Connect with us


      
ದೇಶ

ರಸ್ತೆಗಳನ್ನು ನಟಿ ಕಂಗನಾ ರಣಾವತ್ ಕೆನ್ನೆಗೆ ಹೋಲಿಸಿ ವಿವಾದಕ್ಕೆ ಸಿಲುಕಿದ ಕಾಂಗ್ರೆಸ್ ಶಾಸಕ

Published

on

ರಸ್ತೆಗಳನ್ನು ನಟಿ ಕಂಗನಾ ರಣಾವತ್ ಕೆನ್ನೆಗೆ ಹೋಲಿಸಿ ವಿವಾದಕ್ಕೆ ಸಿಲುಕಿದ ಕಾಂಗ್ರೆಸ್ ಶಾಸಕ

ಜಮ್ತಾರಾ: ಜನೆವರಿ 15 (ಯು.ಎನ್.ಐ.) ಜಾರ್ಖಂಡ್‍ನ ತಮ್ಮ ಕ್ಷೇತ್ರವಾದ ಜಮ್ತಾರಾದಲ್ಲಿ ರಸ್ತೆಗಳು ನಟಿ ಕಂಗನಾ ರಣಾವತ್ ಕೆನ್ನೆಗಿಂತ ಸುಂದರವಾಗಲಿದೆ ಎಂದು ಭರವಸೆ ನೀಡುವ ಮೂಲಕ ಕಾಂಗ್ರೆಸ್ ಶಾಸಕ ಡಾ ಇರ್ಫಾನ್ ಅನ್ಸಾರಿ ವಿವಾದಕ್ಕೆ ಸಿಲುಕಿದ್ದಾರೆ.

ಶುಕ್ರವಾರ ಪೆÇೀಸ್ಟ್ ಮಾಡಿದ ವೀಡಿಯೊದಲ್ಲಿ, ಡಾ ಇರ್ಫಾನ್ ಅನ್ಸಾರಿ, “ಜಮಾತಾರಾದಲ್ಲಿ 14 ವಿಶ್ವ ದರ್ಜೆಯ ರಸ್ತೆಗಳ ನಿರ್ಮಾಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಚಲನಚಿತ್ರ ನಟಿ ಕಂಗನಾ ರಣಾವತ್ ಅವರ ಕೆನ್ನೆಗಿಂತ ರಸ್ತೆಗಳು ಉತ್ತಮವಾಗಿರುತ್ತವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಡಾ ಇರ್ಫಾನ್ ಅನ್ಸಾರಿ, ದೀರ್ಘಕಾಲದವರೆಗೆ ಫೇಸ್ ಮಾಸ್ಕ್ ಧರಿಸಬಾರದು ಏಕೆಂದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಹೇಳಿದ್ದರು. ವೈದ್ಯರ ಮಾತುಗಳನ್ನು ಪ್ರಸ್ತಾಪಿಸಿದ ಶಾಸಕರು, ಮಾಸ್ಕ್‍ಗಳ ಅತಿಯಾದ ಮತ್ತು ದೀರ್ಘಕಾಲದವರೆಗೆ ಬಳಸಿದರೆ ಇಂಗಾಲದ ಡೈಆಕ್ಸೈಡ್‍ನಿಂದ ಉಸಿರಾಡಲು ಕಾರಣವಾಗುತ್ತದೆ ಎಂದು ಹೇಳಿದ್ದರು.

ನವೆಂಬರ್ 2021ರಲ್ಲಿ ಹೊಸದಾಗಿ ನೇಮಕಗೊಂಡ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಧಾ, ರಾಜ್ಯದ ರಸ್ತೆಗಳನ್ನು ನಟಿ ಕತ್ರಿನಾ ಕೈಫ್ ಕೆನ್ನೆಗಳಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ಕಳೆದ ತಿಂಗಳು, ಮಹಾರಾಷ್ಟ್ರದ ಸಚಿವ ಮತ್ತು ಹಿರಿಯ ಶಿವಸೇನೆ ನಾಯಕ ಗುಲಾಬ್ರಾವ್ ಪಾಟೀಲ್ ತಮ್ಮ ಕ್ಷೇತ್ರದ ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿ ರಾಜ್ಯ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾದ ಬಳಿಕ ಕ್ಷಮೆಯಾಚಿಸಿದ್ದರು.

