Connect with us


      
ಕರ್ನಾಟಕ

ಕಾಲೇಜು ಪ್ರಿನ್ಸಿಪಾಲ್ ಕೆನ್ನೆಗೆ ಬಾರಿಸಿದ ಜೆಡಿಎಸ್ ಶಾಸಕ

Lakshmi Vijaya

Published

on

ಮಂಡ್ಯ: ಜೂನ್ 22 (ಯು.ಎನ್.ಐ.) ಮಂಡ್ಯ ಕ್ಷೇತ್ರದ ಜೆಡಿಎಸ್ ಶಾಸಕ ಎಂ. ಶ್ರೀನಿವಾಸ್ ಕಾಲೇಜು ಪ್ರಾಂಶುಪಾಲರ ಕೆನ್ನೆಗೆ ಬಾರಿಸಿರುವ ವಿಡಿಯೋ ಭಾರೀ ವೈರಲ್ ಆಗಿದೆ.  ಶಾಸಕ ಎಂ ಶ್ರೀನಿವಾಸ್ ಕಾಲೇಜಿಗೆ ಭೇಟಿ ನೀಡಿದ್ದು, ಕಂಪ್ಯೂಟರ್ ಲ್ಯಾಬ್‌ನ ಅಭಿವೃದ್ಧಿ ಕಾರ್ಯಗಳ ಬಗ್ಗೆ  ಪ್ರಾಂಶುಪಾಲರು ಸ್ಪಷ್ಟ ಉತ್ತರವನ್ನು ನೀಡಲು ಪರದಾಡಿದರಿಂದ ಕೋಪಗೊಂಡ ಅವರು ಪ್ರಿನ್ಸಿಪಾಲ್ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.

ಜೂನ್ 20 ರಂದು ಮಂಡ್ಯದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

ನವೀಕೃತ ನಾಲ್ವಡಿ ಕೃಷ್ಣ ರಾಜ ವೆಡಿಯರ್ ಐಟಿಐ ಕಾಲೇಜಿಗೆ ಭೇಟಿ ನೀಡುವಾಗ ಮಂಡ್ಯದ ಶಾಸಕ ಶ್ರೀನಿವಾಸ್ ಅವರು ಪ್ರಾಂಶುಪಾಲರಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಮಹಿಳೆ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಇತರ ಸ್ಥಳೀಯ ರಾಜಕಾರಣಿಗಳು ಘಟನೆಯನ್ನು ಆಘಾತದಿಂದ ನೋಡುತ್ತಿದ್ದರಷ್ಟೇ ಹೊರತು ಯಾರೂ ಶಾಸಕರನ್ನ ತಡೆಯುವ ಕೆಲಸ ಮಾಡಿಲ್ಲ.  ಶಾಸಕರ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

Share