Connect with us


      
ಸಾಮಾನ್ಯ

ಐಪಿಎಲ್ 2022: ಎರಡು ಶತಕ ಬಾರಿಸಿದ ಆರನೇ ಆಟಗಾರ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್

Vanitha Jain

Published

on

ಮುಂಬೈ: ಏಪ್ರಿಲ್ 18 (ಯು.ಎನ್.ಐ.) ಐಪಿಎಲ್ 2022 ರ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎರಡನೇ ಶತಕ ಬಾರಿಸಿದ್ದು, ಇದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಟ್ಲರ್ ಅವರ ಮೂರನೇ ಶತಕವಾಗಿದೆ. 2021 ರಲ್ಲಿ 124 ರನ್ ಗಳಿಸಿದ್ದರು.

ಈ ದಿನದ ಶತಕದ ಮೂಲಕ ಜೋಸ್ ಬಟ್ಲರ್ ಅವರು, ವಿರಾಟ್ ಕೊಹ್ಲಿ, ಶಿಖರ್ ಧವನ್, ಹಾಶೀಮ್ ಆಮ್ಲಾ, ಶೇನ್ ವ್ಯಾಟ್ಸನ್ ಮತ್ತು ಕ್ರಿಸ್ ಗೇಲ್ ನಂತರ ಒಂದೇ ಐಪಿಎಲ್ ಸೀಸನ್ ನಲ್ಲಿ ಸೆಂಚುರಿ ಬಾರಿಸಿದ ಆರನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

2016 ರಲ್ಲಿ, ಆರ್ ಸಿಬಿ ನ ಕೊಹ್ಲಿ ಅವರು 973 ರನ್ ಮತ್ತು 4 ಶತಕಗಳನ್ನು ಪೇರಿಸುವ ಮೂಲಕ ಹಲವಾರು ದಾಖಲೆಗಳನ್ನು ಮುರಿದಿದ್ದರು. 2011ರಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಕ್ರಿಸ್ ಗೇಲ್ 15 ದಿನಗಳ ಅವಧಿಯಲ್ಲಿ ಎರಡು ಶತಕ ಬಾರಿಸಿದ್ದರು. ಹಾಶಿಮ್ ಆಮ್ಲಾ 2017 ರಲ್ಲಿ ಮತ್ತು ಶೇನ್ ವ್ಯಾಟ್ಸನ್ 2018 ರಲ್ಲಿ ಶತಕ ಬಾರಿಸಿದ್ದರು.

2020 ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಫೈನಲ್‌ಗೆ ನುಗ್ಗುತ್ತಿದ್ದಂತೆ ಶಿಖರ್ ಧವನ್ ಎರಡು ಶತಕಗಳನ್ನು ಸಿಡಿಸಿದ್ದರು. ಜೋಸ್ ಬಟ್ಲರ್ ಈಗ 16 ದಿನಗಳಲ್ಲಿ ಎರಡು ಶತಕಗಳನ್ನು ಹೊಡೆದಿದ್ದಾರೆ. ಈ ಎರಡು ಶತಕಗಳ ನಡುವೆ ಜೋಸ್ ಅವರು ಕಳೆದ ಪಂದ್ಯಗಳಲ್ಲಿ ಔಟಾಗದೆ 70 ಮತ್ತು 54 ರನ್ ಗಳಿಸಿದ್ದರು.

14 ವರ್ಷಗಳ ಹಿಂದೆ ಏಪ್ರಿಲ್ 18, 2008 ರಂದು, ಬ್ರೆಂಡನ್ ಮೆಕಲಮ್ ಮೊದಲ ಬಾರಿಗೆ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಕೆಕೆಆರ್ ಪರ 158 ರನ್ ಗಳಿಸಿದರು.

Share