Connect with us


      




ಸಾಮಾನ್ಯ

ಐಸಿಸಿ ಸಮಿತಿಗೆ ಜಯ್ ಶಾ ಪ್ರವೇಶ, ರಮೀಜ್ ರಾಜಾಗೆ ಶಾಕ್!

Iranna Anchatageri

Published

on

ಹೊಸದಿಲ್ಲಿ: ಏಪ್ರಿಲ್ 10 (ಯು.ಎನ್.ಐ.) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ (ಐಸಿಸಿ) ಮಹತ್ವದ ಜವಾಬ್ದಾರಿ ಪಡೆದಿದ್ದಾರೆ. ಜಯ್ ಶಾ ಅವರನ್ನು ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಸದಸ್ಯ ಮಂಡಳಿಯ ಪ್ರತಿನಿಧಿಯಾಗಿ ನೇಮಿಸಲಾಗಿದೆ. ಭಾನುವಾರ ನಡೆದ ಐಸಿಸಿಯ ತ್ರೈಮಾಸಿಕ ಸಭೆಯಲ್ಲಿ ಇದನ್ನು ಪ್ರಕಟಿಸಲಾಗಿದೆ.

ಪುರುಷರ ಕ್ರಿಕೆಟ್ ಸಮಿತಿಯಲ್ಲಿ ಒಳಗೊಂಡಿರುವ ಸದಸ್ಯರು:
ಮಹೇಲ ಜಯವರ್ಧನೆ – ಮಾಜಿ ಆಟಗಾರ ಪ್ರತಿನಿಧಿ (ಮರು ನೇಮಕ)
ಗ್ಯಾರಿ ಸ್ಟೆಡ್ – ರಾಷ್ಟ್ರೀಯ ತಂಡದ ಕೋಚ್ ಪ್ರತಿನಿಧಿ
ಜಯ್ ಶಾ – ಸದಸ್ಯ ಮಂಡಳಿಯ ಪ್ರತಿನಿಧಿ
ಜೋಯಲ್ ವಿಲ್ಸನ್ – ICC ಎಲೈಟ್ ಪ್ಯಾನೆಲ್ ಅಂಪೈರ್
ಜೇಮೀ ಕಾಕ್ಸ್ – ಎಂಸಿಸಿ ಪ್ರತಿನಿಧಿ

ರಮೀಜ್ ರಾಜಾ ಪ್ರಸ್ತಾವನೆ ತಿರಸ್ಕಾರ
ಮತ್ತೊಂದೆಡೆ ನಾಲ್ಕು ದೇಶಗಳ (ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ) ನಡುವೆ ಪಂದ್ಯಾವಳಿಯನ್ನು ಆಯೋಜಿಸುವ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಅವರ ಪ್ರಸ್ತಾಪವನ್ನು ಐಸಿಸಿ ಸರ್ವಾನುಮತದಿಂದ ತಿರಸ್ಕರಿಸಿದೆ.

Share