್ವ ಪಕ್ಷವಿದೆ: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ
ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ್ದ ನಟಿಯ ಬಂಧನ