Published
1 month agoon
ಪಾಟ್ನಾ: ಮೇ ೧೬ (ಯು.ಎನ್.ಐ.) ಬಿಹಾರ ಜೆಡಿಯು ಶಾಸಕರೊಬ್ಬರು ಸಮಾರಂಭದಲ್ಲಿ ಮಾಡಿದ ಸಭ್ಯತೆ ಎಲ್ಲೆ ದಾಟಿದ ನೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪಕ್ಷ ಸಹ ಎಚ್ಚರಿಕೆ ನೀಡಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷದ, ಬಿಹಾರ್ ಅಸೆಂಬ್ಲಿಯಲ್ಲಿ ಭಾಗಲ್ಪುರವನ್ನು ಪ್ರತಿನಿಧಿಸುವ ಶಾಸಕ ಗೋಪಾಲ್ ಮಂಡಲ್ ತಮ್ಮ ಕ್ಷೇತ್ರದಲ್ಲಿ, ಮದುವೆಯೊಂದರಲ್ಲಿ ಯುವತಿಯರೊಂದಿಗೆ ನೃತ್ಯ ಮಾಡುವಾಗ ಗಾಳಿಯಲ್ಲಿ ಮುತ್ತು ನೀಡಿ ನಗದು ಎಸೆಯುತ್ತಿರುವುದನ್ನು ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ಇದರಿಂದ ಮುಜುಗರಕ್ಕೀಡಾದ ಜನತಾ ದಳ ಯುನೈಟೆಡ್ ವರಿಷ್ಠರು ಈ ಶಾಸಕರಿಗೆ ತಮ್ಮ ಹುದ್ದೆಯ “ನಡವಳಿಕೆ” ಮತ್ತು “ಗೌರವವನ್ನು ಕಾಪಾಡಿಕೊಳ್ಳಿ” ಎಂದು ಹೇಳಿದ್ದಾರೆ ಎನ್ನಲಾಗಿದೆ
ಶಾಸಕ ಗೋಪಾಲ್ ಮಂಡಲ್ ಅವರು ತಮ್ಮ ಕುರ್ತಾವನ್ನು ಎತ್ತುವ ಮತ್ತು ನೃತ್ಯ ಮಾಡುತ್ತಿರುವ ಯುವತಿ ಕೈಗಳನ್ನು ಹಿಡಿದಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಬಿಹಾರದ ಭಾಗಲ್ಪುರ್ ಜಿಲ್ಲೆಯ ಫತೇಪುರ್ ಗ್ರಾಮದಲ್ಲಿ ನಡೆದ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಶಾಸಕರ ಚೇಷ್ಟೆಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಹಿಂದೆಯೂ ಇದೇ ರಿತಿ ಈ ಶಾಸಕ ನೃತ್ಯ ಮಾಡಿದ್ದರು ಎನ್ನಲಾಗಿದ್ದು ಆ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇದರ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ” ಹಾಡು ಕೇಳಿದಾಗಲೆಲ್ಲ ನೃತ್ಯ ಮಾಡುವ ಅನಿಯಂತ್ರಿತ ಪ್ರಚೋದನೆಗೆ ಒಳಗಾಗುತ್ತೇನೆ” ಎಂದು ಗೋಪಾಲ್ ಮಂಡಲ್ ಉತ್ತರಿಸಿದ್ದರು ಎನ್ನಲಾಗಿದೆ.
ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡೇಟು; ಸಿಸಿಕ್ಯಾಮೆರಾದಲ್ಲಿ ಕೃತ್ಯ ಸೆರೆ
ಸಿಧು ಮೂಸೆವಾಲಾರ ಕೊನೆಯ ಹಾಡನ್ನ ಯೂಟ್ಯೂಬ್ ನಿಂದ ತೆಗೆದುಹಾಕಿರೋದೇಕೆ?
ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ; ತೀಸ್ತಾ ಸೆತಲ್ವಾಡ್ ಪರ ವಿಶ್ವಸಂಸ್ಥೆ ಅಧಿಕಾರಿ ದನಿ
“ರಾಷ್ಟ್ರೀಯ ಭದ್ರತೆಗೆ ಡ್ರಗ್ಸ್ ದೊಡ್ಡ ಸವಾಲು” : ಷಾ
ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