ದೇಶ

ಗಣರಾಜ್ಯೋತ್ಸವ.. ನಾರಾಯಣ ಗುರುಗಳಿಗೆ ಅಪಮಾನ.. ಎಸ್ ಡಿ ಪಿ ಐ ಆಗ್ರಹ

Published

on

By

ಮಂಗಳೂರು, ಜ ೧೭ (ಯುಎನ್ ಐ) ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ರಾಜ್ಯವಾರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಪ್ರತಿಬಿಂಬಿಸುವ ಸ್ತಬ್ಧ ಚಿತ್ರ ಪ್ರದರ್ಶಿಸಲು ಅವಕಾಶ ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಆದರೆ, ಈ ಬಾರಿ ಗಣರಾಜ್ಯೋತ್ಸವಕ್ಕೆ ಕೇರಳ ಸರಕಾರ ಕಳಿಸಿಕೊಟ್ಟ ಸಮಾಜ ಸುಧಾರಕ, ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕರಿಸಿರುವ ಮೂಲಕ ನಾರಾಯಣ ಗುರುಗಳಿಗೆ, ಅವರ ಅನುಯಾಯಿಗಳಿಗೆ ಘೋರ ಅಪಮಾನ ಮಾಡಿದೆ ಎಂದು ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಹೇಳಿದ್ದಾರೆ.

ಕೇರಳದ (ಅಂದಿನ ಟ್ರಾವಂಕೂರ್ ಸಂಸ್ಥಾನ) ಜನಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇದ್ದಂತಹ ಈಳವ ಸಮುದಾಯ ಮೇಲ್ಜಾತಿಯವರ ಶ್ರೇಣೀಕೃತ ವ್ಯವಸ್ಥೆಯ ಕರಾಳ ನಿಯಂತ್ರಣದಿಂದ ಅತ್ಯಂತ ಅಮಾನವೀಯ, ಅಸ್ಪೃಶ್ಯತೆಯಿಂದ ಬಂಧಿಸಲ್ಪಟ್ಟು ಅವಮಾನಕರವಾದ ಬದುಕು ಸಾಗಿಸುತ್ತಿದ್ದ ಸಂದರ್ಭದಲ್ಲಿ ಹದಿನೆಂಟನೆಯ ಶತಮಾನದ ಮಧ್ಯ ಭಾಗದಲ್ಲಿ ಅಂದಿನ ಟ್ರವಾಂಕೂರ್ ಸಂಸ್ಥಾನದ ಚೆಂಪಝಂತಿ ಎಂಬ ಗ್ರಾಮದಲ್ಲಿ ಜನ್ಮತಾಳಿದ ನಾರಾಯಣ ಗುರುಗಳು ತಮ್ಮ ಎಪ್ಪತ್ತೆರಡು ವರ್ಷಗಳ ಸುಧೀರ್ಘ ಜೀವನದಲ್ಲಿ ಮಾಡಿದ ಕ್ರಾಂತಿಕಾರಿ ,ಮಾನವತಾವಾದಿ ಹೋರಾಟಗಳು , ಅವರು ಕೈಗೊಂಡ ಸುಧಾರಣಾವಾದಿ ಆಂದೋಲನಗಳು ಈಳವ (ಬಿಲ್ಲವ) ಸಮುದಾಯವನ್ನು ಹಂತ ಹಂತವಾಗಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಯಿತು.

.
ಸಂವಿದಾನಾತ್ಮಕವಾಗಿ ಆಯ್ಕೆ ಯಾದ ರಾಜ್ಯ ಸರಕಾರವೊಂದು ತನ್ನ ನೆಲದ ಇತಿಹಾಸ ಪುರುಷನ ಚರಿತ್ರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಕಳಿಸಿ ಕೊಟ್ಟ ಸ್ತಬ್ಧ ಚಿತ್ರವನ್ನು ನಿರಾಕರಿಸಿರುವುದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ದೋರಣೆ ಪ್ರತಿಬಿಂಬಿಸುತ್ತಿದೆ . ಇದರ ವಿರುದ್ಧ ದ್ವನಿಯೆತ್ತಬೇಕಾದ ನಾರಾಯಣ ಗುರುಗಳ ಅನುಯಾಯಿಗಳು ಸೇರಿದಂತೆ ಜಾತ್ಯಾತೀತ ಪಕ್ಷಗಳ ಮೌನ ದೇಶದ ಸಂವಿದಾನಕ್ಕೆ ಅಪಾಯಕಾರಿ ಆಗಲಿದೆ ಎಂದು ಕಳವಳವ್ಯಕ್ತಪಡಿಸಿದೆ.

