Connect with us


      
ಕ್ರೀಡೆ

ತಂದೆಯಾದ ಕ್ರಿಕೆಟಿಗ … ಭಾವೋದ್ವೇಗದ ಸ್ವಾಗತ

UNI Kannada

Published

on

ಲಂಡನ್‌, ಜ 8(ಯುಎನ್‌ ಐ) ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೇಸನ್ ರಾಯ್ ತಂದೆಯಾಗಿದ್ದಾರೆ. ಅವರ ಪತ್ನಿ ಎಲ್ಲೀ ಮೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೇಸನ್ ರಾಯ್… ​​ ಪತ್ನಿ, ಮಕ್ಕಳ ಜೊತೆಗಿರುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಗನಿಗೆ ಎಲೋಸಿ ಎಂದು ನಾಮಕರಣ ಮಾಡಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ. … ” ಜನವರಿ 5, 2022 ರಂದು ಜನಿಸಿರುವ… ನನ್ನ ಪುಟ್ಟ ಕಂದ.. ಕುಟುಂಬಕ್ಕೆ ಸುಸ್ವಾಗತ.. ನಾನು ತುಂಬಾ ಹೆಮ್ಮೆಪಡುತ್ತೇನೆ. ಮನಸ್ಸು ಧನ್ಯತಾ ಭಾವದಿಂದ ತುಂಬಿಹೋಗಿದೆ ಎಂದು ಭಾವುಕರಾಗಿ ಬರದುಕೊಂಡಿದ್ದಾರೆ.

ಇದರೊಂದಿಗೆ ಸಹ ಆಟಗಾರರು, ಅಭಿಮಾನಿಗಳಿಂದ ರಾಯ್ ದಂಪತಿಗೆ ಶುಭಾಶಯಗಳ ಹೊಳೆ ಹರಿದುಬಂದಿದೆ. 2017 ಅಕ್ಟೋಬರ್ ನಲ್ಲಿ , ರಾಯ್ ಗೆಳತಿ ಎಲ್ಲೀ ಅವರನ್ನು ವಿವಾಹವಾಗಿದ್ದರು. ದಂಪತಿಗೆ 2019 ರಲ್ಲಿ ಎವರ್ಲಿ ಎಂಬ ಮಗಳು ಹುಟ್ಟಿದ್ದಳು. ಈಗ ಗಂಡು ಮಗು ಜನಿಸಿದೆ. ಜೇಸನ್ ರಾಯ್ ಕೊನೆಯ ಬಾರಿಗೆ ಟಿ-20 ವಿಶ್ವಕಪ್-2021 ಟೂರ್ನಿಯ ಭಾಗವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಜೇಸನ್ ರಾಯ್ ಐಪಿಎಲ್-2021ರ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ರತಿನಿಧಿಸಿದ್ದರು ಡೇವಿಡ್ ವಾರ್ನರ್ ಸ್ಥಾನದಲ್ಲಿ ತಂಡಕ್ಕೆ ಬಂದಿದ್ದ ಅವರು ಉತ್ತಮ ಪ್ರದರ್ಶನದಿಂದ ಹೆಸರಾಗಿದ್ದಾರೆ.

Share