Connect with us


      
ಅಪರಾಧ

ಗಂಗಮ್ಮ ದೇವಸ್ಥಾನದ ಬಳಿ ದುಷ್ಕರ್ಮಿಗಳಿಂದ ಜಗನ್ ಮೋಹನ್ ಬರ್ಬರ ಹತ್ಯೆ

Iranna Anchatageri

Published

on

ಕೋಲಾರ: ಜೂನ್ 07 (ಯು.ಎನ್.ಐ.) ಮುಳಬಾಗಿಲು ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೋಲಾರದ ಮುಳಬಾಗಿಲಿನಲ್ಲಿ‌ ಜರುಗಿದೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬಲಗೈ ಬಂಟನಾಗಿದ್ದ, ನಗರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ಜಗನ್ ಮೋಹನ್ / ಪಳ್ಳಿ ಮೋಹನ್ ಕೊಲೆಯಾದ ಸದಸ್ಯನಾಗಿದ್ದಾನೆ.

ಇಂದು ಬೆಳೆಗ್ಗೆ ಮುತ್ಯಾಲಪೇಟೆಯ ಗಂಗಮ್ಮ ದೇವಾಲಯಕ್ಕೆ ಹೋಗುವಾಗ ಅಪರಿಚಿತರ ಗುಂಪೊಂದು ಜಗನ್ ಮೋಹನ್ ಅವರ ಮೇಲೆ ದಾಳಿ ಮಾಡಿ ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮುಳಬಾಗಿಲು ನಗರದ ಮುತ್ಯಾಲಪೇಟೆಯಲ್ಲಿ ಈ ಘಟನೆ ಜರುಗಿದ್ದು, ನಾಲ್ಕು ಜನ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿದ್ದಾರೆ. ಇನ್ನು ತೀವ್ರವಾಗಿ ಗಾಯಗೊಂಡಿದ್ದ ಮೋಹನ್ ಅವರು ಆಸ್ಪತ್ರೆಗೆ ಸಾಗಿಸು ಮಾರ್ಗಮಧ್ಯೆ ಸಾವನ್ನಪ್ಪಿದ್ದು, ಈತ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗನಾಗಿದ್ದ.

ಇನ್ನು ಸ್ಥಳಕ್ಕೆ ಮುಳಬಾಗಿಲು ಡಿವೈಎಸ್ ಪಿ ಶ್ರೀನಿವಾಸಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Share