Connect with us


      




ಸಿನೆಮಾ

ಕ್ರಿಕೆಟ್ ಕಥಾಂಶವಿರುವ ಚಿತ್ರದಲ್ಲಿ ಜಾನ್ವಿಕಪೂರ್ – ಬಾಲಿವುಡ್ ಬ್ಯೂಟಿ ತರಬೇತಿಯಲ್ಲಿ ಬ್ಯುಸಿ

UNI Kannada

Published

on

ಜನೆವರಿ 26 (ಯು.ಎನ್.ಐ.)ಬಾಲಿವುಡ್ ಬೆಡಗಿ ಜಾನ್ವಿಕಪೂರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೋಸ್ತಾನಾ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಚಿತ್ರ ಮಿಸ್ಟರ್ ಅಂಡ್ ಮಿಸ್ ಮಹಿ ಸಿನಿಮಾ ಶೂಟಿಂಗ್ ಗೆ ರೆಡಿಯಾಗುತ್ತಿದ್ದಾರೆ. ಕ್ರಿಕೆಟ್ ಕಥಾಂಶವಿರುವ ಈ ಚಿತ್ರಕ್ಕಾಗಿ ಜಾನ್ವಿ ಕಪೂರ್ ತರಬೇತಿ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ರಿಕೆಟ್ ಶಿಬಿರದಲ್ಲಿ ತರಬೇತಿ ಪಡೆದ ಫೋಟೋಗಳು ಮತ್ತು ತಮ್ಮ ತಂಡದ ಫೋಟೋಗಳನ್ನು ಹಂಚಿಕೊಂಡರು.

‘ಕ್ರಿಕೆಟ್ ಕ್ಯಾಂಪ್ ಮಿಸ್ಟರ್ ಅಂಡ್ ಮಿಸ್ ಮಹಿ’ ಎಂದು ಶೀರ್ಷಿಕೆ ನೀಡಿದ್ದಾರೆ. ಅವರ ತಂಡವೂ ಫೋಟೋಗಳನ್ನು ಹಂಚಿಕೊಂಡಿದೆ. ಈ ಫೋಟೋಗಳು ಜಾನ್ವಿ ಕಪೂರ್ ಅವರ ಮುಂಬರುವ ಚಿತ್ರದ ನೋಟದಂತೆ ಭಾಸವಾಗುತ್ತಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ನಟಿಸಿದ್ದಾರೆ. ಇವರಿಬ್ಬರೂ ಈ ಹಿಂದೆ ರೂಹಿ ಸಿನಿಮಾದಲ್ಲಿ ನಟಿಸಿದ್ದರು. ಮಿಸ್ಟರ್ ಅಂಡ್ ಮಿಸ್ ಚಿತ್ರವನ್ನು ಶರಣ್ ಶರ್ಮಾ ನಿರ್ದೇಶಿಸಲಿದ್ದಾರೆ.

Share