Published
4 months agoon
By
UNI Kannadaಜಾರ್ಖಂಡ್ : ಜನೆವರಿ 16 (ಯು.ಎನ್.ಐ.) ಈತ ನಿಜವಾಗಿಯೂ ಅದೃಷ್ಟಶಾಲಿ ಎಂದು ಹೇಳಬಹುದು. ಏಕೆಂದರೆ .ಅನೇಕ ಜನರು ಕೊರೊನಾ ವೈರಸ್ನಿಂದ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಬಳಲುತ್ತಿದ್ದರೆ. ಈ ವ್ಯಕ್ತಿ ಈಗಷ್ಟೇ ಪಾರ್ಶ್ವವಾಯುದಿಂದ ಚೇತರಿಸಿಕೊಂಡಿದ್ದಾನೆ. ನಾಲ್ಕು ವರ್ಷಗಳಿಂದ ತನ್ನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿ ಈಗ ಗುಣಮುಖನಾಗಿದ್ದಾನೆ.
ದೇಶದಲ್ಲಿ ಕೊರೊನಾ ವೈರಸ್ ಅನ್ನು ತಡೆಯಲು ಅಧಿಕಾರಿಗಳು ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದುವರೆಗೆ ದೇಶಾದ್ಯಂತ 150 ಕೋಟಿಗೂ ಹೆಚ್ಚು ಕೋವಿಡ್ಗೆ ಲಸಿಕೆ ಹಾಕಲಾಗಿದೆ. ಅಂತಹ ವ್ಯಾಕ್ಸಿನೇಷನ್ ಸಮಯದಲ್ಲಿ ಕೊರೊನಾ ಲಸಿಕೆಯು ಒಬ್ಬ ವ್ಯಕ್ತಿಗೆ ಅದ್ಭುತವಾಗಿ ಕೆಲಸ ಮಾಡಿದೆ. ಲಸಿಕೆಯು ಪಾರ್ಶ್ವವಾಯು ಪೀಡಿತ ವ್ಯಕ್ತಿಗೆ ವರವಾಗಿ ಪರಿಣಮಿಸಿದೆ. ಹಲವಾರು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ದೇಹದಲ್ಲಿ ಚಲನೆಗಳು ಕಂಡುಬಂದಿದೆ. ಅಷ್ಟೇ ಅಲ್ಲದೇ ಮಾತು ಬಾರದೇ ಮೂಕನಾಗಿ ಹೋಗಿದ್ದ ವ್ಯಕ್ತಿ ಮತ್ತೆ ಮಾತನಾಡತೊಡಗಿದ್ದಾನೆ. ಇದನ್ನು ನೋಡಿದ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ. ಜಾರ್ಖಂಡ್ನ ಬೊಕಾರೊ ಜಿಲ್ಲೆಯಲ್ಲಿ ಈ ಪವಾಡ ನಡೆದಿದೆ.
ಮಾಧ್ಯಮ ವರದಿಯ ಪ್ರಕಾರ, ದುಲಾರ್ ಚಂದ್ (55) ಅವರು ನಾಲ್ಕು ವರ್ಷಗಳ ಹಿಂದೆ ರಾಜ್ಯದ ಬೊಕಾರೊ ಜಿಲ್ಲೆಯ ಪೆಟರ್ವಾರ್ ತಾಲ್ಲೂಕಿನ ಸಲ್ಗಾಡಿ ಗ್ರಾಮದಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಲೆ ಮತ್ತು ಬೆನ್ನುಮೂಳೆಯ ಮೇಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯರು ಅತ್ಯಂತ ಕಷ್ಟದಲ್ಲಿ ಜೀವ ಉಳಿಸಿದರು. ಅಂದಿನಿಂದ, ದುಲಾರ್ ಚಂದ್ ಅವರ ದೇಹದಲ್ಲಿನ ಅಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದವು. ಮಾತು ಕೂಡ ಬಿದ್ದು ಹೋಗಿತ್ತು. ಅಂದಿನಿಂದ ಈತ ಹಾಸಿಗೆಯಿಂದ ಕದಲಲಿಲ್ಲ. ಈ ನಡುವೆ ಕೊರೊನಾ ಅಬ್ಬರ ಹೆಚ್ಚಾಗಿದ್ದ ಕಾರಣ ಲಸಿಕೆಯನ್ನು ಕುಟುಂಬ ಸದಸ್ಯರು ದುಲಾರ್ ಚಂದ್ಗೆ ಹಾಕಿಸಿದರು.
