Published
2 weeks agoon
By
Vanitha Jainಅಹಮದಾಬಾದ್: ಜೂನ್ 23 (ಯು.ಎನ್.ಐ.) ಬನಸ್ಕಾಂತ ಜಿಲ್ಲೆಯ ಸಾವಿರಾರು ಜನರು ಸೇನೆಯಿಂದ ನಿವೃತ್ತರಾಗಿದ್ದಾರೆ. ಇಂತಹ ಸೇನಾ ಯೋಧರಿಗೆ ಎಷ್ಟು ಭೂಮಿ ಮಂಜೂರು ಮಾಡಲಾಗಿದೆ? ಎಂದು ಶಾಸಕ ಜಿಗ್ನೇಶ್ ಮೇವಾನಿ ಪ್ರಶ್ನೆ ಮಾಡಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಸರ್ಕಾರಿ ಯೋಜನೆಯನ್ನು ಪ್ರಾರಂಭಿಸಲು ವಡ್ಗಾಮ್ ನ ಮಹಮದ್ಪುರ ಗ್ರಾಮಕ್ಕೆ ಬರುವ ಒಂದು ದಿನದ ಮೊದಲು ಈ ಪ್ರಶ್ನೆ ಎತ್ತಿದ್ದಾರೆ.
ಕೇಂದ್ರದ ಅಗ್ನಿಪಥ್ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ ಅವರು, ಮಹ್ಮದಪುರ ಗ್ರಾಮದ ಯುವಕರು ಕೂಡ ಸಶಸ್ತ್ರ ಪಡೆಗಳಿಗೆ ಸೇರುವ ಸಂಸ್ಕೃತಿಯನ್ನು ಹೊಂದಿದೆ ಎಂದು ಮೇವಾನಿ ಹೇಳಿದ್ದಾರೆ.
ನೀವು (ಬಿಜೆಪಿ) ಸೇನೆಯ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಇಂತಹ ಸಾವಿರಾರು ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿರುವಾಗ, ಅಗ್ನಿಪಥ್ ಯೋಜನೆಯ ಬಗ್ಗೆ ಮಹಮದಪುರದ ಜನರಿಗೆ ನೀವು ಯಾವ ಸಂದೇಶವನ್ನು ನೀಡುತ್ತೀರಿ? ಅದನ್ನು ಸ್ಪಷ್ಟಪಡಿಸಿ ಎಂದು ಮೇವಾನಿ ವಿಡಿಯೋದಲ್ಲಿ ಕೇಳಿದ್ದಾರೆ.
ಬನಸ್ಕಾಂತ ಜಿಲ್ಲೆಯ ಸಾವಿರಾರು ಜನರು ಸೇನೆಯಿಂದ ನಿವೃತ್ತರಾಗಿದ್ದಾರೆ. ಇಂತಹ ಸೇನಾ ಯೋಧರಿಗೆ ಎಷ್ಟು ಭೂಮಿ ಮಂಜೂರು ಮಾಡಲಾಗಿದೆ? ಅಂಥವರಿಗೆ ಎಷ್ಟು ಭೂಮಿ ಮಂಜೂರು ಮಾಡಲು ಸರ್ಕಾರ ಸಿದ್ಧವಿದೆಯೇ ಎಂಬುದನ್ನು ಸ್ಪಷ್ಟಪಡಿಸಿ,’’ ಎಂದು ಕೇಳಿದರು.
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ಬಂಧನ; ಜರ್ಮನಿ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಕೇಂದ್ರ
ಚೀನಾದ ಕಂಪನಿಗಳು ಭಾರತದ ಕಾನೂನು ಪಾಲಿಸಬೇಕು: ವಿದೇಶಾಂಗ ಸಚಿವಾಲಯ
ಶೀಘ್ರದಲ್ಲೇ ವಾಣಿಜ್ಯ ಹಾರಾಟ ನಡೆಸಲಿದೆ ‘ಆಕಾಶ ಏರ್’
ಫೋನ್ ಹಿಂತಿರುಗಿಸಲು ನಿರಾಕರಿಸಿದ್ದಕ್ಕೆ ಸ್ನೇಹಿತನ ಕೊಂದ ಪಾಪಿ
ಹಿಂದೂ ವ್ಯಕ್ತಿಯ ಅಂತಿಮ ವಿಧಿವಿಧಾನ ನೆರವೇರಿಸಿದ ಮುಸ್ಲಿಂ ಕುಟುಂಬ
ವಿವಾಹ ಜೀವನಕ್ಕೆ ಕಾಲಿರಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್