Published
4 months agoon
By
UNI Kannadaನವದೆಹಲಿ, ಜ ೧೭(ಯುಎನ್ ಐ) ಸಂಯುಕ್ತ ಜನತಾ ದಳ(ಜೆಡಿಯು) ಪಕ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ.
ಪಕ್ಷದ ರಾಷ್ಟ್ರೀಯ ವಕ್ತಾರ ಕೆ.ಸಿ. ತ್ಯಾಗಿ. ಈ ಕುರಿತು ಪ್ರತಿಕ್ರಿಯಿಸಿ ನಮ್ಮ ಪಕ್ಷದ ನಾಯಕರು ನಾಳೆ ಲಖನೌದಲ್ಲಿ ಸಭೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಸಂಬಂಧ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣೆಯನ್ನು ಜಂಟಿಯಾಗಿ ಎದುರಿಸಲು ಬಿಜೆಪಿಗೆ ೩೧ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿ(ಯು) ಸಲ್ಲಿಸಿತ್ತು. ಆದರೆ ನಮ್ಮ ಆಹ್ವಾನಕ್ಕೆ ಬಿಜೆಪಿ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜೆಡಿ(ಯು) ಏಕಾಂಗಿಯಾಗಿ ಕಣಕ್ಕಿಳಿಯುವುದರಿಂದ ಬಿಹಾರದಲ್ಲಿ ಬಿಜೆಪಿ-ಜೆಡಿ(ಯು) ಪಕ್ಷಗಳ ಮೈತ್ರಿಗೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತ್ಯಾಗಿ ಸ್ಪಷ್ಟಪಡಿಸಿದ್ದಾರೆ.
ದುರಹಂಕಾರವಲ್ಲ… ಅದು ವಿಶ್ವಾಸ: ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು
ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ ರಾಜೀವ್ ಗಾಂಧಿ
ಸಿಬಿಐ ದಾಳಿ ವೇಳೆ ಪಕ್ಷದ ಕಾರ್ಯಕರ್ತರಿಗೆ ಕಪಾಳಮೋಕ್ಷ ಮಾಡಿದ ಲಾಲು ಪತ್ನಿ
ಕೊನೆಗೂ ಸಿಕ್ತು ಜಾಮೀನು.. 2 ವರ್ಷದ ಬಳಿಕ ಜೈಲಿಂದ ಹೊರಬಂದ ಅಜಂಖಾನ್
ಸುನೀಲ್ ಜಖರ್ ಬಿಜೆಪಿಗೆ ಸೇರ್ಪಡೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಸಾಮೂಹಿಕ ನಾಯಕತ್ವ ಇಲ್ಲದೇ ಕಾಂಗ್ರೆಸ್ ಗೆಲ್ಲುವುದು ಸಾಧ್ಯವೇ ?