Connect with us


      
ವಿದೇಶ

ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡ ಜೋ ಬೈಡನ್!

Iranna Anchatageri

Published

on

ವಾಷಿಂಗ್ಟನ್: ಜನೆವರಿ 25 (ಯು.ಎನ್.ಐ.) ಹಣದುಬ್ಬರ ಕುರಿತು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಾಳ್ಮೆ ಕಳೆದುಕೊಂಡು ನಿಂದಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯ ನಂತರ ಪತ್ರಕರ್ತರು ಕೊಠಡಿಯಿಂದ ಹೊರಬರುತ್ತಿದ್ದಾಗ ‘ಫಾಕ್ಸ್ ನ್ಯೂಸ್’ ನ ವರದಿಗಾರ ಅಧ್ಯಕ್ಷರನ್ನು ಹಣದುಬ್ಬರವು ರಾಜಕೀಯ ಹೊಣೆಗಾರಿಕೆಯೇ ಎಂದು ಪ್ರಶ್ನೆ ಮಾಡಿದ್ರು. ಇದರಿಂದ ಆಕ್ರೋಶಗೊಂಡ ಅಧ್ಯಕ್ಷ ಬೈಡನ್ ಕೆಟ್ಟದಾಗಿ ನಿಂದನೆ ಮಾಡಿದ್ದಾರೆ.

ತಮ್ಮ ಮೈಕ್ರೋಫೋನ್ ಆಫ್ ಆಗಿದೆ ಎಂದುಕೊಂಡಿದ್ದ ಜೋ ಬೈಡನ್, ಮೊದಲೇ ಪತ್ರಕರ್ತರ ಪ್ರಶ್ನೆಗೆ ಉದ್ವೇಗಕ್ಕೆ ಒಳಗಾಗಿದ್ದರು. ಈ ವೇಳೆ ಫಾಕ್ಸ್ ನ್ಯೂಸ್ ನ ವರದಿಗಾರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ “ಹಣದುಬ್ಬರ ಅನ್ನೋದು ದೊಡ್ಡ ಆಸ್ತಿಯೇ” ಎಂದು ಕಿಡಿಕಾರಿದ್ದಾರೆ. ಬಳಿಕ ಕೆಳಗೆ ನೋಡುತ್ತಾ ಅಶ್ಲಿಲವಾಗಿ (“What a stupid son of a b*tch.”) ಬೈದಿದ್ದಾರೆ . ಇದು ಕ್ಯಾಮೆರಾ ವಿಡಿಯೋದೊಂದಿಗೆ ರಿಕಾರ್ಡ್ ಸಹ ಆಗಿದೆ.

ಈ ರೀತಿಯಾಗಿ ಅಮೆರಿಕದ ಅಧ್ಯಕ್ಷ ಮಾತನಾಡಿದಾಗ ಫಾಕ್ಸ್ ನ್ಯೂಸ್ ಪತ್ರಕರ್ತ ಪೀಟರ್ ಡೋಸ್ಸಿ ಕೂಡ ಅದೇ ಕೋಣೆಯಲ್ಲಿದ್ದರು. ಆದರೆ ಕೊಠಡಿಯಲ್ಲಿ ಗದ್ದಲವಿದ್ದ ಕಾರಣ ಅಧ್ಯಕ್ಷರು ಏನು ಹೇಳಿದ್ರೂ ಕೇಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಆದರೆ, ಹಣದುಬ್ಬರ ವಿಚಾರದಲ್ಲಿ ಜೋ ಬೈಡನ್ ಪ್ರತಿಕ್ರಿಯೆ ಏನೆಂಬುದನ್ನು ತಿಳಿಯಬೇಕಾದರೆ ಈ ವಿಡಿಯೋ ನೋಡಬಹುದಾಗಿದೆ ಎಂದು ಪತ್ರಕರ್ತರು ಹೇಳಿದ್ದಾರೆ.

Share