ದೇಶದ ಸುಂದರ ಚರಿತ್ರೆ ಹಾಗೂ ಗತ ವೈಭವದ ಇತಿಹಾಸವನ್ನು ಬದಲಾಯಿಸಲು ಬಿಜೆಪಿ ಸರಕಾರ ಹೊರಟರೆ ಎಸ್ ಡಿ ಪಿ ಐ ಪಕ್ಷವು ಅದನ್ನು ಜನಾಂದೋಲನದ ಮೂಲಕ ಎದುರಿಸಲು ಸದಾ ಸನ್ನದ್ದ ವಾಗಿದೆ ಎಂದು ಸರಕಾರ ಅರಿತು ಕೊಳ್ಳಬೇಕಾಗಿದೆ ಜನವರಿ ೨೬ ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕೇರಳದ ಗುರು ನಾರಾಯಣ ಸ್ವಾಮಿಗಳ ಸ್ತಬ್ಧ ಚಿತ್ರ ಅಳವಡಿಸಲು ಸರಕಾರ ಅವಕಾಶ ಮಾಡಿಕೊಟ್ಟು ದಾರ್ಶನಿಕರ ಚರಿತ್ರೆಯನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಮಾಡಿ ಕೊಡಬೇಕು ಇದಕ್ಕಾಗಿ ರಾಜ್ಯದ ಎಲ್ಲ ಸಂಸದರು ಪ್ರಯತ್ನಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Continue Reading

ದೇಶ

ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

Published

on

ನವದೆಹಲಿ: ಜನೆವರಿ 17 (ಯು.ಎನ್.ಐ.) ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ನಾಯಕ ಮತ್ತು ಸಂಕೇತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ವೇಮುಲಾ ಅವರ ಪುಣ್ಯತಿಥಿಯಂದು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ರೋಹಿತ್ ವೇಮುಲಾ ಅವರು ದಲಿತರ ನ್ಯಾಯಕ್ಕಾಗಿ ಹಾಗೂ ಅವರ ಮೇಲಿನ ತಾರತಮ್ಯ ವಿರುದ್ಧ ದಿ ಎತ್ತಿದವರರು. ದಲಿತರ ಪರ ಮಾತನಾಡಿದ್ದಕ್ಕಾಗಿ ಹತ್ಯೆ ಮಾಡಲಾಗಿದೆ” ಎಂದು ಅವರು ಟ್ವಿಟರ್ ನಲ್ಲಿ ಹೇಳಿದ್ದಾರೆ.

“ವರ್ಷಗಳು ಕಳೆದರೂ, ರೋಹಿತ್ ವೇಮುಲ ಪ್ರತಿರೋಧದ ಸಂಕೇತವಾಗಿ ಮತ್ತು ಅವನ ಧೈರ್ಯಶಾಲಿ ತಾಯಿಯ ಭರವಸೆಯ ಸಂಕೇತವಾಗಿ ಉಳಿಯುತ್ತಾನೆ. ದಲಿತರ ನ್ಯಾಯಕ್ಕಾಗಿ ಕೊನೆಯವರೆಗೂ ಹೋರಾಡಿದ್ದಕ್ಕಾಗಿ, ರೋಹಿತ್ ನನ್ನ ನಾಯಕ, ಅನ್ಯಾಯಕ್ಕೊಳಗಾದ ನನ್ನ ಸಹೋದರ” ಎಂದು ಗಾಂಧಿ ಹೇಳಿದರು.

ಹೈದರಾಬಾದ್ ವಿಶ್ವವಿದ್ಯಾನಿಲಯದ 26 ವರ್ಷದ ದಲಿತ ವಿದ್ಯಾರ್ಥಿ ವೇಮುಲಾ ಅವರು ಕಿರುಕುಳದ ಆರೋಪದ ಮೇಲೆ ಜನವರಿ 17, 2016 ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಮರಣವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತೀಯತೆಯ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಚೋದಿಸಿತು.

