Connect with us


      
ದೇಶ

ಕಾಶ್ಮೀರದಲ್ಲಿ ಹಿಮಪಾತ… 37 ವಿಮಾನಗಳ ಸೇವೆ ರದ್ದು

UNI Kannada

Published

on

ಶ್ರೀನಗರ, ಜ 6(ಯುಎನ್‌ ಐ) ಜಮ್ಮು – ಕಾಶ್ಮೀರದಾದ್ಯಂತ ಭಾರೀ ಹಿಮಪಾತದಿಂದಾಗಿ 3 7 ವಿಮಾನಗಳ ಸೇವೆ ರದ್ದುಗೊಳಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಅಧಿಕಾರಿಗಳು ತಿಳಿಸಿದ್ದಾರೆ. ಹಿಮಪಾತದಿಂದಾಗಿ ಬೆಳಕಿನ ಕೊರತೆ ಕಾರಣ ಶ್ರೀನಗರದಿಂದ ಹಲವಾರು ನಗರಗಳಿಗೆ ಹೋಗುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರದಿಂದ 42 ವಿಮಾನಗಳು ಹಾರಾಟ ನಡೆಸಲು ವೇಳಾಪಟ್ಟಿ ನಿಗದಿಯಾಗಿತ್ತು. ಈ ಪೈಕಿ 37 ರದ್ದಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ .ರದ್ದತಿಯಿಂದಾಗಿ ನೂರಾರು ಪ್ರಯಾಣಿಕರು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.

” ಹಿಮಪಾತದಿಂದಾಗಿ ವಿಮಾನ ಹಾರಾಟಗಳನ್ನು ಅಡ್ಡಿಪಡಿಸಿದೆ, ನಿಗದಿತ 42 ವಿಮಾನಗಳ ಪೈಕಿ ಐದು ಮಾತ್ರ ಹಾರಾಟ ನಡೆಸಿವೆ … 37 ವಿಮಾನಗಳನ್ನು ರದ್ದುಗೊಳಿಸಲಾಗಿದೆ” ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದಾರೆ. ವಿಮಾನ ಸೇವೆಗಳನ್ನು ರದ್ದುಗೊಳಿಸುವುದರೊಂದಿಗೆ ಪ್ರವಾಸಿಗರು ಶ್ರೀನಗರದಲ್ಲಿ ಉಳಿಯಬೇಕಾಗಿದ್ದು, ಅವ್ಯವಸ್ಥೆ ಉಂಟಾಗಿದೆ.

Share