Connect with us


      
ದೇಶ

ಕಾಶ್ಮೀರ ನೋವಿನಲ್ಲಿದೆ: ಮೆಹಬೂಬಾ ಮುಫ್ತಿ

Vanitha Jain

Published

on

ನವದೆಹಲಿ, ಡಿಸೆಂಬರ್ 6(ಯು.ಎನ್.ಐ): ಕೇಂದ್ರಾಡಳಿತ ಪ್ರದೇಶದ ಜನರ ದಬ್ಬಾಳಿಕೆಯನ್ನು ಖಂಡಿಸಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ತಕ್ಷಣವೇ ಅಮಾಯಕರ ಹತ್ಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಇಲ್ಲಿನ ಜಂತರ್ ಮಂತರ್‍ನಲ್ಲಿ ಧರಣಿ ನಡೆಸಿದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, ಕಾಶ್ಮೀರದಲ್ಲಿ ತನಗೆ ಪ್ರತಿಭಟನೆ ನಡೆಸಲು ಅನುಮತಿ ನೀಡದ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಧರಣಿ ನಡೆಸಲು ನಿರ್ಧರಿಸಿದ್ದೇನೆ. ಆದರೆ ಪ್ರತಿ ಬಾರಿಯೂ ಪ್ರತಿಭಟನೆಯನ್ನು ಹಮ್ಮಿಕೊಂಡಾಗಲೂ ಕಾಶ್ಮೀರ ಪೊಲೀಸರೇ ನನ್ನನ್ನು ಬಂಧಿಸಿ ಹೊರಹಾಕುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

“ಕಾಶ್ಮೀರವು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅನುಮತಿ ನೀಡದ ಬಂಧಿಖಾನೆಯಾಗಿ ಮಾರ್ಪಟ್ಟಿದೆ. ಆಗಸ್ಟ್ 2019 ರಲ್ಲಿ, ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು ಮತ್ತು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಅಂದಿನಿಂದ ಜನರನ್ನು ದಮನ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಪೊಲೀಸ್ ಕ್ರಮದ ಬಗ್ಗೆ ತಾನು ಪ್ರಶ್ನೆಗಳನ್ನು ಎತ್ತಿರುವ ಆರೋಪವನ್ನು ತಳ್ಳಿಹಾಕಿದ ಅವರು “ಎನ್‍ಕೌಂಟರ್ ನಡೆದಾಗ ಮತ್ತು ಉಗ್ರಗಾಮಿ ಕೊಲ್ಲಲ್ಪಟ್ಟಾಗ, ಯಾರೂ ಪ್ರಶ್ನಿಸುವುದಿಲ್ಲ. ಆದರೆ ನಾಗರಿಕರೊಬ್ಬರು ಕೊಲ್ಲಲ್ಪಟ್ಟಾಗ, ಜನರು ಹೊರಗೆ ಬಂದು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾರೆ” ಎಂದು ಅವರು ಹೇಳಿದರು.

“ಕಾಶ್ಮೀರ ನೋವಿನಲ್ಲಿದೆ” ಎಂಬ ಫಲಕವನ್ನು ಹಿಡಿದುಕೊಂಡ ಮೆಹಬೂಬಾ, “ನಾಗಾಲ್ಯಾಂಡ್‍ನಲ್ಲಿ 13 ನಾಗರಿಕರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಯನ್ನು ನೀವು ನೋಡಿದ್ದೀರಿ. ತಕ್ಷಣವೇ ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಕಾಶ್ಮೀರದಲ್ಲಿ ಏಕೆ ಈ ಕ್ರಮ ಜರುಗುವುದಿಲ್ಲ? ಈ ವಿಚಾರಣೆಗಳಿಂದ ಸತ್ಯ ಹೊರಬರುತ್ತದೆ ಎಂಬ ಭರವಸೆ ಇಲ್ಲ ಆದರೆ ಇನ್ನೂ ಸರ್ಕಾರ ತನಿಖೆಯ ನಾಟಕವಾಡುತ್ತಿದೆ ಎಂದು ಬಿಜೆಪಿಯ ನಡೆಯನ್ನು ವಿವರಿಸಿದರು.

Share