Published
6 months agoon
By
Vanitha Jainಚೆನ್ನೈ: ಜನೆವರಿ 11 (ಯು.ಎನ್.ಐ.) ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಅನ್ನು ಜನೆವರಿ 16ರ ಬದಲು 17ರಂದು ಆಚರಿಸುತ್ತಿರುವುದಾಗಿ ತಮಿಳುನಾಡು ಸರಕಾರ ಆದೇಶ ಹೊರಡಿಸಿದೆ. ಅಲಂಗನಲ್ಲೂರು ಜಲ್ಲಿಕಟ್ಟು ಕಾರ್ಯಕ್ರಮಗಳು ಜನವರಿ 16 ರ ಬದಲು ಸೋಮವಾರ ಜನವರಿ 17 ರಂದು ನಡೆಯಲಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.
ಜನೆವರಿ 16 ಭಾನುವಾರ ಬಂದಿದೆ. ಅಂದು ತಮಿಳುನಾಡು ಸರಕಾರ ಕೊರೋನಾ ಹಾಗೂ ಒಮೈಕ್ರಾನ್ ಏರಿಕೆ ಹಿನ್ನೆಲೆ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಿದೆ. ಆದ ಕಾರಣ ಜನೆವರಿ 17ರಂದು ಜಲ್ಲಿಕಟ್ಟು ಆಚರಿಸುವುದಾಗಿ ಸರಕಾರ ಹೇಳಿದೆ.
ಕಳೆದ ಕೆಲವು ದಿನಗಳಿಂದ ಕೋವಿಡ್ -19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡ ಕಾರಣ ತಮಿಳುನಾಡು ಸರ್ಕಾರ ಸೋಮವಾರ ಜಲ್ಲಿಕಟ್ಟುಗಾಗಿ ಕೆಲವು ನಿರ್ಬಂಧಗಳನ್ನು ಹೇರಿತ್ತು. ಕೇವಲ 150 ಪ್ರೇಕ್ಷಕರಿಗೆ ಅಥವಾ ಒಟ್ಟು ಆಸನ ಸಾಮಥ್ರ್ಯ ಶೇ 50ರಷ್ಟು ಮಾತ್ರ ಅವಕಾಶ ನೀಡಿದೆ. ಕನಿಷ್ಟ 48 ಗಂಟೆಗಳ ಮೊದಲು ಆರ್ಟಿ-ಪಿಸಿಆರ್ ಪರೀಕ್ಷೆಯ ಋಣಾತ್ಮಕ ವರದಿಯ ಜೊತೆಗೆ ಎರಡು ಲಸಿಕೆ ಪ್ರಮಾಣಪತ್ರ ನೀಡುವುದನ್ನು ಮತ್ತು ಗೂಳಿ ಮಾಲೀಕರು ಮತ್ತು ಸಹಾಯಕರು, ಕ್ರೀಡೆಗಾಗಿ ತಮ್ಮ ಪ್ರಾಣಿಗಳನ್ನು ನೋಂದಾಯಿಸಲು ಕಡ್ಡಾಯಗೊಳಿಸಿದೆ
ನೋಂದಣಿ ಸಮಯದಲ್ಲಿ ಬುಲ್ ಮಾಲೀಕರು ಮತ್ತು ಅದರ ತರಬೇತುದಾರರಿಗೆ ಮಾತ್ರ ಅವಕಾಶವಿರುತ್ತದೆ. ಜಿಲ್ಲಾಡಳಿತ ನೀಡಿದ ಮಾನ್ಯ ಗುರುತಿನ ಚೀಟಿ ಹೊಂದಿರುವವರನ್ನು ಮಾತ್ರ ಕಣದ ಒಳಗೆ ಬಿಡಲಾಗುವುದು ಎಂದು ಸರಕಾರ ಸೋಮವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡೇಟು; ಸಿಸಿಕ್ಯಾಮೆರಾದಲ್ಲಿ ಕೃತ್ಯ ಸೆರೆ
ಸಿಧು ಮೂಸೆವಾಲಾರ ಕೊನೆಯ ಹಾಡನ್ನ ಯೂಟ್ಯೂಬ್ ನಿಂದ ತೆಗೆದುಹಾಕಿರೋದೇಕೆ?
ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ; ತೀಸ್ತಾ ಸೆತಲ್ವಾಡ್ ಪರ ವಿಶ್ವಸಂಸ್ಥೆ ಅಧಿಕಾರಿ ದನಿ
“ರಾಷ್ಟ್ರೀಯ ಭದ್ರತೆಗೆ ಡ್ರಗ್ಸ್ ದೊಡ್ಡ ಸವಾಲು” : ಷಾ
ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