Continue Reading

ದೇಶ

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

Published

on

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ ಮಾಡಿಕೊಡುವಂತೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ನಂತರ ಫೆಬ್ರವರಿ 14ರಂದು ನಿಗದಿಯಾಗಿದ್ದ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ “ಪಂಜಾಬ್‌ನ ಜನಸಂಖ್ಯೆಯ ಶೇಕಡಾ 32ರಷ್ಟು ಪರಿಶಿಷ್ಟ ಜಾತಿಗಳ ಸಮುದಾಯದ ಪ್ರತಿನಿಧಿಗಳು ತಮ್ಮನ್ನು ಭೇಟಿ ಮಾಡಿದ್ದರು. ಗುರು ರವಿದಾಸ್ ಅವರ ಜನ್ಮದಿನದ ಅಂಗವಾಗಿ ಫೆಬ್ರವರಿ 10ರಿಂದ 16ರವರೆಗೆ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡುತ್ತೇವೆ. ಹೀಗಾಗಿ ತಮಗೆ ವೋಟ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮನವಿ ಮಾಡಿದ್ದರು. ಹೀಗಾಗಿ ಚುನಾವಣಾ ಆಯೋಗ ಪೂರ್ವ ನಿಗದಿ ಮಾಡಿದ್ದ ಫೆಬ್ರವರಿ 14ರ ಚುನಾವಣೆಯನ್ನು 6 ದಿನಗಳ ಕಾಲ ಮುಂದೂಡಬೇಕಂದು” ಸಿಎಂ ಚನ್ನಿ ಮನವಿ ಮಾಡಿದ್ದರು.
ಪಂಜಾಬ್ ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ಇಂದು ಚುನಾವಣಾ ಆಯೋಗ ಸಭೆ ನಡೆಸಿತ್ತು. ಸಭೆ ಬಳಿಕ ಮಾಹಿತಿ ನೀಡಿದ ಚುನಾವಣಾ ಅಧಿಕಾರಿಗಳು, “ಪಂಜಾಬ್ ಸರ್ಕಾರ ಮತ್ತು ಇತರ ಸಂಘಟನೆಗಳು ಚುನಾವಣೆಯನ್ನು ಮುಂದೂಡುವಂತೆ ಕೋರಿದ್ದವು.” ಗುರು ರವಿದಾಸ್ ಜನ್ಮದಿನದ ಅಂಗವಾಗಿ ಹೆಚ್ಚಿನ ಭಕ್ತರು ವಾರಣಾಸಿಗೆ ಭೇಟಿ ನೀಡುತ್ತಾರೆ. ಫೆಬ್ರವರಿ 14ರಂದು ಮತದಾನದ ದಿನವನ್ನು ಇಟ್ಟುಕೊಳ್ಳುವುದರಿಂದ ಹೆಚ್ಚಿನ ಸಂಖ್ಯೆಯ ಮತದಾರರು ಮತದಾನದಿಂದ ವಂಚಿತರಾಗುತ್ತಾರೆ” ಎಂದು ಗಮನಕ್ಕೆ ತಂದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿತು.
ರಾಜಕೀಯ ಪಕ್ಷಗಳು ಹಾಗೂ ಪಂಜಾಬ್ ಸರ್ಕಾರದ ಮನವಿ ಮೇರೆಗೆ ಚುನಾವಣೆ ದಿನಾಂಕವನ್ನು ಫೆಬ್ರವರಿ 14ರ ಬದಲಾಗಿ ಫೆಬ್ರವರಿ 20ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

Continue Reading
Advertisement
ದೇಶ44 seconds ago

ಗಣರಾಜ್ಯೋತ್ಸವ.. ನಾರಾಯಣ ಗುರುಗಳಿಗೆ ಅಪಮಾನ.. ಎಸ್ ಡಿ ಪಿ ಐ ಆಗ್ರಹ

ಮಂಗಳೂರು, ಜ ೧೭ (ಯುಎನ್ ಐ) ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ರಾಜ್ಯವಾರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಪ್ರತಿಬಿಂಬಿಸುವ ಸ್ತಬ್ಧ ಚಿತ್ರ ಪ್ರದರ್ಶಿಸಲು ಅವಕಾಶ ನೀಡುವುದು...

ದೇಶ9 mins ago

ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

ನವದೆಹಲಿ: ಜನೆವರಿ 17 (ಯು.ಎನ್.ಐ.) ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ನಾಯಕ ಮತ್ತು ಸಂಕೇತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ವೇಮುಲಾ...

ಕರ್ನಾಟಕ36 mins ago

ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದ ಒಮೈಕ್ರಾನ್!

ಬೆಂಗಳೂರು: ಜನೆವರಿ 17 (ಯು.ಎನ್.ಐ) ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ ಬರೋಬ್ಬರಿ 287 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ತೀವ್ರ ನಿಗಾದ ಮಧ್ಯೆಯೇ ಒಮೈಕ್ರಾನ್ ಪ್ರಕರಣಗಳು...

ದೇಶ49 mins ago

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ...

ದೇಶ51 mins ago

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು...

ಸಿನೆಮಾ1 hour ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ1 hour ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ1 hour ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ2 hours ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು2 hours ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ಟ್ರೆಂಡಿಂಗ್

Share