Connect with us


      




ದೇಶ

ಜ್ಞಾನವಾಪಿ ಮಸೀದಿಯ ಕೊಠಡಿಯಲ್ಲಿ ಶಿವಲಿಂಗ ಪತ್ತೆ: ವಿಎಚ್‌ಪಿ ಸಂತಸ

Iranna Anchatageri

Published

on

ಹೊಸದಿಲ್ಲಿ: ಮೇ 16 (ಯು.ಎನ್‌.ಐ.) ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ನಡೆದ ಸಮೀಕ್ಷೆಯ ವೇಳೆ ಕೊಠಡಿಯೊಂದರಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಪ್ರತಿಪಾದಿಸಿದ್ದಾರೆ.

ಸಮೀಕ್ಷೆ ವೇಳೆ ಎರಡೂ ಕಡೆಯ ವಕೀಲರ ಸಮ್ಮುಖದಲ್ಲಿ ಶಿವಲಿಂಗ ಪತ್ತೆಯಾಗಿರುವುದು ಸಂತಸದ ಸಂಗತಿ. ಹಾಗಾಗಿ ಶಿವಲಿಂಗ ಪತ್ತೆಯಾಗಿರುವ ಸ್ಥಳದಲ್ಲಿ ದೇವಾಲಯ ಇತ್ತು.. ಈಗಲೂ ಇದೆ ಮತ್ತು 1947 ರಲ್ಲಿಯೂ ಇತ್ತು. ಇದು ಸ್ವಯಂ ಸಾಬೀತಾಗಿದೆ. ಇಂತಹ ಪುರಾವೆ ಪಡೆದ ನಂತರ ಎಲ್ಲ ದೇಶವಾಸಿಗಳು ಅದನ್ನು ಸ್ವೀಕರಿಸುತ್ತಾರೆ ಹಾಗೂ ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.

ಸದ್ಯ ಈ ವಿಷಯವು ನ್ಯಾಯಾಲಯದಲ್ಲಿದೆ. ನ್ಯಾಯಾಲಯವು ಆ ಭಾಗವನ್ನು ಸೀಲ್ ಮಾಡಿದೆ. ಅವ್ಯವಹಾರ ನಡೆಯದಂತೆ ನೋಡಿಕೊಳ್ಳುವುದು ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಎಂದು ಅಲೋಕ್ ಕುಮಾರ್ ಹೇಳಿದರು.

“ಈಗ ಈ ವಿಷಯವು ಕೋರ್ಟ್ ನಲ್ಲಿರುವುದರಿಂದ ಪ್ರಕರಣ ಅಂತ್ಯವನ್ನು ತಲುಪಲಿದೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ನ್ಯಾಯಾಲಯದ ತೀರ್ಪು ಬಂದ ನಂತರ ನಾವು ಅದರ ಬಗ್ಗೆ ಮತ್ತಷ್ಟು ಯೋಚಿಸುತ್ತೇವೆ ಮತ್ತು ನಂತರ ಮುಂದಿನ ಕ್ರಮಗಳನ್ನು ವಿಶ್ವ ಹಿಂದೂ ಪರಿಷತ್ತು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯಲ್ಲಿ ಉಭಯ ಪಕ್ಷಗಳ ಸಮ್ಮುಖದಲ್ಲಿ ಮೂರು ದಿನಗಳ ಕಾಲ ನಡೆದ ಸರ್ವೆ ಇಂದು ಪೂರ್ಣಗೊಂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗ್ರಫಿ ವರದಿಯನ್ನು ಮೇ 17ರ ಮೊದಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನ್ಯಾಯಾಲಯವು ಮೇ 17ರಂದು ವಿಚಾರಣೆ ನಡೆಸಲಿದೆ.

Share