ಜನವರಿ 4ರಂದು ಅಂಗನವಾಡಿ ಕಾರ್ಯಕರ್ತೆಯರು ದುಲಾರ್ ಚಂದ್ ಮನೆಗೆ ತೆರಳಿ ಕೊವಿ ಶೀಲ್ಡ್ ಲಸಿಕೆ ಹಾಕಿದ್ದರು. ಆದರೆ ಇಲ್ಲಿ ಅದ್ಭುತವೇ ನಡೆದಿದೆ. ಲಸಿಕೆಯು ದುಲರ್ಚಂದ್ಗೆ ಹೊಸ ಜೀವನವನ್ನು ನೀಡಿತು, ಮರುದಿನದಿಂದ ಆತ ಮಾತನಾಡತೊಡಗಿದ. ಇದಲ್ಲದೆ, ದೇಹದ ಅಂಗಾಂಗಗಳಲ್ಲಿ ಚಲನೆ ಕಂಡು ಬಂದಿದೆ. ದುಲಾರಚಂದ್ ಕುಟುಂಬದವರು ಸಂತಸದಲ್ಲಿ ಮುಳುಗಿದ್ದರು. ಕೋವಿಡ್ ಲಸಿಕೆ ನಿಜವಾಗಿಯೂ ಅದ್ಭುತಗಳನ್ನು ಮಾಡಿದೆ ಎಂದು ಗ್ರಾಮ ಪಂಚಾಯಿತಿಯ ಸರಪಂಚ್ ಸುಮಿತ್ರಾ ದೇವಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಯಾರೂ ಊಹಿಸಲು ಸಾಧ್ಯವಾಗದ ಅದ್ಭುತ ನಡೆದಿದೆ. ಅದು ವೈದ್ಯರಿಗೂ ಅರ್ಥವಾಗಲಿಲ್ಲ. ಈ ಬಗ್ಗೆ ಅಧ್ಯಯನ ಅಗತ್ಯವಿದೆ ಎಂದು ಸಿವಿಲ್ ಸರ್ಜನ್ ಡಾ.ಜಿತೇಂದ್ರ ಕುಮಾರ್ ಹೇಳಿದ್ದಾರೆ.,
“ನೆಹರೂ ಅವರು ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಕೊಡಲು ಮುಂದಾಗಿದ್ದರು”
ಯುಪಿ ರಸ್ತೆ ಅಪಘಾತದಲ್ಲಿ 9 ಮಂದಿ ಸಾವು: ಧನಸಹಾಯ ಘೋಷಿಸಿದ ಮೋದಿ
ನಮಗೆ ಯಾವಾಗಲೂ ಜನರು ಮೊದಲು: ಪೆಟ್ರೋಲ್ ಬೆಲೆ ಇಳಿಸಿದ ಬಳಿಕ ಪ್ರಧಾನಿ ಮೋದಿ ಹೇಳಿಕೆ
ಜನಸಾಮಾನ್ಯರಿಗೆ ಗುಡ್ ನ್ಯೂಸ್; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ!
ಜ್ಞಾನವಾಪಿ ಮಸೀದಿಯ ಶಿವಲಿಂಗದ ಬಗ್ಗೆ ಪೋಸ್ಟ್ ಹಾಕಿದ್ದ ಪ್ರಾಧ್ಯಾಪಕರಿಗೆ ಜಾಮೀನು ಮಂಜೂರು
ಅಕ್ರಮ ಫ್ಲಾಟ್ ನಿರ್ಮಾಣ: ನೋಟಿಸ್ ಜಾರಿ ಮಾಡಿದ ಬಿಎಂಸಿ