Connect with us


      
ಅಪರಾಧ

ಪೊಲೀಸ್ ಕಮೀಷನರ್ ಕಚೇರಿಗೆ ದಿಢೀರ್​​​ ಭೇಟಿ ನೀಡಿದ ಜಮೀರ್

Kumara Raitha

Published

on

ಬೆಂಗಳೂರು: ಬಿಟ್ ಕಾಯಿನ್ ಬೆಳವಣಿಗೆ ಬೆನ್ನಲ್ಲೆ ಶಾಸಕ‌ ಜಮೀರ್ ಅಹ್ಮದ್ ಪೊಲೀಸ್ ಕಮೀಷನರ್ ಕಚೇರಿಗೆ ದಿಢೀರ್ ಭೇಟಿ ನೀಡಿದ್ದಾರೆ.

ಶಾಸಕ‌ ಜಮೀರ್ ಅಹ್ಮದ್ ಕಮೀಷನರ್ ಕಚೇರಿಗೆ ಭೇಟಿ ನೀಡಿರುವುದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ. ಯಾವ ಕಾರಣಕ್ಕೆ ಬಂದಿದ್ದರು ಅನ್ನೋದನ್ನ ಜಮೀರ್ ಅಹ್ಮದ್ ಖಾನ್ ಹೇಳಿಲ್ಲ.

ಕಮಿಷನರ್ ಕಚೇರಿಗೆ ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿದ ಜಮೀರ್ ಅವರು, ಶಾಸಕನಾಗಿ ಸಹಜವಾಗಿ ಭೇಟಿಯಾಗಿದ್ದೇನೆ. ತಿಂಗಳಿಗೊಮ್ಮೆಯಾದರೂ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡುತ್ತಲೇ ಇರುತ್ತೇನೆ. ಅದೇ ರೀತಿ ಇಂದು ಸಹ ಬಂದಿದ್ದೆ. ಸಂಜೆ 5.30 ಕ್ಕೆ ಬಂದಿದ್ದೆ. ನನ್ನ ಕ್ಷೇತ್ರದಲ್ಲಿ ಏನಾದರೂ ಆಗಿದೆಯಾ? ಅಂತಹ ಯಾವುದೇ ಕಾರಣವಿಲ್ಲ. ಸಹಜವಾಗಿ ಬಂದಿದ್ದೆ. ಬರುವಾಗ ಸೌಮೇಂದು ಮುಖರ್ಜಿ ಸಿಕ್ಕಿದ್ದರು, ಅವರನ್ನು ಸಹಜವಾಗಿ ಮಾತನಾಡಿಸಿದೆ ಎಂದು ಹೇಳಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ಬಂದಿದ್ದೆ ಎಂಬುದನ್ನು ಹೇಳದೆ ಹೊರಟರು.

Share